ಇತ್ತೀಚೆಗೆ ಜೀ ಮ್ಯೂಸಿಕ್ ಮೊತ್ತಮೊದಲ ಬಾರಿಗೆ ಕನ್ನಡದಲ್ಲಿ ಬಿಡುಗಡೆ ಗೊಳಿಸಿದ ʼಕೊರಗಜ್ಜʼ ಚಿತ್ರದ, ಜಾವೆದ್ ಆಲಿ ಮತ್ತು ಸುಧೀರ್ ಅತ್ತಾವರ್ ಹಾಡಿರುವ, ಗೋಪಿ ಸುಂದರ್ ಸಂಗೀತ ಮತ್ತು ಸುಧೀರ್ ಅತ್ತಾವರ್ ಸಾಹಿತ್ಯದ ಗುಳಿಗಾ..ಗುಳಿಗಾ..ಹಾಡಿನ ಅಬ್ಬರ ದೇಶದೆಲ್ಲೆಡೆ ಹಬ್ಬಿ ಹವಾ ಎಬ್ಬಿಸುತ್ತಿದೆ.

ಭಯಂಕರ ಉಗ್ರ ರೂಪದ ಕಾರಣಿಕದ ʼಗುಳಿಗದೈವʼ ಈ ಹಾಡಿನಿಂದ ಕ್ರೋಧ ಗೊಂಡಿರಬಹುದೇ ಅಥವಾ ದೈವಕ್ಕೆ ಅಪಚಾರಾಗಿರಬಹುದೇ ಎನ್ನುವ ಸಂಶಯದಿಂದ ನಿರ್ದೇಶಕ ಸುಧೀರ್ ಅತ್ತಾವರ್ ಅವರು ಕೇರಳದ ತ್ರಿಶೂರ್ ನಲ್ಲಿರುವ ಮಂಗಳೂರು ಮೂಲದ ಪ್ರಸಿದ್ಧ ಜ್ಯೋತಿಷ್ಯ ವಿಧ್ವಾನ್, ವರುಣ್ ಭಟ್ ಅರವರಲ್ಲಿ ಪ್ರಶ್ನೆ ಇಟ್ಟು ಕೇಳಿದಾದ್ದಾರೆ.

ಈ ವೇಳೆ ಚಿಂತನ-ಮಂತನ ನಡೆಸಿದ ಜ್ಯೋತಿಷ್ಯರು, ವೃಶ್ಚಿಕ ರಾಶಿ, ಒಂಭತ್ತರಲ್ಲಿ ಗುರು, ಐದರಲ್ಲಿ ಗುಳಿಗ, ಶನಿ ಎಲ್ಲಾ ಇರುವುದರಿಂದ, ಗುಳಿಗನಿಗೆ ಸಂಪೂರ್ಣ ತೃಪ್ತಿ, ಸಂತೋಷ ಎಲ್ಲಾ ಇದೆ. ಕೊರಗಜ್ಜನಿಗೂ ಸಂತೋಷವಿದೆ. ದೇವರ ಆಶಿರ್ವಾದವೂ ಇದೆ ಎಂಬ ವಿಚಾರ ತಿಳಿಸಿದ್ದಾರೆ ಎನ್ನಲಾಗಿದೆ.

ಇನ್ನು ಗುಳಿಗಾ ..ಗುಳಿಗಾ ಹಾಡಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆ ಕೂಡಾ ಜೋರಾಗಿ ಸಾಗುತ್ತಿದೆ. ಇನ್ನು ಕೆಲವು ವಿಕೃತ ಮನಸ್ಥಿತಿಯವರಂತೂ ನಿರ್ದೇಶಕರಿಗೆ ಸೇರಿ ಚಿತ್ರತಂಡಕ್ಕೆ ಉರಿ ಶಾಪಹಾಕುವ ಕಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅಲ್ಲದೇ ಗುಳಿಗ ದೈವವೇ ರಕ್ತ ಕಾರಿ ಸಾಯಿಸುತ್ತದೆ ಎನ್ನುವಂತಹ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.












