ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ(Kempegowda International Airport) ಆಗಮನ ಹಾಗೂ ನಿರ್ಗಮ ಪ್ರದೇಶದಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಕೆಐಎಎಲ್ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ. ಡಿಸೆಂಬರ್ 8ರಿಂದ ಈ ನಿಯಮ ಅಧೀಕೃತವಾಗಿ ಜಾರಿಯಾಗಲಿದ್ದು, ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಗಮನಿಸಬೇಕಾಗಿದೆ.

ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಬಿಡಲು ಹಾಗೂ ಹತ್ತಿಸಿಕೊಳ್ಳಲು ಬರುವ ಕಾರುಗಳು ಪಿಕಪ್ ಮತ್ತು ಡ್ರಾಪ್ ಪಾಯಿಂಟ್‌ನಲ್ಲಿ ನಿಲ್ಲುವುದರಿಂದ ಟ್ರಾಫಿಕ್ ಜಾಮ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆಐಎಎಲ್ ಮಹತ್ವದ ನಿಮಯವನ್ನು ಜಾರಿಗೆ ತರಲು ಸಜ್ಜಾಗಿದೆ.

ವಿಮಾನ ನಿಲ್ದಾಣದ ಪಿಕಪ್ ಮತ್ತು ಡ್ರಾಪ್ ಪಾಯಿಂಟ್‌ನಲ್ಲಿ ಬರುವ ವಾಹನಗಳಿಗೆ ನಿರ್ದಿಷ್ಟ ಸಮಯ ನಿಗದಿ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನಗಳನ್ನು ಗರಿಷ್ಠ 8 ನಿಮಿಷ ನಿಲ್ಲಿಸಬಹುದು. ಅದನ್ನು ಮೀರಿದರೆ 8-13 ನಿಮಿಷಗಳ ಕಾಲ ಉಳಿಯಲು ರೂ.150/- ಶುಲ್ಕ ಕಟ್ಟಬೇಕಾಗುತ್ತದೆ. ಹಾಗೂ 13-18 ನಿಮಿಷಗಳಿಗೆ ರೂ.300/- ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಕಾಲ ವಾಹನ ನಿಲ್ಲಿಸಿದರೆ ಹತ್ತಿರದ ಪೊಲೀಸ್ ಠಾಣೆಗೆ ಕಾರನ್ನು ಟೋಯಿಂಗ್ ಮಾಡುವ ಹೊಸ ನಿಯಮ ಜಾರಿಯಾಗಲಿದೆ.












