ಮೇಷ ರಾಶಿಯ ಈ ದಿನದ ಭವಿಷ್ಯ

ಮೇಷ ರಾಶಿಯವರಿಗೆ ಇಂದು ಕೆಲಸಗಳಲ್ಲಿ ಚುರುಕು ಹೆಚ್ಚಾಗುತ್ತದೆ. ನಿಮ್ಮ ನಾಯಕತ್ವ ಗುಣಕ್ಕೆ ಮೆಚ್ಚುಗೆ ಸಿಗುತ್ತದೆ. ಹೊಸ ಯೋಜನೆ ಆರಂಭಿಸಲು ಉತ್ತಮ ಸಮಯ, ಆದರೆ ಅವುಗಳ ಬಗ್ಗೆ ಧೈರ್ಯದಿಂದ ಮುಂದುವರಿಯಬೇಕು. ಇಂದು ಅತಿವೇಗದ ನಿರ್ಧಾರಗಳನ್ನು ತಪ್ಪಿಸಿ. ಆರೋಗ್ಯದ ಹಿತ ದೃಷ್ಟಿಯಿಂದ ನೀರು ಹೆಚ್ಚು ಸೇವಿಸಿ.
ವೃಷಭ ರಾಶಿಯ ಈ ದಿನದ ಭವಿಷ್ಯ

ವೃಷಭ ರಾಶಿಯವರ ಕುಟುಂಬದಲ್ಲಿ ಇಂದು ಸುಖ ಶಾಂತಿ ಹೆಚ್ಚಾಗುತ್ತದೆ. ಹಣಕಾಸು ವಿಷಯದಲ್ಲಿ ಧೃತಿಗೆಟ್ಟಿದ್ದದ್ದು ಸುಧಾರಣೆ ಕಾಣಬಹುದು. ಹಳೆಯ ವಿವಾದಗಳಿಗೆ ಇಂದು ಶಾಂತಿಯುತ ಪರಿಹಾರ ದೊರೆಯಬಹುದು. ಕೆಲ ನಿರ್ಧಾರದಲ್ಲಿ ಮನೆಯವರ ಮಾತು ಕೇಳಿ ಹಾಗೂ ಅವರಿಗೆ ಸೌಮ್ಯವಾಗಿ ಪ್ರತಿಕ್ರಿಯೆ ನೀಡಿ.
ಮಿಥುನ ರಾಶಿಯ ಈ ದಿನದ ಭವಿಷ್ಯ

ಮಿಥುನ ರಾಶಿಯವರಿಗೆ ಇಂದು ಕೆಲಸದಲ್ಲಿ ಒತ್ತಡ ಹೆಚ್ಚಾದರೂ ನಿಮ್ಮ ಯೋಜನೆಗಳು ಸರಿಯಾದ ದಿಕ್ಕಿನಲ್ಲಿ ಸಾಗುತ್ತವೆ. ಮಧ್ಯಾಹ್ನದ ನಂತರ ಮನಸ್ಸು ಹಗುರವಾಗುತ್ತದೆ. ಮಾತಿನಲ್ಲಿ ಜಾಗರೂಕತೆ ಅಗತ್ಯ. ಅಪ್ರಸ್ತುತ ಚರ್ಚೆಗಳನ್ನು ತಪ್ಪಿಸುವುದು ಉತ್ತಮ.
ಕಟಕ ರಾಶಿಯ ಈ ದಿನದ ಭವಿಷ್ಯ

ಕಟಕ ರಾಶಿಯವರ ಮನೆಯಲ್ಲಿ ಇಂದು ಸಂತೋಷದ ವಾತಾವರಣ ಇರುತ್ತದೆ. ಮಕ್ಕಳ ಅಥವಾ ಮನೆಯವರಿಂದ ಒಂದು ಸಿಹಿ ಸುದ್ದಿ ಸಿಗಲಿದೆ. ಸ್ನೇಹಿತರಿಂದ ಸಹಾಯ ಸಿಗಲಿದೆ. ಆಹಾರದಲ್ಲಿ ಎಚ್ಚರಿಕೆ ಇರಲಿ. ಕಾಲು ಕೈಗಳಲ್ಲಿ ಸಣ್ಣ ನೋವು ಕಾಣಿಸಿಕೊಳ್ಳಬಹುದು.
ಸಿಂಹ ರಾಶಿಯ ಈ ದಿನದ ಭವಿಷ್ಯ

ಸಿಂಹ ರಾಶಿಯವರಿಗೆ ಇಂದು ಕಾರ್ಯಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ಮೆಚ್ಚುಗೆ ಪಡೆಯುತ್ತದೆ. ಹಣಕಾಸಿನಲ್ಲಿ ಎಚ್ಚರಿಕೆ ಇರಲಿ. ಹೊಸ ಪರಿಚಯಗಳು ಆಗುವ ಸಾಧ್ಯತೆ ಇದೆ. ಇಂದು ದೊಡ್ಡ ಹೂಡಿಕೆಗಳನ್ನು ತಪ್ಪಿಸಿ.
ಕನ್ಯಾ ರಾಶಿಯ ಈ ದಿನದ ಭವಿಷ್ಯ

ಕನ್ಯಾ ರಾಶಿಯವರಿಗೆ ಇಂದು ಶಾಂತಿಯುತ, ಸಮತೋಲನದ ದಿನ. ಧ್ಯಾನ ಅಥವಾ ಆಧ್ಯಾತ್ಮಿಕ ಚಟುವಟಿಕೆ ನಿಮಗೆ ನೆಮ್ಮದಿ ನೀಡುತ್ತದೆ. ಮನಸ್ಸು ಸ್ಪಷ್ಟವಾಗಿ ಕೆಲಸ ಮಾಡುತ್ತದೆ. ಇಂದು ದೊಡ್ಡ ನಿರ್ಧಾರಗಳನ್ನು ಮಾಡಬಹುದು ಆತಂಕ ಬೇಡ.
ತುಲಾ ರಾಶಿಯ ಈ ದಿನದ ಭವಿಷ್ಯ

ತುಲಾ ರಾಶಿಯವರು ಇಂದು ಸಾಮಾಜಿಕವಾಗಿ ಹೆಚ್ಚಿನ ಮನ್ನಣೆ ಗಳಿಸುವಿರಿ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸ್ನೇಹಿತರಿಂದ ಕೆಲವು ಉಪಯುಕ್ತ ಸಲಹೆಗಳು ದೊರೆಯಬಹುದು. ಅನಗತ್ಯ ಖರೀದಿಯನ್ನು ಸಂಪೂರ್ಣ ತಪ್ಪಿಸಿ.
ವೃಶ್ಚಿಕ ರಾಶಿಯ ಈ ದಿನದ ಭವಿಷ್ಯ

ವೃಶ್ಚಿಕ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಹಿರಿಯರ ಮೆಚ್ಚುಗೆ ಸಿಗಲಿದೆ. ಆರ್ಥಿಕವಾಗಿ ಉತ್ತಮವಾದ ದಿನ. ಆತ್ಮವಿಶ್ವಾಸ ಹೆಚ್ಚಾಗಿ ಕಾಣುತ್ತದೆ. ಕುಟುಂಬದಲ್ಲಿ ಒಗ್ಗಟ್ಟು ಹೆಚ್ಚಾಗುತ್ತದೆ. ಹೊಸ ಯೋಜನೆ ಆರಂಭಿಸಲು ಉತ್ತಮವಾದ ದಿನ.
ಧನು ರಾಶಿಯ ಈ ದಿನದ ಭವಿಷ್ಯ

ಧನು ರಾಶಿಯವರಿಗೆ ಇಂದು ಹೊಸ ಪರಿಚಯಗಳಿಂದ ಭವಿಷ್ಯದಲ್ಲಿ ಲಾಭಕಾರಿಯಾಗಲಿದೆ. ಪ್ರಯಾಣದ ವೇಳೆ ಹೆಚ್ಚು ಜಾಗರೂಕತೆ ಅಗತ್ಯ. ಕೌಟುಂಬಿಕವಾಗಿ ಉತ್ತಮ ಸಮಯ ಕಳೆಯುವಿರಿ.
ಮಕರ ರಾಶಿಯ ಈ ದಿನದ ಭವಿಷ್ಯ

ಮಕರ ರಾಶಿಯವರಿಗೆ ಹಳೆಯ ಕೆಲಸಗಳು ಇಂದು ಯಶಸ್ವಿಯಾಗಿ ಪೂರ್ಣಗೊಳ್ಳಬಹುದು. ಹಣಕಾಸಿನಲ್ಲಿ ಚೇತರಿಕೆಯಾಗಲಿದೆ. ಬಾಕಿಗಳು ತೀರಲು ಇಂದು ಉತ್ತಮ ಸಮಯ. ಹೊಸ ಯೋಜನೆಗೆ ಕುಟುಂಬ ಬೆಂಬಲ ಸಿಗುತ್ತದೆ. ವ್ಯವಹಾರಗಳಲ್ಲಿ ಸ್ಪಷ್ಟತೆ ಇರಲಿ.
ಕುಂಭ ರಾಶಿಯ ಈ ದಿನದ ಭವಿಷ್ಯ

ಕುಂಭ ರಾಶಿಯವರಿಗೆ ಇಂದು ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಆದರೆ ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆರೋಗ್ಯದ ಹಿತದೃಷ್ಟಿಯಿಂದ ಹೆಚ್ಚುವರಿ ವಿಶ್ರಾಂತಿ ಅಗತ್ಯವಾಗಿದೆ. ಅನಾವಶ್ಯಕ ಚಿಂತೆ ತಪ್ಪಿಸಿ
ಮೀನ ರಾಶಿಯ ಈ ದಿನದ ಭವಿಷ್ಯ

ಮೀನ ರಾಶಿಯವರಿಗೆ ಇಂದು ಆರ್ಥಿಕವಾಗಿ ಉತ್ತಮ ಅವಕಾಶ ಸಿಗುತ್ತದೆ. ಮನೆಯಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಹೊಸ ಕಲ್ಪನೆಗಳು ಯಶಸ್ವಿಯಾಗುವ ಸೂಚನೆ ಇದೆ. ನಿಮ್ಮ ಸೃಜನಶೀಲತೆಯನ್ನು ಬಳಸಿಕೊಳ್ಳಿ ಕೆಲಸ ಸ್ಥಳದಲ್ಲಿ ಅವಕಾಶ ಹೆಚ್ಚಾಗಲಿದೆ.











