ಕನ್ನಡ ಚಿತ್ರರಂಗಕ್ಕೆ(Sandalwood) ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ(Arjun Janya) ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ 45 ಸಿನಿಮಾದ ಟ್ರೈಲರ್ ಈಗಾಗಲೇ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ದಾಖಲೆಯ ವೀವ್ಸ್ ಪಡೆದುಕೊಳ್ಳುತ್ತಿದೆ.

ನಿನ್ನೆ ಬೆಂಗಳೂರಿನ ಬಸವನಗುಡಿಯ ಶ್ರೀನಿವಾಸನಗರ ಮೈದಾನದಲ್ಲಿ 45 ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆದಿದೆ. ರಾಜ್ಯದ ಏಳು ಜಿಲ್ಲೆಗಳಲ್ಲಿ ಏಕಕಾಲಕ್ಕೆ 45 ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಲಾಗಿದ್ದು, ಟ್ರೈಲರ್ ರಿಲೀಸ್ ಆಗಿ 14 ಗಂಟೆಗಳಲ್ಲಿ 19 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಸದ್ಯ 45 ಸಿನಿಮಾದ ಟ್ರೈಲರ್ ದಾಖಲೆ ನಿರ್ಮಿಸುವತ್ತ ಮುನ್ನುಗ್ಗುತ್ತಿದೆ.

ಅರ್ಜುನ್ ಜನ್ಯಾ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ಶಿವ ರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಸುಧಾರಾಣಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಒಬ್ಬರಿಗಿಂತ ಒಬ್ಬರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಹೇಗಿದೆ 45 ಟ್ರೈಲರ್..?
ಟ್ರೈಲರ್‌ನಲ್ಲಿ ಉಪೇಂದ್ರ ಅವರ ಮಸ್ತ್ ಡೈಲಾಗ್‌ಗಳು ಸಿನಿಪ್ರಿಯರನ್ನು ಸೆಳೆದರೆ, ಸರ್ಪ್ರೈಸ್ ಎನಿಸುವಂತೆ ಶಿವಣ್ಣ ಭರತನಾಟ್ಯ ಲುಕ್‌ನಲ್ಲಿ ಹುಡುಗಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಿವಣ್ಣ ಅವರ ಈ ಲುಕ್ 45 ಚಿತ್ರದ ಮೇಲಿನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ. ಇನ್ನು ರಾಜ್ ಬಿ ಶೆಟ್ಟಿ ಒದ್ದಾಟ ಸಿನಿ ಪ್ರಿಯರನ್ನು ಹಿಡಿದಿಟ್ಟುಕೊಂಡಿದೆ.

ಇನ್ನು 45 ಕಂಪ್ಲೀಟ್ ಆಕ್ಷನ್ ದೃಶ್ಯಗಳಿರುವ ಸಿನಿಮಾ ಎಂದು ಗೆಸ್ ಮಾಡಬಹುದಾಗಿದೆ. ಟ್ರೈಲರ್‌ನಲ್ಲಿ ತೋರಿಸಿರುವಂತೆ ಮನುಷ್ಯನ ಹುಟ್ಟಿನಿಂದ ಸಾವಿನ ತನಕ ನಡೆಯುವ ಪಾಪ ಪುಣ್ಯಗಳ ಲೆಕ್ಕಾಚಾರ ಸಿನಿಮಾದ ಕಥೆಯ ಎಳೆಯಾಗಿದ್ದು, ಕಥೆಗೆ ಅನುಗುಣವಾಗಿ ಉಪೇಂದ್ರ ಬಳಸುವ ಬೈಕ್ ಕಾರ್‌ಗಳನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಸದ್ಯ 45 ಸಿನಿಮಾದ ಟ್ರೈಲರ್ ಟ್ರೆಂಡಿಂಗ್‌ನಲ್ಲಿದ್ದು, ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.





