• Home
  • About Us
  • ಕರ್ನಾಟಕ
Monday, February 2, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಇದೀಗ

ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದ ಎಲಾನ್‌ ಮಸ್ಕ್‌, ಬಿಜೆಪಿ ಕಾಂಗ್ರೆಸ್‌ ನಡುವೆ ವಾಕ್ಸಮರ..!

ಪ್ರತಿಧ್ವನಿ by ಪ್ರತಿಧ್ವನಿ
February 2, 2026
in ಇದೀಗ, ದೇಶ, ರಾಜಕೀಯ, ವಿದೇಶ
0
ಕೇಂದ್ರ ಸರ್ಕಾರ ಟೀಕಿಸುವಾಗ ದೇಶದ ಅವಹೇಳನ ಮಾಡೋದನ್ನು ನಿಲ್ಲಿಸಿ : ರಾಹುಲ್‌ಗೆ ಸಚಿವ ರಿಜಿಜು ತಿರುಗೇಟು..!
Share on WhatsAppShare on FacebookShare on Telegram

ಬೆಂಗಳೂರು : 2026 ರ ಜಾಗತಿಕ ಜಿಡಿಪಿ ಕೊಡುಗೆ ನೀಡುವಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ ಎಂದು ಜಾಗತಿಕ ಅಂಕಿಅಂಶಗಳ ವರದಿಯೊಂದು ಪ್ರಕಟವಾಗಿದೆ, ಇದೇ ವಿಚಾರಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಪ್ರತಿಕ್ರಿಯಿಸಿದ್ದಾರೆ. ವಿದೇಶಗಳಲ್ಲಿ ನಿಂತು ಭಾರತವನ್ನು ಟೀಕಿಸುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ತಿವಿದಿದ್ದಾರೆ. ಭಾರತದ ವಿಚಾರದಲ್ಲಿ ಮಸ್ಕ್ ಅವರ ಹೇಳಿಕೆಗಳನ್ನು ಉಲ್ಲೇಖಿಸಿ, ಸರ್ಕಾರವನ್ನು ಟೀಕಿಸುವಾಗ ಭಾರತವನ್ನು ಅವಹೇಳನ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ADVERTISEMENT
Narega VS VB-G RAM G : ಬಿಜೆಪಿಯವರಿಗೆ ದೇಶದ ಜನ ಬುದ್ದಿ ಕಲಿಸೋ ದಿನಗಳು ದೂರವಿಲ್ಲ..! #pratidhvani

ಅಧಿಕಾರದ ಸಮತೋಲನದಲ್ಲಿ ಬದಲಾಗುತ್ತಿದೆ. ಚೀನಾ ಮತ್ತು ಭಾರತ ಒಟ್ಟಾಗಿ ಜಾಗತಿಕ ಬೆಳವಣಿಗೆಗೆ ಶೇ.43.6 ರಷ್ಟು ಕೊಡುಗೆ ನೀಡುತ್ತಿವೆ ಎಂದು ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ರೀಪೋಸ್ಟ್‌ ಮಾಡುವ ಮೂಲಕ ಸತ್ತ ಆರ್ಥಿಕತೆಯ ಹೇಳಿಕೆ ಉಲ್ಲೇಖಿಸಿ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಕಿಡಿಕಾರಿದೆ.

ಇದನ್ನೂ ಓದಿ : CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

ಇನ್ನೂ ರಾಷ್ಟ್ರೀಯ ಸಾಧನೆಯ ಕುರಿತು ಉತ್ತಮವಾದ ವಿಷಯವನ್ನು ತಿಳಿಸಲು ಮಾತ್ರ ನಾನು ಎಲೋನ್ ಮಸ್ಕ್ ಅವರ ಹೆಸರನ್ನು ಉಲ್ಲೇಖಿಸುತ್ತಿದ್ದೇನೆ. “ನಾನು ಸಾಮಾನ್ಯವಾಗಿ ಭಾರತೀಯರ ಹೇಳಿಕೆಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸರ್ಕಾರವನ್ನು ಟೀಕಿಸುವುದು ಪ್ರಜಾಪ್ರಭುತ್ವದ ಹಕ್ಕು, ಭಾರತವನ್ನು ಕೀಳಾಗಿ ನೋಡಬೇಡಿ ಮತ್ತು ಭಾರತದ ಸಾಧನೆಯನ್ನು ಎಂದಿಗೂ ಕಡಿಮೆ ಮಾಡಬೇಡಿ ಎಂದು ರಾಹುಲ್ ಗಾಂಧಿ ಅವರಿಗೆ ತಿಳಿಸಲು ಎಲೋನ್‌ ಮಸ್ಕ್ ಅವರ ಬಗ್ಗೆ ಹೇಳುತ್ತಿದ್ದೇನೆ ಹೆಮ್ಮೆಯ ಭಾರತೀಯರಾಗಿರಿ” ಎಂದು ರಿಜಿಜು ರಾಹುಲ್‌ ಗಾಂಧಿಗೆ ತೀಕ್ಷ್ಣವಾಗಿಯೇ ರಾಷ್ಟ್ರೀಯತೆಯ ಪಾಠ ಮಾಡಿದ್ದಾರೆ.

ಎಲಾನ್ ಮಸ್ಕ್ (Elon Musk) ಹಂಚಿಕೊಂಡ ಪೋಸ್ಟ್‌ನಲ್ಲಿ ಐಎಂಎಫ್‌ (IMF) ಡೇಟಾವನ್ನು ಉಲ್ಲೇಖಿಸಿದ್ದಾರೆ, ಅದರಲ್ಲಿ 2026 ರಲ್ಲಿ ಜಾಗತಿಕ ಜಿಡಿಪಿ (GDP) ಬೆಳವಣಿಗೆಗೆ ಟಾಪ್ 10 ದೇಶಗಳು ಮತ್ತು ಅವುಗಳ ಕೊಡುಗೆಯನ್ನು ಪಟ್ಟಿ ಮಾಡಲಾಗಿದೆ. ಏಷ್ಯಾದ-ಪೆಸಿಫಿಕ್ ಪ್ರದೇಶವು ಒಟ್ಟು ಜಾಗತಿಕ ಬೆಳವಣಿಗೆಯ ಸುಮಾರು ಶೇ.50% ರಷ್ಟಿದೆ ಎಂದು ಎಲಾನ್‌ ಮಸ್ಕ್ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಈ ಪಟ್ಟಿಯು ಭಾರತವು ಶೇ.17% ರಷ್ಟು ಜಿಡಿಪಿ ಕೊಡುಗೆಯ ವಿಚಾರದಲ್ಲಿ ಅಮೆರಿಕಕ್ಕಿಂತ ಮುಂದಿದೆ. ಇಂಡೋನೇಷ್ಯಾ, ಅಮೆರಿಕ, ಚೀನಾ ಮತ್ತು ಜರ್ಮನಿಯಂತಹ ಇತರ ದೇಶಗಳು ಕ್ರಮವಾಗಿ ಶೇ.3.8%, ಶೇ.9.9%, ಶೇ.26.6% ಮತ್ತು ಶೇ.0.9% ರಷ್ಟಿವೆ. ಜನವರಿಯಲ್ಲಿ, ಐಎಂಎಫ್ 2025-26ರ ಆರ್ಥಿಕ ವರ್ಷದಲ್ಲಿ (Financial Year) ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 7.3 ಕ್ಕೆ ಮತ್ತು 2026-27ರ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯನ್ನು ಶೇಕಡಾ 6.4 ಕ್ಕೆ ಹೆಚ್ಚಿಸಿತ್ತು.

ರಾಹುಲ್‌ ಗಾಂಧಿ ಟೀಕೆಗಳೇನು..?

ಇನ್ನೂ ಕಳೆದ ವರ್ಷ ಜುಲೈನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ “ಡೆಡ್ ಎಕಾನಮಿ” ಹೇಳಿಕೆಯ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, ಟ್ರಂಪ್ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು ಮತ್ತು ಆರ್ಥಿಕತೆಯನ್ನು ನಿರ್ವಹಿಸುವ ಬಗ್ಗೆ ಬಿಜೆಪಿಯನ್ನು ಟೀಕಿಸಿದ್ದರು.

Prabha Mallikarjun on Union Budget: ರಾಜ್ಯವನ್ನು ಕೇಂದ್ರ ಕಡೆಗಣಿಸಿದೆ ಸಂಸದೆ ಪ್ರಭಾ ಸಿಡಿಮಿಡಿ.! #pratidhvani

ಅಲ್ಲದೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಬಜೆಟ್ ಮಂಡಿಸಿದ ನಂತರ,‌ ರಾಹುಲ್ ಗಾಂಧಿ, ಸರ್ಕಾರವು ನಿರ್ಲಕ್ಷಿಸಿದ ಪ್ರಮುಖ ವಿಷಯಗಳೆಂದು ವಿವರಿಸಿ ಪಟ್ಟಿ ಹಂಚಿಕೊಂಡಿದ್ದರು. ಯುವಜನರಿಗೆ ಉದ್ಯೋಗವಿಲ್ಲ. ಉತ್ಪಾದನೆ ಕುಸಿಯುತ್ತಿದೆ. ಹೂಡಿಕೆದಾರರು ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಮನೆಯ ಉಳಿತಾಯ ಕುಸಿಯುತ್ತಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಜಾಗತಿಕ ಆಘಾತಗಳು – ಎಲ್ಲವನ್ನೂ ನಿರ್ಲಕ್ಷಿಸಲಾಗಿದೆ. ಭಾರತದ ನಿಜವಾದ ಬಿಕ್ಕಟ್ಟುಗಳನ್ನು ಗಮನಿಸದೆ, ದಾರಿ ಸುಧಾರಿಸಿಕೊಳ್ಳುವುದರಲ್ಲಿಯೂ ವಿಫಲವಾದ ಬಜೆಟ್ ಎಂದು ರಾಹುಲ್‌ ಗಾಂಧಿ ಟೀಕಿಸಿದ್ದಾರೆ.

Tags: BJPcongress vs bjpDonald TrumpElon MuskFinance DepartmentIndiakannada newskarnataka newslop rahul gandhiNirmala SitaramanPratidhvaniRahul GandhiTesla
Previous Post

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

Next Post

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

Related Posts

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ
Top Story

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

by ಪ್ರತಿಧ್ವನಿ
February 2, 2026
0

ಬೆಂಗಳೂರು: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025ಕ್ಕೆ ಅಂಕಿತ ಹಾಕದೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋಟ್‌ ಅವರು ಮಸೂದೆಯನ್ನು ರಾಷ್ಟ್ರಪತಿಗಳ ಪರಿಗಣನೆಗೆ ವರ್ಗಾಯಿಸಿದ್ದಾರೆ....

Read moreDetails
ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

February 2, 2026
CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

CCL 2026 : 12 ವರ್ಷದ ಬಳಿಕ ಕರ್ನಾಟಕ ಬುಲ್ಡೋಜರ್ಸ್ ಭರ್ಜರಿ ಗೆಲುವು

February 2, 2026
Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

Earthquake: ಬೆಳ್ಳಂ ಬೆಳಿಗ್ಗೆ ಈ ಮೂರು ಪ್ರದೇಶಗಳಲ್ಲಿ ಭೂಕಂಪ

February 2, 2026
Next Post
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

Recent News

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ
Top Story

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

by ಪ್ರತಿಧ್ವನಿ
February 2, 2026
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ
Top Story

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

by ಪ್ರತಿಧ್ವನಿ
February 2, 2026
ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?
Top Story

ಈ ಕಣ್ಣಂಚಿನ ಹನಿಗಳನು ಹೇಗೆ ಬಣ್ಣಿಸಲಿ ಕಾಮ್ರೇಡ್‌ ?

by ನಾ ದಿವಾಕರ
February 2, 2026
ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Top Story

ಜಲಮಂಡಳಿ ನಿರ್ಲಕ್ಷ್ಯಕ್ಕೆ ಬಾಲಕ ಬಲಿ: ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ

by ಪ್ರತಿಧ್ವನಿ
February 2, 2026
Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌
Top Story

Ram Charan: ಮಗುವಿನೊಂದಿಗೆ ಆಸ್ಪತ್ರೆಗೆ ಬಂದ ರಾಮ್ ಚರಣ್ ಮೇಲೆ ಏಕಾಏಕಿ ಮುಗಿಬಿದ್ದ ಫ್ಯಾನ್ಸ್‌

by ಪ್ರತಿಧ್ವನಿ
February 2, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

ರೈತರನ್ನು ಉದ್ಯಮಿಗಳನ್ನಾಗಿ ಮಾಡುವುದು ಸರ್ಕಾರದ ಗುರಿ:ಸಚಿವ ಎನ್.ಚಲುವರಾಯಸ್ವಾಮಿ

February 2, 2026
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಹಾಕದ ರಾಜ್ಯಪಾಲರು: ರಾಷ್ಟ್ರಪತಿಗೆ ರವಾನೆ

February 2, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!