ಬೆಂಗಳೂರು: ಡ್ರಗ್ ಪೆಡ್ಲರ್ ಗಳು ಮಾದಕ ವಸ್ತು ಮಾರಾಟ ಮಾಡಲು ದಿನಕ್ಕೊಂದು ದಾರಿ ಹುಡುಕುತ್ತಿದ್ದಾರೆ. ಸದ್ಯ ತಿನ್ನುವ ಬ್ರೆಡ್ ನಲ್ಲಿ ಕೊಕೈನ್ ಇಟ್ಟು ಪೆಡ್ಲಿಂಗ್ ಮಾಡುತ್ತಿದ್ದ ನೈಜೀರಿಯನ್ ಮೂಲದ ಮಹಿಳೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಬಂಧಿತ ಪೆಡ್ಲರ್ ಆಗಿದ್ದು, ಈಕೆ ಬ್ರೆಡ್ ನ ಒಳಭಾಗದಲ್ಲಿ ಪೀಸ್ ಕಟ್ ಮಾಡಿ ಕೊಕೈನ್ ಇಟ್ಟು ಮುಂಬೈಯಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ ಕೊಕೈನ್ ತರುತ್ತಿದ್ದಳು.
ಹೀಗೆ ಯಾರಿಗೂ ಅನುಮಾನ ಬಾರದಂತೆ ಬ್ರೆಡ್ ನಲ್ಲಿ ಕೊಕೈನ್ ಇಟ್ಟು ತರ್ತಿದ್ದ ಆರೋಪಿತೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆಕೆಯನ್ನ ಬಂಧಿಸಿ 65 ಲಕ್ಷ ಮೌಲ್ಯದ 120 ಗ್ರಾಂ ಕೊಕೈನ್ ವಶಕ್ಕೆ ಪಡೆದಿದ್ದಾರೆ.
ಸದ್ಯ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.



