• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, February 10, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯಕ್ಕೆ ಅನುಮತಿ : ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು..?

ಪ್ರತಿಧ್ವನಿ by ಪ್ರತಿಧ್ವನಿ
February 9, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಶೋಧ
0
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯಕ್ಕೆ ಅನುಮತಿ : ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು..?
Share on WhatsAppShare on FacebookShare on Telegram

ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಬುಧವಾರ ಹಿರಿಯ ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಜೊತೆ ಮಹತ್ವದ ಸಭೆ ನಡೆಸುತ್ತೇನೆ ಎಂದು ಗೃಹ ಇಲಾಖೆ ಸಚಿವ ಡಾ. ಜಿ ಪರಮೇಶ್ವರ್‌ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಕರ್ನಾಟಕ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್‌ ಪ್ರಸಾದ್‌, ವಕ್ತಾರರಾದ ವಿನಯ್‌ ಕುಮಾರ್‌ ಹಾಗೂ ಸಂಸ್ಥೆಯ ಪದಾಧಿಕಾರಿಗಳು, ಆರ್‌ಸಿಬಿಯ ಪ್ರತಿನಿಧಿಗಳು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಐಪಿಎಲ್‌ ವಿಚಾರದಲ್ಲಿ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ಆಯೋಗದ ಶಿಫಾರಸುಗಳನ್ನು ಯಾವ ಮಟ್ಟಿಗೆ ಈಡೇರಿಸಲಾಗಿದೆ, ಅಳವಡಿಕೆ ಮಾಡಿಕೊಂಡಿರುವ ಸುರಕ್ಷತಾ ಕ್ರಮಗಳೇನು ಎಂಬುದನ್ನು ಸಭೆಯಲ್ಲಿ ಪರಿಶೀಲಿಸಲಾಗುವುದು. ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು. ಜನಸಾಮಾನ್ಯರ ಅಭಿಪ್ರಾಯದಂತೆ ಬೆಂಗಳೂರಿನಲ್ಲಿ ಕ್ರಿಕೆಟ್‌ ಪಂದ್ಯಾವಳಿಗಳು ನಡೆಯಬೇಕು ಎಂಬುದು ನಮ ಆಸಕ್ತಿ ಕೂಡ ಆಗಿದೆ. ಆದರೆ ಇದರ ನಡುವೆ ಸುರಕ್ಷತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

MP Shashi Tharoor : ಲೋಕಸಭಾ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ: ಶಶಿ ತರೂರ್ ಏನಂದ್ರು #pratidhvani

ಆರ್‌ಸಿಬಿಯು ಈ ಹಿಂದೆ ಆಯೋಜಿಸಿದ್ದ ಐಪಿಎಲ್‌ನ ಕಪ್‌ ವಿಜಯೋತ್ಸವದ ವೇಳೆಯಲ್ಲಿ ಕಾಲ್ತುಳಿತದಲ್ಲಿ 11 ಜನರ ಜೀವಹಾನಿಯಾಗಿದೆ. ಆ ಪ್ರಕರಣದ ತನಿಖೆಗೆ ನೇಮಕ ಮಾಡಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಮೈಕಲ್‌ ಕುನ್ಹಾ ನೇತೃತ್ವದ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅವರ ನೇತೃತ್ವದ ನ್ಯಾಯಾಂಗ ಸಮಿತಿಯ ವರದಿ ಆಧರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಕ್ರಿಕೆಟ್‌ ಸಂಸ್ಥೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಇನ್ನೂ ಇದೇ ವಿಚಾರದಲ್ಲಿ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲನೆ ನಡೆಸಲು ಗ್ರೇಟರ್‌ ಬೆಂಗಳೂರು ಮುಖ್ಯ ಆಯುಕ್ತರಾದ ಮಹೇಶ್ವರರಾವ್‌, ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿದಂತೆ ಹಿರಿಯ ಅಧಿಕಾರಿಗಳ ಸಮಿತಿಯು ಕಾರ್ಯ ಮಾಡುತ್ತಿದೆ. ಆ ಸಮಿತಿಯವರು ಅವರು ಕಾಲಕಾಲಕ್ಕೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸುಮಾರು 18 ಅಂಶಗಳನ್ನು ಅನುಷ್ಠಾನಗೊಳಿಸಲು ಸೂಚನೆ ನೀಡಲಾಗಿದೆ ಎಂದು ಪರಮೇಶ್ವರ್‌ ಮಾಹಿತಿ ನೀಡಿದ್ದಾರೆ.

Dk Shivakumar on Metro: ಬಿಜೆಪಿ ಸಂಸದರ ಅರೋಪಗಳಿಗೆ ಖಡಕ್ ಕೌಂಟರ್ ಕೊಟ್ಟ ಡಿಕೆ #pratidhvani

ಈ ಬೆಳವಣಿಗೆಯ ನಡುವೆಯೇ ಐಪಿಎಲ್‌ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿಗಳು ಸನೀಹದಲ್ಲಿವೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ನಡೆಸಲು ಪೊಲೀಸ್‌‍ ಇಲಾಖೆಯ ಪೂರ್ವ ಅನುಮತಿ ದೊರೆಯಬೇಕು. ಅಂದಾಗ ಮಾತ್ರ ಪಂದ್ಯಗಳ ವೇಳಾಪಟ್ಟಿಯಲ್ಲಿ ಬೆಂಗಳೂರು ಸೇರ್ಪಡೆಯಾಗುತ್ತದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ. ಇದೇ ಕಾರಣಕ್ಕಾಗಿ ನಾನು ಬಿಬಿಎಂಪಿ ಮತ್ತು ಪೊಲೀಸ್‌‍ ಇಲಾಖೆಯ ಆಯುಕ್ತರು ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಬುಧವಾರ ಚರ್ಚೆ ಮಾಡುತ್ತೇನೆ. ಬಳಿಕ ಮುಖ್ಯಮಂತ್ರಿಯವರ ಜೊತೆಯೂ ಚರ್ಚೆ ನಡೆಸಲಾಗುವುದು ಎಂದು ಪರಮೇಶ್ವರ್‌ ಹೇಳಿದ್ದಾರೆ.

Tags: bengaluruChinnaswamy StadiumChinnaswamy StampadeDr. G ParameshwarINCIPSMichel KunhaParameshwarRCBRCB MatchSeemanth kumar singhVenkatesh PrasadVinay Kumar
Previous Post

ಸಂಸತ್‌ನಲ್ಲಿ ಸುಧಾ ಮೂರ್ತಿಯ ಶ್ಲೋಕಪಾಠಕ್ಕೆ ಎಲ್ಲರ ಗಮನ ಸೆಳೆಯಿತು

Next Post

ICCT20WC: ಇಟಲಿ ಮಣಿಸಿದ ಸ್ಕಾಟ್ಲೆಂಡ್‌ಗೆ ರೋಚಕ ಗೆಲುವು..!

Related Posts

ಉಚಿತ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್‌
Top Story

ಉಚಿತ ಸ್ಪೆಷಲ್‌ ಇ ಖಾತಾ ಅಭಿಯಾನ ಪ್ರಾರಂಭ: ಡಿಸಿಎಂ ಡಿ.ಕೆ. ಶಿವಕುಮಾರ್‌

by ಪ್ರತಿಧ್ವನಿ
February 10, 2026
0

25 ಲಕ್ಷ ಆಸ್ತಿಗಳ ಡಿಜಿಟಲೀಕರಣ, 9 ಲಕ್ಷ ಇ ಖಾತೆಗಳ ಹಂಚಿಕೆ, : ಡಿಸಿಎಂ ಡಿ.ಕೆ. ಶಿವಕುಮಾರ್‌. “ಬೆಂಗಳೂರು ನಗರದಾದ್ಯಂತ ಇದುವರೆಗೂ 25 ಲಕ್ಷ ಆಸ್ತಿಗಳನ್ನು ಡಿಜಿಟಲೀಕರಣ...

Read moreDetails
ದುಷ್ಕರ್ಮಿಗಳ ಗುಂಡಿಗೆ ಕನ್ನಡಿಗನ ಬ**ಲಿ : ಕೇಂದ್ರ ಸಚಿವ ಸೋಮಣ್ಣ ಸಂತಾಪ..!

ದುಷ್ಕರ್ಮಿಗಳ ಗುಂಡಿಗೆ ಕನ್ನಡಿಗನ ಬ**ಲಿ : ಕೇಂದ್ರ ಸಚಿವ ಸೋಮಣ್ಣ ಸಂತಾಪ..!

February 10, 2026
ಪ್ರಧಾನಿ ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸದಿರುವುದು ಹೇಡಿತನ : ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

ಪ್ರಧಾನಿ ಸಂಸತ್ತಿನ ಚರ್ಚೆಯಲ್ಲಿ ಭಾಗವಹಿಸದಿರುವುದು ಹೇಡಿತನ : ಮೋದಿ ವಿರುದ್ಧ ಗುಡುಗಿದ ಸಿದ್ದರಾಮಯ್ಯ

February 10, 2026
Daily Horoscope February 10: ಇಂದು ಅತೀ ಎಚ್ಚರದಿಂದ ಇರಬೇಕಾದ ರಾಶಿಗಳಿವು..!

Daily Horoscope February 10: ಇಂದು ಅತೀ ಎಚ್ಚರದಿಂದ ಇರಬೇಕಾದ ರಾಶಿಗಳಿವು..!

February 10, 2026
ಶರದ್‌ ಪವಾರ್‌  ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು : ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ..!

ಶರದ್‌ ಪವಾರ್‌ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು : ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ..!

February 9, 2026
Next Post
ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯಕ್ಕೆ ಅನುಮತಿ : ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು..?

ICCT20WC: ಇಟಲಿ ಮಣಿಸಿದ ಸ್ಕಾಟ್ಲೆಂಡ್‌ಗೆ ರೋಚಕ ಗೆಲುವು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada