ಬೆಂಗಳೂರು: ನವೀಕರಿಸಬಹುದಾದ ಇಂಧನ ಯೋಜನೆಗಳು ಕೃಷಿ ಭೂಮಿಯಲ್ಲಿ ಕಾರ್ಯಾರಂಭಿಸುವುದುಕ್ಕೆ ಪೂರ್ವಾನುಮತಿ ಪಡೆಯುವ ಅವಶ್ಯತಕೆ ಇಲ್ಲ. ಇದಕ್ಕಾಗಿ ನೂತನ ವ್ಯವಸ್ಥೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ, ಈ ಹೆಜ್ಜೆಯು ಭ್ರಷ್ಟಾಚಾರವನ್ನು ಕಡಿಮೆ ಮಾಡುವುದರ ಜೊತೆಗೆ ಕೆಲಸಗಳು ಯಾವುದೇ ಅಡಚಣೆಗಳಿಲ್ಲದೆ ಸುಲಭವಾಗಿ ನಡೆಯಲು ಸಾಧ್ಯವಾಗುತ್ತದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.
ನವೀಕರಿಸಬಹುದಾದ ಇಂಧನ ಯೋಜನೆಗಳು – ಸೌರ, ಪವನ, ಹೈಬ್ರಿಡ್, ಇಂಧನ ಸಂಗ್ರಹಣೆ, ಜೀವರಾಶಿ ಮತ್ತು ತ್ಯಾಜ್ಯದಿಂದ ಇಂಧನ – ಕೃಷಿಯೇತರ ಬಳಕೆಗೆ ಅವಕಾಶ ನೀಡಲು ಕೃಷಿ ಭೂಮಿಯನ್ನು ಪರಿವರ್ತಿಸಲು ಅರ್ಜಿ ಸಲ್ಲಿಸಬೇಕಾಗಿಲ್ಲ. ಪ್ರಸ್ತುತ, ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗಾಗಿ ಉಪಯೋಗಿಸಬೇಕಾದರೆ ಅದಕ್ಕಾಗಿ ಜಿಲ್ಲಾಧಿಕಾರಿ ಬಳಿಯಿಂದ ಬದಲಾವಣೆ ಆದೇಶದ ಅಗತ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ನಿದ್ರೆಯ ಕೊರತೆಯೇ ಹೊಟ್ಟೆಯ ಕೊಬ್ಬು ಹೆಚ್ಚಲು ಪ್ರಮುಖ ಕಾರಣ: ಇಲ್ಲಿದೆ ಮಹತ್ವದ ಮಾಹಿತಿ
ಈ ಬದಲಾವಣೆ ಅಥವಾ “ಪರಿವರ್ತನೆಗೆ ಆರು ತಿಂಗಳು ಕಾಲ ಸಮಯ ಬೇಕಾಗುತ್ತಿತ್ತು. ಮೊದಲು ರೈತರೊಂದಿಗೆ ಒಪ್ಪಂದ ಮಾಡಿಕೊಂಡು ನಂತರ ಪರಿವರ್ತನೆ ಎಂಬುದನ್ನು ಸಮರ್ಪಕವಾಗಿ ರೂಪಿಸಿರಲಿಲ್ಲ. ಹೀಗಾಗಿ ಏಜೆಂಟರುಗಳಿಗೆ ಸಾಕಷ್ಟು ಸಂತೋಷ ಪಟ್ಟಿದ್ದರು. ಸರ್ಕಾರಕ್ಕೆ 10 ರೂಪಾಯಿ ದೊರೆತರೆ, ನಿಜವಾದ ವೆಚ್ಚ 100 ರೂಪಾಯಿ ಆಗುತ್ತಿತ್ತು, ಉಳಿದ ಹಣದ ಬಗ್ಗೆ ಮಾಹಿತಿ ಸಿಗದ ಸ್ಥಿತಿ ನಿರ್ಮಾಣವಾಗಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿತ್ತು. ಆ ಹಣ ಏಜೆಂಟ್ ಅಥವಾ ಅಧಿಕಾರಿಗಳಿಗೆ ಹೋಗಿದೆಯೋ ಇಲ್ಲವೋ ನಮಗೆ ತಿಳಿದಿಲ್ಲ. ಅಂತಿಮವಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರಲು ಕಾರಣವಾಗಿದೆ ಎಂದು ಬೇಸರ ಹೊರಹಾಕಿದ್ದರು.
ಆದರೆ ನಾವು ಅಂತಹ ದುರಾಡಳಿತವನ್ನು ಬಯಸುವುದಿಲ್ಲ. ಅದಕ್ಕಾಗಿಯೇ ಭ್ರಷ್ಟಾಚಾರ ತಡೆಯೋಕೆ ಈ ಯೋಜನೆ ಪ್ರಾರಂಭಿಸಲಾಗಿದೆ. ಇದು ವ್ಯವಹಾರವನ್ನು ಸುಲಭಗೊಳಿಸಲು ಕಾರಣವಾಗುತ್ತದೆ. ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ (GW) ವಿದ್ಯುತ್ ಸ್ಥಾಪಿಸಲು ಮತ್ತು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ
ಕಡಿಮೆ ಮಾಡಲು ಪ್ರತಿಜ್ಞೆ ಮಾಡಿದ್ದು, “200 GW ಅಂತರವಿದೆ. ನಾವು ನಮ್ಮ ಮಾತನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನಮಗೆ ವೇಗವಾದ ಬೆಳವಣಿಗೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ.
200 ಗಿಗಾವ್ಯಾಟ್ ನವೀಕರಿಸಬಹುದಾದ ಪವರ್ ಪ್ಲಾಂಟ್ ಸ್ಥಾಪಿಸಲು ಅಂದಾಜು 8 ಲಕ್ಷ ಎಕರೆ ಭೂಮಿ ಅವಶ್ಯಕತೆ ಇದೆ. “ಕರ್ನಾಟಕದಲ್ಲಿ ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು ಒಂದು ಲಕ್ಷ ಎಕರೆ ಭೂಮಿಯನ್ನು ರಿನಿವಲ್ ಎನರ್ಜಿಗಾಗಿ ಬಳಸಲಾಗುವುದು. 2030 ರ ವೇಳೆಗೆ ರಾಜ್ಯವು 40-50 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಉತ್ಪಾದಿಸಬೇಕಾಗುತ್ತದೆ ಎಂದು ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಸ್ವಯಂ-ಪರಿವರ್ತನೆಯು “ಒಂದು ದೊಡ್ಡ ಅವಕಾಶವಿದ್ದಂತೆ. “ಇದನ್ನು ಅಫಿಡವಿಟ್ ಆಧಾರದ ಮೇಲೆ ಮಾಡಲಾಗುತ್ತಿದೆ. ಯಾವುದೇ ದುರುಪಯೋಗವಾಗುವುದಿಲ್ಲ. ಅಲ್ಲದೆ ಇದಕ್ಕಾಗಿಯೇ ನಾವು ಕಠಿಣವಾದ ದಂಡ ಹಾಗೂ ನಿಬಂಧನೆಗಳನ್ನು ಸಹ ವಿಧಿಸಿದ್ದೇವೆ. ಈ ವಿಚಾರದಲ್ಲಿ ನಾವು ನಂಬಿಕೆ ಆಧಾರಿತ ವ್ಯವಸ್ಥೆಗೆ ಹೋಗುತ್ತಿದ್ದೇವೆ ಎಂದು ಹೇಳಿದ್ದಾರೆ.
ಈ ಭೂ ಸುಧಾರಣೆಯಿಂದ ಕರ್ನಾಟಕಕ್ಕೆ ಹೆಚ್ಚಿನ ಹೂಡಿಕೆಗಳು ಹರಿದು ಬರುವ ನಿರೀಕ್ಷೆಗಳಿವೆ. “ಭೂಮಿಗೆ ಸಂಬಂಧಿಸಿದಂತೆ ನವೀಕರಿಸಬಹುದಾದ ಇಂಧನ ಹೂಡಿಕೆಗಳಿಗೆ ಕರ್ನಾಟಕವು ಅತ್ಯುತ್ತಮ ವ್ಯವಸ್ಥೆಯನ್ನು ಹೊಂದಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತದ ಗುರಿ ಹೊಂದಿರುವುದಾಗಿ ಒತ್ತಿ ಹೇಳಿದ್ದಾರೆ.













