ಬೆಂಗಳೂರು : ರಾಜ್ಯದಲ್ಲಿ ರಾಜಕೀಯ ನಾಯಕರ ಟಾಕ್ ವಾರ್ ತಣ್ಣಗಾಗುವಷ್ಟರಲ್ಲಿಯೇ ಕರ್ನಾಟಕದಲ್ಲಿ ಈಗ ಸ್ಟಾರ್‌ವಾರ್ ಪ್ರಾರಂಭವಾದಂತಾಗಿದೆ. ನಿನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಮಾರ್ಕ್ ಚಿತ್ರದ ಪ್ರೀ ರಿಲೀಸ್ ಇವೆಂಟ್‌ನಲ್ಲಿ ನಟ ಕಿಚ್ಚ ಸುದೀಪ್ ನೀಡಿರುವ ಹೇಳಿಕೆಯೇ ಇದಕ್ಕೆ ಕಾರಣವಾಗಿದೆ.
ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲಾ, ಆದರೆ ನನ್ನ ಸ್ನೇಹಿತರು ಚೆನ್ನಾಗಿ ಇರಬೇಕು ಅಂತ ಬಾಯಿ ಮುಚ್ಚಿಕೊಂಡು ಇದ್ವಿ. ಬಾಯಿ ಇಲ್ಲಾ ಅಂತ ಅಲ್ಲಾ ಎಂಬ ಮಾತನ್ನಾಡಿದ್ದರು. ಪರೋಕ್ಷವಾಗಿ ನಟ ಅಭಿಮಾನಿಗಳ ಉದ್ದೇಶಿಸಿ ಹೇಳಿದಂತಿತ್ತು. ಹೀಗಾಗಿಯೇ, ದರ್ಶನ್ ಅವ್ರು ಇಲ್ದೇ ಇರುವಾಗ ಕೆಲವೊಬ್ಬರು ಏನೇನೋ ಮಾತಾಡ್ತಾ ಇದ್ದಾರೆ ಎಂದು ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕಿಚ್ಚನಿಗೆ ಭರ್ಜರಿಯಾಗಿಯೇ ಟಾಂಗ್ ನೀಡಿದ್ದಾರೆ.
ಡೆವಿಲ್ ಸಿನಿಮಾ ಯಶಸ್ಸಿನಲ್ಲಿರುವ ವಿಜಯಲಕ್ಷ್ಮಿ ಇಂದು ದಾವಣಗೆರೆಯಲ್ಲಿ ಅಭಿಮಾನಿಗಳೊಂದಿಗೆ ಮಾತನಾಡಿದ್ದಾರೆ. ವೇದಿಕೆ ಮೇಲೆ , ಚಾನಲ್ ಗಳಲ್ಲಿ ಕುತ್ಕೊಂಡು ಮಾತಾಡ್ತಾರೆ. ಜೊತೆಗೆ ಅವ್ರ ಬಗ್ಗೆ ಅವ್ರ ಫ್ಯಾನ್ಸ್ ಬಗ್ಗೆಏನೇನೋ ಮಾತಾಡ್ತಾ ಇರ್ತಾರೆ. ಆದ್ರೆ ದರ್ಶನ್ ಅವ್ರು ಬಂದಾಗ ಅವ್ರು ಬೆಂಗಳೂರಿನಲ್ಲಿ ಇರ್ತಾರೋ ಇಲ್ವೋ ಅನ್ನೋದೆ ಗೊತ್ತಾಗೋದಿಲ್ಲ ಎನ್ನುವ ಮೂಲಕ ಟಕ್ಕರ್ ನೀಡಿದ್ದಾರೆ.



