• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 15, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅರ್ಜುನ್ ಸರ್ಜಾ ನಿರ್ದೇಶನದ ‘ಸೀತಾ ಪಯಣ’ ಚಿತ್ರದ ಕಿಕ್ ಏರಿಸುವ ‘ಅಸಲಿ ಸಿನಿಮಾ’ ಹಾಡು ಬಿಡುಗಡೆ!

ಫೆಬ್ರವರಿ 14ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ

ಪ್ರತಿಧ್ವನಿ by ಪ್ರತಿಧ್ವನಿ
January 7, 2026
in Top Story, ಅಂಕಣ, ಇದೀಗ, ಕರ್ನಾಟಕ, ವಾಣಿಜ್ಯ, ವಿಶೇಷ, ಸಿನಿಮಾ
0
Share on WhatsAppShare on FacebookShare on Telegram

ADVERTISEMENT

ಬಹುಮುಖ ಪ್ರತಿಭೆ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ ‘ಸೀತಾ ಪಯಣ’. ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಪ್ರಚಾರ ಕಾರ್ಯಗಳು ಭರದಿಂದ ಸಾಗಿದ್ದು, ಇದೀಗ ಚಿತ್ರದ ಬಹುನಿರೀಕ್ಷಿತ ‘ಅಸಲು ಸಿನಿಮಾ..’ ಹಾಡು ಬಿಡುಗಡೆಯಾಗಿದೆ.

ವೈರಲ್ ಆಗುತ್ತಿದೆ ‘ಅಸಲಿ ಸಿನಿಮಾ’ ಹಾಡು
“ಆಹಾ ಓಹೋ ಅಂತಾರೋ… ಚೆಲುವಿ ನೀನೇ ಅಂತಾರೋ… ಲುಕ್‌ಅಲ್ಲಿ ಬಬ್ಲಿ ಅಂತಾರೋ.. ಕಣ್ಣಲ್ಲಿ ಕ್ರೇಜಿ ಅಂತಾರೋ” ಎಂಬ ಆಕರ್ಷಕ ಸಾಲುಗಳೊಂದಿಗೆ ಶುರುವಾಗುವ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಖ್ಯಾತ ಸಾಹಿತಿ ಭರತ್‌ ಜನನಿ ಈ ಹಾಡಿಗೆ ಸಾಹಿತ್ಯ ಬರೆಯುವ ಮೂಲಕ ಸ್ಯಾಂಡಲ್‌ವುಡ್‌ಗೆ ಡೆಬ್ಯೂ ಮಾಡ್ತಿದ್ದಾರೆ. ಗಾಯಕಿ ಅನುರಾಧಾ ಭಟ್ ತಮ್ಮ ಸುಮಧುರ ಧ್ವನಿಯಲ್ಲಿ ಹಾಡಿದ್ದಾರೆ. ಮೆಲೋಡಿ ಕಿಂಗ್ ಅನೂಪ್ ರೂಬೆನ್ಸ್ ಅವರ ಪೆಪ್ಪಿ ಟ್ಯೂನ್‌ಗಳು ಈ ಹಾಡಿನ ಮೆರುಗನ್ನು ಹೆಚ್ಚಿಸಿವೆ.

ತಾರಾಗಣದಲ್ಲಿ ಯಾರಿದ್ದಾರೆ?
ಈ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯ ಅರ್ಜುನ್ ನಾಯಕಿಯಾಗಿ ಮಿಂಚುತ್ತಿದ್ದು, ಅವರ ಗ್ಲಾಮರ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಹಾಡಿನಲ್ಲಿ ಎದ್ದುಕಾಣುತ್ತಿದೆ. ಚಿತ್ರದಲ್ಲಿ ನಿರಂಜನ್ ನಾಯಕನಾಗಿ ನಟಿಸಿದ್ದು, ಪೋಷಕ ಪಾತ್ರಗಳಲ್ಲಿ ದಿಗ್ಗಜ ನಟರಾದ ಸತ್ಯರಾಜ್, ಪ್ರಕಾಶ್ ರೈ ಮತ್ತು ಕೋವೈ ಸರಳಾ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಅರ್ಜುನ್ ಸರ್ಜಾ ಒಂದು ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಂಡರೆ, ಅವರ ಸೋದರಳಿಯ ಧ್ರುವ ಸರ್ಜಾ ಕೂಡ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.

ಫೆಬ್ರವರಿ 14ಕ್ಕೆ ಅದ್ಧೂರಿ ಬಿಡುಗಡೆ
‘ಸೀತಾ ಪಯಣ’ ಚಿತ್ರವು ಪ್ರೇಮಿಗಳ ದಿನದ ಅಂಗವಾಗಿ ಫೆಬ್ರವರಿ 14ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

ತಾಂತ್ರಿಕ ವರ್ಗ ಮತ್ತು ತಾರಾಗಣ
ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಕಥೆ-ಚಿತ್ರಕಥೆ- ನಿರ್ಮಾಣ ಮತ್ತು ನಿರ್ದೇಶನ ಅರ್ಜುನ್ ಸರ್ಜಾ ಅವರದ್ದು. ಅನೂಪ್ ರೂಬೆನ್ಸ್ ಸಂಗೀತ, ಜಿ. ಬಾಲಮುರುಗನ್ ಛಾಯಾಗ್ರಹಣ, ಅಯೂಬ್ ಖಾನ್ ಸಂಕಲನ, ಅರ್ಜುನ್ ಸರ್ಜಾ ಸಾಹಸ, ಶ್ರಸ್ತಿ ನೃತ್ಯ ಸಂಯೋಜನೆ ಚಿತ್ರಕ್ಕಿದೆ.

Tags: Aishwarya ArjunAnup RubensAnuradha BhatArjun SarjaaBharath JananiDhruva Sarjakannada cinemaKovai SaralaNiranjanprakash raiSathyarajSeetha Payana
Previous Post

ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಸಿಎಂ ಸಾಧನೆಗೆ ಸಚಿವ ಲಾಡ್‌ ಶುಭಹಾರೈಕೆ

Next Post

ಸಾಧನೆ ಮಾಡುವುದು ಮಹಿಳೆಯರಿಗೆ ಅಸಾಧ್ಯವಾದ ಕೆಲಸವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

Related Posts

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.
ಅಂಕಣ

ಭಾರತದ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೆ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳಾ ಮೀಸಲಾತಿ: ಸವಾಲುಗಳು ಮತ್ತು ಸಾಧ್ಯತೆಗಳು.

by ಪ್ರತಿಧ್ವನಿ
April 15, 2026
0

ಲೇಖಕರು : ಡಾ.ರಾಜೇಂದ್ರಪ್ರಸಾದ್.ಪಿ ಎಂಎಸ್‌ಡಬ್ಲ್ಯೂ, ಪಿಹೆಚ್‌ಡಿ, ಅಭಿವೃದ್ಧಿ ಚಿಂತಕರು. ಪ್ರಸ್ತುತ ಗ್ರಾಸ್‌ರೂಟ್ಸ್‌ ರಿಸರ್ಚ್‌ ಅಂಡ್‌ ಅಡ್ವೊಕಸಿ ಮೂವ್‌ಮೆಂಟ್‌ನಲ್ಲಿ ಸಮುದಾಯ ಸಮಲೋಚನಾ ತಂಡದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಭಾರತದ...

Read moreDetails
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

‘ಕೆಡಿ’ ಚಿತ್ರಕ್ಕೆ ಸೆನ್ಸಾರ್ ಅಡೆತಡೆ: ಕೇಂದ್ರ ಮಂಡಳಿ ವಿರುದ್ಧ ಅನ್ಯಾಯ ಆರೋಪ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

ಬಿಗ್‌ಬಾಸ್ ರಕ್ಷಿತಾ ಶೆಟ್ಟಿ ಹೊಸ ಹೆಜ್ಜೆ: ‘ಪಟಾಕಿ ಕಿಚನ್’ ಆರಂಭ

April 14, 2026
Next Post
ಸಾಧನೆ ಮಾಡುವುದು ಮಹಿಳೆಯರಿಗೆ  ಅಸಾಧ್ಯವಾದ ಕೆಲಸವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

ಸಾಧನೆ ಮಾಡುವುದು ಮಹಿಳೆಯರಿಗೆ ಅಸಾಧ್ಯವಾದ ಕೆಲಸವಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada