ಭಾರತದ ಪ್ರೀಮಿಯರ್ ಲೀಗ್ (IPL) 2026 ಮಿನಿ ಹರಾಜು(IPL 2026 Mini Auction) ನಿನ್ನೆ ಅಬುಧಾಬಿಯಲ್ಲಿ ನಡೆದಿದ್ದು, ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಲಾಗಿದ್ದ 369 ಆಟಗಾರರ ಪೈಕಿ ಒಟ್ಟು 77 ಸ್ಥಾನಗಳನ್ನು ತುಂಬಲಾಗಿದೆ.

ಈ ಬಾರಿ ಮಿನಿ ಹರಾಜಿನಲ್ಲಿ ಕಡಿಮೆ ಬಜೆಟ್ ಇದ್ದರೂ ಕೂಡ ಆರ್‌ಸಿಬಿ ಫ್ರಾಂಚೈಸಿ ಬಹಳ ಬುದ್ಧಿವಂತಿಕೆಯಿಂದ ಆಟಗಾರರನ್ನು ಆಯ್ದುಕೊಂಡಿದೆ. ಟಾರ್ಗೆಟ್ ಲಿಸ್ಟ್ನಲ್ಲಿದ್ದ ಆಟಗಾರರ ಹಿಂದೆ ಬಿದ್ದ ಆರ್‌ಸಿಬಿ, ಅಂದುಕೊಂಡಂತೆ ಬಹುತೇಕ ಆಟಗಾರರನ್ನು ಬೇಟೆಯಾಡುವಲ್ಲಿ ಯಶಸ್ವಿಯಾಗಿದೆ. 16.4 ಕೋಟಿ ಬಜೆಟ್‌ನಲ್ಲಿ ಪಕ್ಕಾ ಲೆಕ್ಕಾಚಾರ ಹಾಕಿ ಆರ್‌ಸಿಬಿ ತನ್ನ ಆಟಗಾರರನ್ನು ಆಯ್ದುಕೊಂಡಿದೆ.

ಐಪಿಎಲ್ 2026 ಮಿನಿ-ಹರಾಜಿನಲ್ಲಿ ಆರ್‌ಸಿಬಿ ಖರೀದಿ ಮಾಡಿದ ಆಟಗಾರರ ವಿವರ ಈ ಕೆಳಗಿನಂತಿದೆ.
1) ವೆಂಕಟೇಶ್ ಅಯ್ಯರ್ (ಭಾರತ), ರೂ 7 ಕೋಟಿ
2) ಮಂಗೇಶ್ ಯಾದವ್ (ಭಾರತ) ರೂ 5.20 ಕೋಟಿ
3) ಜಾಕೋಬ್ ಡಫಿ (ನ್ಯೂಜಿಲೆಂಡ್) ರೂ 2 ಕೋಟಿ
4) ಜೋರ್ಡಾನ್ ಕಾಕ್ಸ್ (ಇಂಗ್ಲೆಂಡ್) ರೂ 75 ಲಕ್ಷ
5) ಸಾತ್ವಿಕ್ ದೇಸ್ವಾಲ್ (ಭಾರತ) ರೂ 30 ಲಕ್ಷ
6) ವಿಹಾನ್ ಮಲ್ಹೋತ್ರಾ (ಭಾರತ) ರೂ 30 ಲಕ್ಷ
7) ಕನಿಷ್ಕ್ ಚೌಹಾಣ್ (ಭಾರತ) ರೂ 30 ಲಕ್ಷ











