ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ(Winter Session 2025) ಮುಗಿಸಿ ಇಂದು ಬೆಳಗ್ಗೆ ಬೆಂಗಳೂರಿಗೆ ಬಂದಿದ್ದ ಹಿರಿಯ ಪತ್ರಕರ್ತ ದೊಡ್ಡಬೊಮ್ಮಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬೆಳಗ್ಗೆ ಮೆಜೆಸ್ಟಿಕ್ನಿಂದ ಬಿಎಂಟಿಸಿ ಬಸ್ ನಲ್ಲಿ ಮನೆಗೆ ತೆರಳುವಾಗಲೇ ದೊಡ್ಡಬೊಮ್ಮಯ್ಯಗೆ ಹೃದಯಾಘಾತವಾಗಿದೆ. ಈ ವೇಳೆ ಬಸ್ನಲ್ಲೇ ದೊಡ್ಡಬೊಮ್ಮಯ್ಯ ಕೊನೆಯುಸಿರೆಳಿದ್ದಾರೆ.

ಮೂಲತಃ ಪಾವಗೌಡದ ರೊಪ್ಪ ಗ್ರಾಮದವರು ದೊಡ್ಡಬೊಮ್ಮಯ್ಯ, ದೂರದರ್ಶನ, ಆಕಾಶವಾಣಿಯಲ್ಲಿ ಅನೇಕ ವರ್ಷಗಳ ಕೆಲಸ ಮಾಡಿ ಪ್ರಸ್ತುತ ಸಂಜೆವಾಣಿಯಲ್ಲಿ ಹಿರಿಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದರು. ಹಾಗೂ ಪ್ರಸ್ತುತ ಕರ್ನಾಟಕ ಪತ್ರಕರ್ತ ಸಹಕಾರ ಸಂಘದ ಉಪಾಧ್ಯಕ್ಷರಾಗಿದ್ದರು. ಘಟನೆ ವಿಚಾರ ತಿಳಿದು ಉಪ್ಪಾರಪೇಟೆ ಪೊಲೀಸರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.




