ಬೆಂಗಳೂರು : ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂದಾನ ವಿವಾಹ ಮುಂದೂಡಿಕೆಯ ಬಗ್ಗೆ ಸಾಕಷ್ಟು ಗೊಂದಲಗಳು ಮೂಡುತ್ತಿವೆ. ಪೂರ್ವ ನಿಗದಿಯಂತೆ ನಡೆಯಬೇಕಿದ್ದ ಖ್ಯಾತ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆ ಸ್ಮೃತಿ ಮಂದಾನ ವಿವಾಹ ದಿಡೀರ್ ಮುಂದೂಡಲಾಗಿತ್ತು.

ಸ್ಮೃತಿ ತಂದೆಗೆ ಅನಾರೋಗ್ಯ ಹಿನ್ನೆಲೆ ಮಂಧನಾ ಅವರ ಮದುವೆ ಮುಂದೂಡಿಕೆ ಬೆನ್ನಲ್ಲೇ ಅವರ ಭಾವಿ ಪತಿ ಪಾಲಶ್ ಮುಚ್ಚಲ್ ಅವರಿಗೂ ಅನಾರೋಗ್ಯ ಕಾಣಿಸಿಕೊಂಡಿದೆ. ಇದರ ಮಧ್ಯೆ ಒಂದು ವಾರಗಳ ಕಾಲ ನಡೆದ ಮದುವೆ ಸಂಭ್ರಮದ ಹಲವು ವಿಡಿಯೊಗಳನ್ನು ಸ್ಮೃತಿ ಅಳಿಸಿ ಹಾಕಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

ಆರಂಭದಲ್ಲಿ ಸ್ಮೃತಿ ತಂದೆಯ ಅನಾರೋಗ್ಯದ ಕಾರಣಕ್ಕೆ ವಿವಾಹ ಮುಂದೂಡಿರುವ ಬಗ್ಗೆ ಆಟಗಾರ್ತಿ ಮಂದಾನ ಮ್ಯಾನೇಜರ್ ಬಹಿರಂಗ ಪಡಿಸಿದ್ದರು. ಆದರೆ ಇದೀಗ ಈ ವಿಚಾರದಲ್ಲಿ ಸಾಕಷ್ಟು ಊಹಾಪೋಹಗಳು ಸೃಷ್ಟಿಯಾಗಿದ್ದು, ಪಲಾಶ್ ಮುಚ್ಚಲ್ ಇನ್ನೊಬ್ಬ ಯುವತಿಯೊಂದಿಗೆ ಆತ್ಮೀಯವಾಗಿ ಚಾಟಿಂಗ್ ಮಾಡಿರುವ ಸಂಗತಿ ಬಯಲಾಗಿದೆ. ಇದಕ್ಕೆ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ವೈರಲ್ ಆಗುತ್ತಿವೆ. ಈ ಮೂಲಕ ಸ್ಟಾರ್ ಆಟಗಾರ್ತಿ ಬಾಳಲ್ಲಿ ಬಿರುಗಾಳಿ ಬೀಸಿತಾ? ವಿವಾಹದ ವಿಚಾರದಲ್ಲಿ ಮಂದಾನ ಎಡವಿದ್ರಾ? ಎಂಬ ಚರ್ಚೆಗಳು ನಡೆಯುತ್ತಿವೆ.













