ನಟಿಯೊಬ್ಬರನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಮಲಯಾಳಂ(Malayalam) ನಟ ದಿಲೀಪ್‌ಗೆ(Dileep) ಸುಮಾರು ಎಂಟು ವರ್ಷಗಳ ಕಾನೂನು ಹೋರಾಟದ ಫಲವಾಗಿ ಇದೀಗ ರಿಲೀಫ್ ಸಿಕ್ಕಿದೆ.

ಮಲಯಾಳಂ ನಟ ದಿಲೀಪ್ ಮೇಲಿದ್ದ ಪ್ರಕರಣವನ್ನು ಎರ್ನಾಕುಲಂನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು ಖುಲಾಸೆಗೊಳಿಸಿದೆ. ನ್ಯಾಯಮೂರ್ತಿ ಹನಿ ಎಂ. ವರ್ಗೀಸ್ ಅವರು ಮುಕ್ತ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದ್ದು, ನಟ ದಿಲೀಪ್ ಸೇರಿದಂತೆ ಇತರ ಮೂರು ಆರೋಪಿಗಳನ್ನು ದೋಷ ಮುಕ್ತ ಎಂದು ಘೋಷಿಸಿದೆ.

2017ರಲ್ಲಿ ನಡೆದ ಮಲಯಾಳಂ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಇತರ ಆರೋಪಿಗಳಾದ ಪಲ್ಸರ್ ಸುನಿ (ಎ1), ಮಾರ್ಟಿಂಗ್ ಆಂಟನಿ (ಎ2), ಬಿ. ಮಣಿಕಂದನ್ (ಎ3), ವಿಪಿ ವಿಜೀಶ್ (ಎ4), ಎಚ್. ಸಲೀಮ್ (ಎ5), ಸಿ. ಪ್ರದೀಪ್ (ಎ 6) ಅವರನ್ನು ತಪ್ಪಿತಸ್ಥರೆಂದು ಘೋಷಿಸಿರುವ ನ್ಯಾಯಾಲಯ ಡಿಸೆಂಬರ್ 12ರಂದು ಶಿಕ್ಷೆ ಪ್ರಕಟ ಮಾಡಲಿದೆ.






