• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, February 11, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ: ಸಚಿವ ಕೆ.ಜೆ.ಜಾರ್ಜ್

ಸರ್ವಜ್ಞನಗರ ಕ್ಷೇತ್ರದಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ, ಶಾಲಾ ಕೊಠಡಿ ಉದ್ಘಾಟನೆ

ಪ್ರತಿಧ್ವನಿ by ಪ್ರತಿಧ್ವನಿ
February 6, 2026
in Top Story, ಕರ್ನಾಟಕ, ಕ್ರೀಡೆ, ಜೀವನದ ಶೈಲಿ, ರಾಜಕೀಯ, ವಿಶೇಷ
0
ಕೆಪಿಟಿಸಿಎಲ್ ಥೀಮ್ ಪಾರ್ಕ್ ಕಾಮಗಾರಿ ಶೀಘ್ರದಲ್ಲೇ ಪೂರ್ಣ: ಸಚಿವ ಕೆ.ಜೆ.ಜಾರ್ಜ್
Share on WhatsAppShare on FacebookShare on Telegram

ADVERTISEMENT

ಬೆಂಗಳೂರು, ಫೆಬ್ರವರಿ 06, 2026: ಕೆಪಿಟಿಸಿಎಲ್ ವತಿಯಿಂದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಥೀಮ್ ಪಾರ್ಕ್ ಕಾಮಗಾರಿಯನ್ನು ಏಪ್ರಿಲ್ ಒಳಗಾಗಿ ಪೂರ್ಣಗೊಳಿಸುವಂತೆ ಇಂಧನ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಕೆ.ಜೆ.ಜಾರ್ಜ್ ಅವರು ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದಾರೆ.

ಸರ್ವಜ್ಞನಗರ ಕ್ಷೇತ್ರದಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾಮಗಾರಿಗಳನ್ನು ಶುಕ್ರವಾರ ಪರಿಶೀಲನೆ ನಡೆಸಿದ ಇಂಧನ ಸಚಿವರು, “ಹೆಚ್.ಬಿ.ಆರ್. ಲೇಔಟ್‌ನ 5ನೇ ಬ್ಲಾಕ್‌ನ ಕೆಪಿಟಿಸಿಎಲ್ ಸ್ಟೇಷನ್ ಬಳಿ ನಿರ್ಮಾಣಗೊಳ್ಳುತ್ತಿರುವ ಥೀಮ್ ಪಾರ್ಕ್ ಗೂ ಭೇಟಿ ನೀಡಿದರಲ್ಲದೆ, ಗುಣಮಟ್ಟದ ಕಾಮಗಾರಿ ನಡೆಸುವುದರ ಜತೆಗೆ ತ್ವರಿತವಾಗಿ ಕೆಲಸ ಮುಗಿಸಬೇಕು. ಸಮಾಜಕ್ಕೆ ಹಸಿರಿನ ಮಹತ್ವ ತಿಳಿಸುವ ಉದ್ದೇಶದಿಂದ ನಿರ್ಮಾಣಗೊಳ್ಳುತ್ತಿರುವ ಈ ಥೀಮ್ ಪಾರ್ಕ್ ಕ್ಷೇತ್ರಕ್ಕೆ ಮಾತ್ರವಲ್ಲ, ರಾಜ್ಯದಲ್ಲೂ ಮಾದರಿಯಾಗಿರಬೇಕು,” ಎಂದರು.

“ಕೆಪಿಟಿಸಿಎಲ್ ನ ಜನಪರ ಬದ್ಧತೆಯನ್ನು ಸಾರುವ ಉದ್ದೇಶದಿಂದ ಈ ಥೀಮ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಇಲ್ಲಿ ತರಬೇತಿ ಕೇಂದ್ರ, ಗ್ರಾಮೀಣ ಆಟಗಳನ್ನು ಪ್ರೋತ್ಸಾಹಿಸುವ ಕೇಂದ್ರ, ಬಯಲು ರಂಗಮಂದಿರ, ವಾಕಿಂಗ್ ಪಾಥ್ ಹಾಗೂ ಓಪನ್ ಜಿಮ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕ, ಶೌಚಾಲಯ ವ್ಯವಸ್ಥೆ, ಮ್ಯಾಪಿಂಗ್ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ರೂಪಿಸಬೇಕು,” ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ನೀರು ಸರಬರಾಜು ಯೋಜನೆ
ಸರ್ವಜ್ಞನಗರ ಕ್ಷೇತ್ರ ವ್ಯಾಪ್ತಿಯ ಕೆಲವು ಪ್ರದೇಶಗಳಲ್ಲಿ ಕಳೆದ ಹಲವು ವರ್ಷಗಳಿಂದ ಇರುವ ನೀರಿನ ಸಮಸ್ಯೆ ಬಗೆಹರಿಸಲು ಮತ್ತು ನೀರು ಸರಬರಾಜು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಹೆಚ್.ಬಿ.ಆರ್. ಲೇಔಟ್‌ 1ನೇ ಬ್ಲಾಕ್‌, ಸುಬ್ಬಯ್ಯ ಲೇಔಟ್ 1ನೇ ಮುಖ್ಯರಸ್ತೆಯ ಸಮೀಪ ಅಳವಡಿಸಲಾಗುತ್ತಿರುವ 600 ಎಂಎಂ ಎಂ.ಎಸ್ ನೀರಿನ ಪೈಪ್‌ಲೈನ್ ಯೋಜನೆಯನ್ನು ಪರಿಶೀಲಿಸಿದ ಸಚಿವ ಜಾರ್ಜ್, ಜಲ ಮಂಡಳಿ ಅಧಿಕಾರಿಗಳಿಂದ ಈ ಕಾಮಗಾರಿಯ ಬಗ್ಗೆ ಮಾಹಿತಿ ಪಡೆದು ತ್ವರಿತವಾಗಿ ಕೆಲಸ ಮುಂದುವರಿಸುಂತೆ ಸೂಚಿಸಿದರು.

ಶಾಲಾ ಕೊಠಡಿ ಮತ್ತು ಊಟದ ಕೊಠಡಿ ಉದ್ಘಾಟನೆ

Swapn Nagari Amusement And Theme Park in Bus Stand Road,Buldhana - Best Amusement  Parks near me in Buldhana - Justdial
ಇದೇ ವೇಳೆ ಸಚಿವರು ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ಹೆಚ್‌‌.ಬಿ.ಆರ್. ವಾರ್ಡ್ ಸಂಖ್ಯೆ.78 ರಲ್ಲಿರುವ ಕಾಡುಗೊಂಡನಹಳ್ಳಿ ಸರ್ಕಾರಿ ಕನ್ನಡ ಮಾದರಿ ಪಾಠಶಾಲೆಯಲ್ಲಿ ನಿರ್ಮಿಸಿರುವ ಕೊಠಡಿ ಹಾಗೂ ಊಟದ ಕೊಠಡಿಯನ್ನು ಉದ್ಘಾಟಿಸಿದರು.

ಅಲ್ಲದೆ, ವೀರಣ್ಣಪಾಳ್ಯ ಮುಖ್ಯರಸ್ತೆ ಮತ್ತು 4ನೇ ಅಡ್ಡರಸ್ತೆ-ಇಂದಿರಾ ಕ್ಯಾಂಟೀನ್ ರಸ್ತೆ ಮತ್ತು ನಾಗಾವರ ಮುಖ್ಯರಸ್ತೆಯಿಂದ ರೈಲ್ವೆ ಗೇಟ್‌ವರೆಗಿನ ವಿನಾಯಕ ದೇವಸ್ಥಾನದ ರಸ್ತೆಗಳ ಸಮಗ್ರ ಅಭಿವೃದ್ಧಿಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅನುದಾನದಡಿಯಲ್ಲಿ ಮಂಜೂರು ಮಾಡಲಾದ ರಸ್ತೆ ಕಾಮಗಾರಿಗಳಿಗೆ ಸಚಿವರು ಗುದ್ದಲಿ ಪೂಜೆ ನೆರವೇರೆಸಿದರು. ಜತೆಗೆ ಗೋವಿಂದಪುರ ಮುಖ್ಯರಸ್ತೆ ಮತ್ತು ನೆಹರು ರಸ್ತೆ, ಹೆಣ್ಣೂರು ರಸ್ತೆಯಿಂದ ಕುಲ್ಲಪ್ಪ ವೃತ್ತದವರೆಗೆ ಪ್ರಗತಿಯಲ್ಲಿರುವ ಪಾದಚಾರಿ ಮಾರ್ಗ ಹಾಗೂ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

ಜಲಸುಸ್ಥಿರತೆಗೆ ಕೊಡುಗೆ ನೀಡುತ್ತಿರುವ ಬಾಣಸವಾಡಿ ಕೆರೆ

 

ಕ್ಷೇತ್ರದಲ್ಲಿ ಭವಿಷ್ಯದ ಜಲಸುಸ್ಥಿರತೆಗೆ ಕೊಡುಗೆ ನೀಡುತ್ತಿರುವ ಬಾಣಸವಾಡಿ ಕೆರೆಯ ಪುನಶ್ಚೇತನ ಕಾಮಗಾರಿಯನ್ನು ಪರಿಶೀಲಿಸಿದ ಸಚಿವರು, ಕೆರೆಯು ಬೆಂಗಳೂರು ಮಹಾನಗರದ ಪ್ರಮುಖ ಕೆರೆಗಳಲ್ಲೊಂದಾಗಿದ್ದು, ಕೆರೆಯ ಪುನಶ್ಚೇತನ ಹಾಗೂ ಅಭಿವೃದ್ಧಿಯು, ಭವಿಷ್ಯದಲ್ಲಿ ನಗರಕ್ಕೆ ನೀರಿನ ಕೊರತೆ ಬಾರದಂತೆ ಕೊಡುಗೆ ನೀಡಲಿದೆ‌ ಎಂದು ತಿಳಿಸಿದರು.

ಒಳಚರಂಡಿ ವ್ಯವಸ್ಥೆಯ ಪುನಶ್ಚೇತನ ಕಾಮಗಾರಿಗೆ ಚಾಲನೆ

ಬಳಿಕ ಹೆಚ್‌ಆರ್‌ಬಿ‌ಆರ್ ಲೇಔಟ್‌ 1 ನೇ ಬ್ಲಾಕ್ 8ನೇ ಮುಖ್ಯರಸ್ತೆಯ ಸಮೀಪದಲ್ಲಿ ಒಳಚರಂಡಿ ವ್ಯವಸ್ಥೆಯ ಪುನಶ್ಚೇತನ ಕಾಮಗಾರಿಗೆ ಚಾಲನೆ ನೀಡಿದ ಸಚಿವರು, ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ನೀರಿನ ಸರಾಗ ಹರಿವಿಗೆ ಅನುಕೂಲವಾಗುವಂತೆ ಚರಂಡಿ ವ್ಯವಸ್ಥೆಯನ್ನು ಪರಿಷ್ಕರಿಸಲಾಗುತ್ತಿದ್ದು, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಾದ್ಯಂತ ಒಳಚರಂಡಿ‌ ಮೂಲಸೌಕರ್ಯ ಹಾಗೂ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

Sripad Phat Podcast : ಗಾಯದ ಮೇಲೆ ಬರೆ ಎಳೆದಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಹೊಡೆತ ನೀಡಿದೆ..! #pratidhvani

ಬಾಣಸವಾಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭ
ಬಾಣಸವಾಡಿ ಮುಖ್ಯ ರಸ್ತೆಯ ಸಮೀಪ ನೂತನವಾಗಿ ನಿರ್ಮಿಸಲಾಗಿರುವ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಓ ಪ್ಲಾಂಟ್) ಉದ್ಘಾಟಿಸಿದ ಸಚಿವರು, ಕ್ಷೇತ್ರದ ಜನತೆಯ ಉತ್ತಮ ಆರೋಗ್ಯಕ್ಕಾಗಿ, ಶುದ್ಧ ಕುಡಿಯುವ ನೀರಿನ ಮೂಲಸೌಕರ್ಯವನ್ನುಕಲ್ಪಿಸಲಾಗುತ್ತಿದ್ದು, ಅತ್ಯುತ್ತಮ ಗುಣಮಟ್ಟದ ನೀರು ಜನತೆಗೆ ಲಭ್ಯವಾಗುತ್ತಿದೆ‌ ಎಂದು ತಿಳಿಸಿದರು.

ಕ್ರೀಡಾ ಸಂಕೀರ್ಣ ಉನ್ನತೀಕರಣ ಪರಿಶೀಲನೆ
ಕ್ಷೇತ್ರದ ಯುವಜನತೆಗೆ ಹಾಗೂ ಕ್ರೀಡಾಪಟುಗಳಿಗೆ ಅನುಕೂಲವಾಗುವಂತೆ, ಕ್ಷೇತ್ರದ ಓಎಂಬಿಆರ್ ಲೇಔಟ್‌ನಲ್ಲಿನ ಆಟದ ಮೈದಾನದಲ್ಲಿ ಉನ್ನತೀಕರಣಗೊಳ್ಳುತ್ತಿರುವ ಕ್ರೀಡಾ ಸಂಕೀರ್ಣ ಹಾಗೂ ಇನ್ನಿತರ ಮೂಲಸೌಕರ್ಯ ವ್ಯವಸ್ಥೆಗಳ ಕಾಮಗಾರಿಗಳನ್ನು ಇದೇ ವೇಳೆ ಇಂಧನ ಸಚಿವರು ಪರಿಶೀಲಿಸಿದರು. ಕ್ರೀಡಾ ಸಂಕೀರ್ಣದ ಕಾಮಗಾರಿ ಹಲವು ವರ್ಷಗಳಿಂದ ನಡೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ. ತ್ವರಿತವಾಗಿ ಕೆಲಸ ಮುಗಿಸಿ ಅದನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಬೇಕು ಎಂದು ಬಿಡಿಎ ಆಯುಕ್ತರು ಹಾಗೂ ಇತರೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

Tags: cm siddaramaiah kj georgeembassy group and kj georgeEnergy Minister KJ GeorgeK J GeorgeKJ Georgekj george about gruha jyothikj george daughterkj george edkj george embassy groupkj george housekj george in congresskj george in kpcckj george interviewkj george it raidkj george latest newskj george newskj george reactionkj george speechminister kj georgepower minister kj georgepower point with hpk with kj george
Previous Post

ಡಿ.ಕೆ.ಶಿವಕುಮಾರ್ ಈ ಬಾರಿಯೇ ಮುಖ್ಯಮಂತ್ರಿ ಆಗುತ್ತಾರೆ ಎಂದ ಈ ಕೈ ಶಾಸಕ!

Next Post

ಈ ಗೆಲುವು ಎಲ್ಲಾ ಆಟಗಾರರ ಒಗ್ಗಟ್ಟಿನ ಅಮೋಘ ಪ್ರದರ್ಶನ: ಐಸಿಸಿ U19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಹೆಚ್‌ಡಿಕೆ ಶುಭಹಾರೈಕೆ..

Related Posts

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ
Top Story

ಕೇಳಚಂದ್ರ ಫೌಂಡೇಷನ್‌ ನಿಂದ ಕೌಶಲ್ಯ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ

by ಪ್ರತಿಧ್ವನಿ
February 10, 2026
0

  ಬೆಂಗಳೂರು, ಫೆ. 10, 2026: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಕೆ.ಜಿ. ಹಳ್ಳಿಯ ಕೇಳಚಂದ್ರ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ವಿವಿಧ ಕೌಶಲಗಳ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಕೇಳಚಂದ್ರ...

Read moreDetails
RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

RAICHURU:ಅಧಿಕಾರಿಗಳ ಎಡವಟ್ಟು: ಸಿಎಂ ಸಿದ್ದರಾಮಯ್ಯ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಗೊಂದಲ

February 8, 2026
ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

ʼರಾಯರ ದರ್ಶನʼ: ರಜನಿಕಾಂತ್, ಶಿವಣ್ಣ ಸೇರಿದಂತೆ 25ಕ್ಕೂ ಹೆಚ್ಚು ತಾರೆಯರ ಮಹಾಸಂಗಮ

February 8, 2026
ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

ಜಿ.ಟಿ ದೇವೇಗೌಡ ಈಗ ಮಹಾನ್ ನಾಯಕರ ಜೊತೆ ಇದ್ದಾರೆ: ಕುಮಾರಸ್ವಾಮಿ ವಾಗ್ದಾಳಿ

February 8, 2026
KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

KOPPALA: ಸಾರಾಯಿ ಎಂದು ಸ್ಪಿರಿಟ್ ಸೇವನೆ: ಇಬ್ಬರು ಯುವಕರ ಸಾ**

February 8, 2026
Next Post
ಈ ಗೆಲುವು ಎಲ್ಲಾ ಆಟಗಾರರ ಒಗ್ಗಟ್ಟಿನ ಅಮೋಘ ಪ್ರದರ್ಶನ:  ಐಸಿಸಿ U19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಹೆಚ್‌ಡಿಕೆ ಶುಭಹಾರೈಕೆ..

ಈ ಗೆಲುವು ಎಲ್ಲಾ ಆಟಗಾರರ ಒಗ್ಗಟ್ಟಿನ ಅಮೋಘ ಪ್ರದರ್ಶನ: ಐಸಿಸಿ U19 ವಿಶ್ವಕಪ್‌ ಗೆದ್ದ ಭಾರತ ತಂಡಕ್ಕೆ ಹೆಚ್‌ಡಿಕೆ ಶುಭಹಾರೈಕೆ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada