ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ(Yathindra Siddaramaiah) ಅವರೇ ನಮ್ಮ ಹೈಕಮಾಂಡ್ ಎನ್ನುವ ಮೂಲಕ ಶಾಸಕ ಗಣಿಗ ರವಿಕುಮಾರ್(MLA Ganiga Ravi Kumar) ವ್ಯಂಗ್ಯವಾಡಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗಣಿಗ ರವಿಕುಮಾರ್, ಯತೀಂದ್ರ ನಮ್ಮ ಹೈಕಮಾಂಡ್ ಅಂತ ಡಿಕೆ ಸಾಹೇಬರು ಹೇಳಿದ್ದಾರೆ. ನಮ್ಮ ಹೈಕಮಾಂಡ್ ಯತೀಂದ್ರ ಸಿದ್ದರಾಮಯ್ಯ. 100% ಯತೀಂದ್ರ ಸಿದ್ದರಾಮಯ್ಯ ನಮ್ಮ ಹೈಕಮಾಂಡ್ ಅಂತ ಒಪ್ಪಿಕೊಳ್ಳುತ್ತೇವೆ. ಅವರು ಪವರ್ ಫುಲ್ ಮ್ಯಾನ್. ಸಿಎಂ ವಿಚಾರವಾಗಿ ಯಾರೂ ಹೇಳಿಕೆ ಕೊಡಬಾರದು ಎನ್ನುವ ಸೂಚನೆ ಇದೆ. ಆದರೂ ಅವರು ಕೊಡುತ್ತಿದ್ದಾರೆ ಅಂದರೆ ಅವರೇ ಸುಪ್ರೀಂ ಎಂದು ವ್ಯಂಗ್ಯವಾಡಿದರು.

ಡಿಕೆ ಶಿವಕುಮಾರ್ ರಾಜಕೀಯ ತಂತ್ರಗಾರಿಕೆಯಲ್ಲಿ ಚಾಣಾಕ್ಷರು
ಇದೇ ವೇಳೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (D. K. Shivakumar) ಅವರನ್ನು ಬೆಂಬಲಿಸಿ ಮಾತನಾಡಿ, ʼ . ಕಾಲ ಬಂದಾಗ ಸಿಎಂ ಬದಲಾವಣೆ ಆಗಬೇಕು. ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ. ಅವರು ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲʼ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ʼ40 ವರ್ಷಗಳಿಂದ ರಾಜಕಾರಣದಲ್ಲಿ ಅನುಭವ ಹೊಂದಿರುವ ಡಿ.ಕೆ ಶಿವಕುಮಾರ್ ರಾಜಕೀಯ ತಂತ್ರಗಾರಿಕೆಯಲ್ಲಿ ಚಾಣಾಕ್ಷರು. ಅವರು ಸೈಲೆಂಟ್ ಆಗಿ ಕಾಯಿನ್ ಮೂವ್ ಮಾಡುತ್ತಿದ್ದಾರೆ ಅಂದರೆ ಗೇಮ್ ಗೆಲ್ಲುತ್ತಾರೆ. 136 ಜನ ಆಟಗಾರರು ಅವರ ಪರ ಇದ್ದೇವೆʼ ಎಂದು ಹೇಳಿದರು.






