ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ನಿರ್ಮಾಪಕ ಅರವಿಂದ್ ರೆಡ್ಡಿ ಉತ್ತರ ನೀಡಿದ್ದಾರೆ. ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಪ್ರತಿಕ್ರಿಯಿಸಿದ ರೆಡ್ಡಿ ಸಂತ್ರಸ್ಥ ಯುವತಿ ಜೊತೆಗಿನ ಸಂಬಂಧ, ಆರೋಪ ಸಂಬಂಧ ಮುಕ್ತವಾಗಿ ಮಾತಾಡಿದ್ದಾರೆ.
2023ರಲ್ಲಿ ಶ್ರೀಲಂಕಾದ ಟೂರ್ನಮೆಂಟ್ ನಲ್ಲಿ ನನಗೆ ಯುವತಿ ಪರಿಚಯವಾಗಿದ್ರು. ನಂತರ ಲೀವಿಂಗ್ ರಿಲೇಷನ್ ಶಿಪ್ ಸ್ಟಾರ್ಟ್ ಆಯ್ತು. ಆದರೆ ಆಕೆ ಬೇರೆ ಹುಡುಗನ ತಾಂಜೇನಿಯಾ ಟ್ರಿಪ್ ಹೋಗಿದ್ದರು.
ಅಷ್ಟಲ್ಲದೇ ಹುಡುಗ ಮನೆಗೆ ಬಂದು ಹೋಗೋದು ಗೊತ್ತಾಯ್ತು. ಅದನ್ನ ಕೇಳಿದಾಗ ನಾವಿಬ್ಬರೂ ದೂರ ಆಗಿದ್ದೇವು. ಹಾಗೆ ನಾನು ಅವರ ಮನೆ ಮಾಲೀಕರಿಗೆ ಆಕೆ ಪೋಟೋ ಶೇರ್ ಮಾಡಿದ್ದೀನಿ ಅಂತ ಆಪಾದನೆ ಮಾಡಿದ್ದರು. ಈ ಸಂಬಂಧ ಆರ್.ಆರ್.ನಗರ ಪೊಲೀಸರು ನೋಟಿಸ್ ಕೊಟ್ಟಿದ್ರು, ಆಗ ನಾನು ಶ್ರೀಲಂಕಾದಲ್ಲಿದ್ದೆ.
ಇವತ್ತು ನಾನು ಆರ್.ಆರ್.ನಗರ ಠಾಣೆಗೆ ಹೇಳಿಕೆ ಕೊಡಲು ಬಂದೆ. ಅಷ್ಟೊತ್ತಿಗೆ ಎಲ್ಒಸಿ ಮಾಡಿ ನನ್ನನ್ನ ಠಾಣೆಗೆ ಕರೆತಂದ್ರು. ಸ್ಟೇಷನ್ ಬೇಲ್ ಇದ್ದರೂ ಕೋರ್ಟ್ ಗೆ ಹಾಜರು ಪಡಿಸಿದ್ದರು. ಆದರೆ ನ್ಯಾಯಾಲಯ ಜಾಮೀನು ನೀಡಿದೆ ಎಂದರು.
ಸದ್ಯ ಪೊಲೀಸ್ ಅಧಿಕಾರಿಗಳು ನನ್ನ ಸ್ಟೋರಿಯನ್ನು ಕೇಳಿದ್ದಾರೆ. ರಿಯಾಲಿಟಿಯಲ್ಲಿ ಯಾರು ಲೆಟರ್ ಪೊಟೋ ಕಳಿಸಿದ್ದಾರೆ ನನಗಂತೂ ಗೊತ್ತಿಲ್ಲ. ವಿವಾದ ಆಗುವುದಕ್ಕೆ ಕಾರಣ ದುಬೈ ಸೈಮಾಗೆ ತಾಂಜೇನಿಯಾಗೆ ಹೋಗಲು ಸ್ಪಾನ್ಸರ್ ಮಾಡಿ ಕಳಿಸಿದ್ದೆ. ಅವರನ್ನ ನನ್ನ ಪಾರ್ಟನರ್ ಅಂತ ಏನು ಮಾಡಬೇಕು ಮಾಡ್ತಿದ್ದೆ. ಆದ್ರೆ ಆ ಹುಡುಗನ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಅವಳು ನನ್ನ ಭೇಟಿ ಮಾಡಿದ್ದು 2023ನಲ್ಲಿ ಆದರೆ ನಾನು 2024ರಲ್ಲಿ ಪೊರ್ಶೆ ಕಾರು ಕೊಡಿಸಿದ್ದೆ. ಅವಳ ಹೆಸರಲ್ಲಿ ಕಸ್ಟಮೈಸ್ಡ್ ಮಾಡಿ ತರಿಸಿದ್ದೆ. ಅವಳು ಕೇಳಿಲ್ಲ ಮಾಡಿಲ್ಲ ಆದ್ರೆ ತಗೊಂಡಿದ್ದಾಳೆ. ಅವರ ತಮ್ಮನ ಮದುವೆಗೆ ಅವರ ಮನೆ ಗೃಹಪ್ರವೇಶಕ್ಕೆ ಸಹಾಯ ಮಾಡಿದೆ. ಆದರೆ ಈಗ ನನ್ನ ಮೇಲೆ ಬೇಡವಾದ ಅಪವಾದ ಹಾಕ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಈಗ ಅವಳಿಗೆ ಕೊಟ್ಟಿದ್ದ ಕಾರು ನನ್ನತ್ರನೇ ಇದೆ.
ಸೈಟ್ ಆ ಹುಡುಗಿ ಹೆಸರಲ್ಲಿ ಅಗ್ರಿಮೆಂಟ್ ರಿಜಿಸ್ಟರ್ ಮಾಡಿದ್ದೀನಿ. ಹರ್ಷ ಎಂಬುವರ ಅಕೌಂಟ್ ನಿಂದ ದುಡ್ಡು ಬಂದಿದೆ. ಐ ವಿಲ್ ಕಂ ಬ್ಯಾಕ್ ಅಂತ ಹೋದವಳು ಮತ್ತೆ ಬಂದಿಲ್ಲ. ಮಹಿಳಾ ಸ್ಟೇಷನ್ ಗೆ ಕರೆಸೋವರೆಗೂ ಅವಳನ್ನ ನೋಡಿಲ್ಲ. ನನ್ನ ತಪ್ಪಿದ್ರೆ ನನಗೆ ಶಿಕ್ಷೆ ಆಗುತ್ತೆ ಅವರ ತಪ್ಪಿದ್ರೆ ಅವರಿಗೆ ಶಿಕ್ಷೆ ಆಗತ್ತೆ. ಇದು ಮರೆತಿರೋ ಕಥೆ. ಮರೆತಿರೋ ಕಥೆ ಬಗ್ಗೆ ನಾನು ಯೋಚನೆ ಮಾಡಲ್ಲ. ಮತ್ತೊಬ್ಬರ ಜೊತೆ ಸಂಸಾರ ಮಾಡ್ತಿದ್ದಾರೆ ಅನ್ನೊ ವಿಚಾರ ಕಿವಿಗೆ ಬಿದ್ದು ದೂರ ಆಗಿದ್ದೀವಿ. ನಾನು ಕೌಂಟರ್ ಅಟ್ಯಾಕ್ ಮಾಡಲ್ಲ. ಸಾಬೀತು ಮಾಡಲಿಕ್ಕೆ ಏನೇನು ದಾಖಲಾತಿ ಬೇಕೋ ಅದನ್ನ ನಾನು ಸಲ್ಲಿಕೆ ಮಾಡ್ತೀನಿ. 2024 ಜೂನ್ 10 & ಜೂನ್ 11 ಮದುವೆ ಅಂದ್ಕೊಂಡಿದ್ವಿ ಆದ್ರೆ ಆಗಲಿಲ್ಲ ಎಂದು ಅರವಿಂದ್ ರೆಡ್ಡಿ ಹೇಳಿದ್ದಾರೆ.













