• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, August 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಇದೀಗ

ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಪಂದ್ಯಕ್ಕೆ 17 ಮಾರ್ಗಸೂಚಿ

ಪ್ರತಿಧ್ವನಿ by ಪ್ರತಿಧ್ವನಿ
December 19, 2025
in ಇದೀಗ, ಕರ್ನಾಟಕ
0
ಚಿನ್ನಸ್ವಾಮಿಯಲ್ಲಿ ಕ್ರಿಕೆಟ್ ಪಂದ್ಯಕ್ಕೆ 17 ಮಾರ್ಗಸೂಚಿ
Share on WhatsAppShare on FacebookShare on Telegram

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ(Chinnaswamy Stadium) ಮತ್ತೆ ಕ್ರೀಡಾ ಪಂದ್ಯಾವಳಿಗಳಿಗಳಿಗೆ ರಾಜ್ಯ ಸರ್ಕಾರ(State Government) ಅನುಮತಿ ನೀಡಿದ ಬೆನ್ನಲ್ಲೇ KSCAಗೆ ಕ್ರೀಡಾಂಗಣದಲ್ಲಿ ಕೆಲವು ಅತ್ಯಗತ್ಯ ಭದ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರು ಸೂಚಿಸಲು ನಿರ್ಧರಿಸಿದ್ದಾರೆ.

ADVERTISEMENT
R Ashoka: ಕಾಂಗ್ರೆಸ್‌ ಸರ್ಕಾರಕ್ಕೆ ಹಿಗ್ಗಾಮುಗ್ಗಾ ಜಾಡಿಸಿದ ಆರ್‌ ಅಶೋಕ್‌.! #siddaramaiah #rashoka

ಸ್ಟೇಡಿಯಂ ಬಳಿ ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಪರಿಶೀಲನೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದ ತಜ್ಞರ ಸಮಿತಿ ನೀಡಿರುವ ಕೆಲ ಶಿಫಾರಸುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್‌ಸಿಎ ಆಡಳಿತ ಮಂಡಳಿಗೆ ಪೊಲೀಸರು ಸೂಚಿಸಲು ನಿರ್ಧರಿಸಿದ್ದಾರೆ.

Belagavi Session: ಸಿ ಟಿ ರವಿ ಮಾತಿಗೆ ಆಕ್ರೋಶಗೊಂಡ ಸಂತೋಷ್‌ ಲಾಡ್‌..! #santhoshlad #congress

ಈಗಾಗಲೇ ಕ್ರೀಡಾಂಗಣವನ್ನು ಪರಿಶೀಲಿಸಿ ಕೆಲ ಮಾರ್ಗಸೂಚಿ ನೀಡಲು ನಿರ್ಧರಿಸಲಾಗಿದ್ದು, ಭವಿಷ್ಯದಲ್ಲಿ ಆಯೋಜನೆಯಾಗಲಿರುವ ಐಪಿಎಲ್ ಸೇರಿದಂತೆ ಎಲ್ಲ ಪಂದ್ಯಗಳಿಗೆ ಮಾರ್ಗಸೂಚಿ ಸಿದ್ದವಾಗಿದೆ.

Jaggesh Parliament Speech | ‌ʼರಾಗಿಮುದ್ದೆʼ ಮೂಲಕ ವಿಪಕ್ಷಗಳಿಗೆ ಟಾಂಗ್‌ ಕೊಟ್ಟ ಜಗ್ಗೇಶ್!  #pratidhvani

17 ಮಾರ್ಗಸೂಚಿಗಳ ವಿವರ ಈ ಕೆಳಗಿನಂತಿದೆ.

1. 33 ಸಾವಿರ ಸಾಮರ್ಥ್ಯದ ಕ್ರೀಡಾಂಗಣದ ಸುತ್ತ ಪಾರ್ಕಿಂಗ್ & ಪಿಕ್ ಅಂಡ್ ಡ್ರಾಪ್ ಗೆ ವ್ಯವಸ್ಥೆ ಮಾಡಬೇಕು
2. ಪ್ರವೇಶ ದ್ವಾರಗಳು ಫುಟ್ ಪಾತ್ ಗಳ ಮೇಲೆಯೇ ಇರೋದ್ರಿಂದ ಪ್ರೇಕ್ಷಕರು ಕ್ಯೂ ನಿಲ್ಲುವುದಕ್ಕೆ KSCA ಸ್ವತ್ತಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಬೇಕು.
3. ಕಿರಿದಾದ ಗೇಟ್ ಗಳನ್ನ ಕನಿಷ್ಠ 6 ಅಡಿ ಅಗಲ, ಉಬ್ಬು ತಗ್ಗು, ಮೆಟ್ಟಿಲುಗಳನ್ನ ಸರಿಪಡಿಸಿ, ಎಂಟ್ರಿ & ಎಕ್ಸಿಟ್ ಸುಲಭಗೊಳಿಸಬೇಕು
4. ಅಂತರಾಷ್ಟ್ರೀಯ ಪಂದ್ಯಾವಳಿಗಳ ವೇಳೆ ಮಹಿಳೆಯರು, ಮಕ್ಕಳ ಪ್ರವೇಶ  & ನಿರ್ಗಮನಕ್ಕೆ ಪ್ರತ್ಯೇಕ ವ್ಯಸ್ಥೆ ಮಾಡಬೇಕು
5. ತುರ್ತು ಪರಿಸ್ಥಿತಿ ವೇಲೆ TRIAGE ನಿಯಮಗಳಂತೆ ಆಂಬ್ಯುಲೆನ್ಸ್, ವೈದ್ಯಕೀಯ, ಆಂಬ್ಯುಲೆನ್ಸ್ ಗೆ ಪ್ರತ್ಯೇಕ ಮಾರ್ಗ, ಮೆಡಿಕಲ್ ಎಮೆರ್ಜೆನ್ಸಿ ತಂಡಗಳ ಶಾಶ್ವತ ವ್ಯವಸ್ಥೆ ಮಾಡಬೇಕು

Siddaramaiah ; ನಂಗೆ ರಾಜಕೀಯ ನಿಶಕ್ತಿ ಸಾಧ್ಯನೇ ಇಲ್ಲ.! #pratidhvani   #siddaramaiah #rashok

6. ಅಗ್ನಿಶಾಮಕ ದಳ & ವಿದ್ಯುತ್ ಇಲಾಖೆಯಿಂದ ಆಡಿಟ್ ಮಾಡಿಸಿ ವರದಿ ಪಡೆಯಬೇಕು
7. ಸುರಕ್ಷತೆ ದೃಷ್ಟಿಯಿಂದ ಯೂನಿಕ್ ಐಡಿ ಚೆಕಿಂಗ್, ಬಾಂಬ್ ನಿಷ್ಕ್ರೀಯ ದಳ, ಮೆಟಲ್ ಡಿಟೆಕ್ಟರ್ ಅಳವಡಿಸಿ ನುರಿತ ಸಿಬ್ಬಂದಿ ತರಬೇತಿ ಸಿಬ್ಬಂದಿ ನೇಮಕ ಮಾಡಬೇಕು
8. ಆಟಗಾರರಿಗೆ ಪ್ರತ್ಯೇಕವಾಗಿ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನ ಕಾಯ್ದಿರಸಬೇಕು
9. ತುರ್ತು ಪರಿಸ್ಥಿತಿ ವೇಳೆ ಸಾರ್ವಜನಿಕರಿಗೆ ಸೇಪ್ಟಿ ಪಾಯಿಂಟ್, ಸೇಫ್ ಎಕ್ಸಿಟ್ ಗೆ ಅಂತರಾಷ್ಟ್ರೀಯ ಮಾನದಂಡಗಳ ಯೋಜನೆ ತಯಾರಿಸಬೇಕು
10. ಪ್ರವೇಶ ದ್ವಾರಗಳ ಬಳಿ ಬ್ಯಾಗೇಜ್ ಸ್ಕ್ಯಾನರ್ ಗಳ ಅಳವಡಿಸಿ ಸಿಸಿಟಿವಿ ಕಣ್ಗಾವಲಿನಲ್ಲಿ ಧೀರ್ಘಾವಧಿ ಸ್ಟೋರೆಜ್ ವ್ಯವಸ್ಥೆ ಮಾಡಬೇಕು.

Belagavi Session: ಪದೇ ಪದೇ ಸಿಎಂ ಬದಲಾವಣೆ ಬಗ್ಗೆ ಪ್ರಸ್ತಾಪಿಸ್ತಿದ್ದ ಬಿಜೆಪಿ ನಾಯಕರಿಗೆ ಸಿದ್ದು ಖಡಕ್ ಟಾಂಗ್

11. ಕೆಲಸಗಾರರು, ಸೆಕ್ಯೂರಿಟಿ ಗಾರ್ಡ್, ಮಳಿಗೆ ಇಡುವವರ ಬಗ್ಗೆ ಪೊಲೀಸ್ ವೆರಿಫಿಕೇಷನ್ ಸರ್ಟಿಫಿಕೇಟ್ ಜೊತೆ ಸೆಕ್ಯೂರಿಟಿ ಏಜೆನ್ಸಿಗಳ ಲೈಸೆನ್ಸ್ ಪಡೆಯಬೇಕು
12. ಪಂದ್ಯದ ವೇಳೆ ಒಳಗಡೆ ಮಾರಾಟ ಮಾಡುವ ತಿಂಡಿ, ತಿನಿಸುಗಳ ಪರಿಶೀಲನೆಗೆ ನಿರ್ದಿಷ್ಟ ಮಾನದಂಡ ನಿಗದಿಪಡಿಸಬೇಕು
13. ಸಾರ್ವಜನಿಕ ಸಾರಿಗೆ ಮೂಲಕ ಬರುವ ಪ್ರೇಕ್ಷಕರ ಪ್ರವೇಶ ಮತ್ತು ನಿರ್ಗಮನಕ್ಕೆ ಸರಿಯಾದ ವ್ಯವಸ್ಥೆ ಮಾಡಬೇಕು
14. ಅಂತರಾಷ್ಟ್ರೀಯ ಗುಣಮಟ್ಟದ ಗುಂಪು ನಿರ್ವಹಣೆ & ಮೂಲಭೂತ ಸೌಕರ್ಯಗಳ ವ್ಯವಸ್ಥೆ ಮಾಡಬೇಕು
15. ಪ್ರೇಕ್ಷಕರ ಪ್ರವೇಶ ಸಂಖ್ಯೆ ನಿಖರತೆಗಾಗಿ Real Time Crowd Flow Monitoring System ವ್ಯವಸ್ಥೆ ಮಾಡಬೇಕು

CT Ravi: ಗೃಹಲಕ್ಷ್ಮಿ ಹಣ..ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ದ ಸಿಟಿ ರವಿ ವಾಗ್ದಾಳಿ..! #lakshmihebbalkar

16. ಟಿಕೆಟ್ ವಿಚಾರಣೆ, ಮಾರಾಟ, ವೇಟಿಂಗ್ ಮಾಡುವರಿಗೆ ಪ್ರತ್ಯೇಕ ಸ್ಥಳಗಳನ್ನ ವ್ಯವಸ್ಥೆ ಮಾಡಬೇಕು
17. 2025ರ IPL ಭದ್ರತೆಯ ವೆಚ್ಚ 2.04 ಕೋಟಿ ರೂ.ಗಳನ್ನ ತಕ್ಷಣ ಪಾವತಿ ಮಾಡಬೇಕು ಎಂಬ ಷರತ್ತಿನೊಂದಿಗೆ ಈ ಮಾರ್ಗಸೂಚಿಗಳನ್ನ ಪಟ್ಟಿ ಮಾಡಲಾಗಿದ್ದು, ಶೀಘ್ರದಲ್ಲೇ ಕೆಎಸ್‌ಸಿಎ ಆಡಳಿತ ಮಂಡಳಿಗೆ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

Jaggesh Parliament Speech | ‌ʼರಾಗಿಮುದ್ದೆʼ ಮೂಲಕ ವಿಪಕ್ಷಗಳಿಗೆ ಟಾಂಗ್‌ ಕೊಟ್ಟ ಜಗ್ಗೇಶ್!  #pratidhvani

ಇನ್ನು ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯವನ್ನು ಬೆಂಗಳೂರಿನಲ್ಲೇ ನಡೆಸುವಂತೆ ಬಿಸಿಸಿಐಗೆ ಮನವಿ ಮಾಡಲಾಗಿದ್ದು, ಮಾತುಕತೆ ನಡೆಸಲಾಗುತ್ತಿದೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಇತ್ತೀಚಿಗೆ ತಿಳಿಸಿದ್ದರು. ರಾಜ್ಯ ಕ್ರಿಕೆಟ್ ಸಂಸ್ಥೆಯ ಮನವಿಗೆ ಬಿಸಿಸಿಐ ಸಹ‌ ಸ್ಪಂದಿಸಿದ್ದು ಮೌಖಿಕವಾಗಿ ಸಮ್ಮತಿ ನೀಡಲಾಗಿದೆ ಎನ್ನಲಾಗುತ್ತಿದೆ.

Tags: Chinnaswamy Stadiumchinnaswamy stampedeKSCA
Previous Post

ಹುಣಸೆ, ಹಲಸು ಮತ್ತು ನೇರಳೆಗಾಗಿ ರಾಷ್ಟ್ರೀಯ ಮಂಡಳಿ ರಚಿಸಲು ಕೇಂದ್ರಕ್ಕೆ ದೇವೇಗೌಡರ ಮನವಿ

Next Post

Bengaluru Second Airport: 2033ರವರೆಗೂ ಕಾಲಾವಕಾಶವಿದ್ದರೂ ಸರ್ಕಾರ ಟೆಂಡರ್ ಕರೆದಿದ್ಯಾಕೆ?

Related Posts

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು
Top Story

ಗೃಹಲಕ್ಷ್ಮಿ ಯೋಜನೆಗೆ ಮೂರು ವರ್ಷದ ಸಂಭ್ರಮ: ಗುಲಾಬಿ ಬಣ್ಣದ ಬೆಳಕಿನಲ್ಲಿ ಕಂಗೊಳಿಸಲಿವೆ ಸರ್ಕಾರಿ ಕಟ್ಟಡಗಳು

by ಪ್ರತಿಧ್ವನಿ
August 30, 2026
0

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಆರಂಭವಾಗಿ ಮೂರು ವರ್ಷಗಳು ಪೂರ್ಣಗೊಂಡಿದೆ. ರಾಜ್ಯದ ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ₹2,000...

Read moreDetails
ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

August 29, 2026
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
Next Post
Bengaluru Second Airport: 2033ರವರೆಗೂ ಕಾಲಾವಕಾಶವಿದ್ದರೂ ಸರ್ಕಾರ ಟೆಂಡರ್ ಕರೆದಿದ್ಯಾಕೆ?

Bengaluru Second Airport: 2033ರವರೆಗೂ ಕಾಲಾವಕಾಶವಿದ್ದರೂ ಸರ್ಕಾರ ಟೆಂಡರ್ ಕರೆದಿದ್ಯಾಕೆ?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada