ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಬ್ಯಾರಕ್ ಗೆ ಟಿವಿ ಅಳವಡಿಸಲಾಗಿದೆ. ಇದರಿಂದ ನಾಳೆ ಬಿಡುಗಡೆಯಾಗುವ ಡೆವಿಲ್ ಸಿನಿಮಾ ಪ್ರತಿಕ್ರಿಯೆ ನೋಡುವ ಅವಕಾಶ ಕೂಡ ದರ್ಶನ್ ಗೆ ಸಿಕ್ಕಿದೆ.
ಕಳೆದ ಬುಧವಾರ ನಡೆದ ವಿಚಾರಣೆ ವೇಳೆ ಸಹ ಆರೋಪಿ ಲಕ್ಷ್ಮಣ್, ಜೈಲಿನಲ್ಲಿ ನಮಗೆ ತಲೆಯೆಲ್ಲಾ ಕೆಡುತ್ತಿದೆ ಹೀಗಾಗಿ ಟಿವಿ ಹಾಕಿಸಿಕೊಡುವಂತೆ ನ್ಯಾಯಾಧೀಶರಗೆ ಮನವಿ ಮಾಡಿದ್ದ. ಈ ಮನವಿ
ಪರಿಶೀಲಿಸಿದ ಕೋರ್ಟ್ ದರ್ಶನ್ & ಲಕ್ಷ್ಮಣ್ ಜೊತೆಗೆ ಇರುವ ಬ್ಯಾರಕ್ ಗೆ ಟಿವಿ ಅಳವಡಿಸಲು ಸೂಚಿಸಿತ್ತು. ಹಾಗೆ ಟಿವಿ ಅಳವಡಿಕೆವರೆಗೂ ಬೇರೆ ಬ್ಯಾರಕ್ ನಲ್ಲಿ ಆರೋಪಿಗಳಿಗೆ ಟಿವಿ ನೋಡಲು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿತ್ತು.
ಸದ್ಯ ನ್ಯಾಯಾಧೀಶರ ಸೂಚನೆಯಂತೆ ಲಕ್ಣ್ಮಣ್, ದರ್ಶನ್ ಇರೋ ಬ್ಯಾರಕ್ ಗೆ ಟಿವಿ ಅಳವಡಿಸಲಾಗಿದೆ. ಇದರ ಜೊತೆಗೆ ಬ್ಯಾರಕ್ ಗೆ ಸಿಸಿಟಿವಿ ಕೂಡ ಅವಳಡಿಕೆ ಮಾಡಿದ್ದು ಬ್ಯಾರಕ್ ನಲ್ಲಿ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಲಾಗಿದೆ.













