ಬೆಂಗಳೂರು: ಚೀಟಿ ವ್ಯವಹಾರದಿಂದ ಮನನೊಂದು ವ್ಯಕ್ತಿಯೊಬ್ಬರು ಸಾವಿಗೆ ಶರಣಾದ ಘಟನೆ ಬೆಂಗಳೂರಿನ ವೈಯ್ಯಾಲಿಕಾವಲ್‌ನಲ್ಲಿ ನಡೆದಿದೆ. ವೆಂಕಟೇಶ್ (45) ಸಾವಿಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತರು ಬಿಜೆಪಿ ನಾಯಕ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್ ಅವರ ಆಪ್ತ ಬಳಗದಲ್ಲಿದ್ದರು ಎನ್ನಲಾಗಿದೆ.

ಚೀಟಿ ಏಜೆಂಟ್ ಆಗಿದ್ದ ವೆಂಕಟೇಶ್ ಮಾನಸಿಕ ಒತ್ತಡದಿಂದ ಮನನೊಂದು ವಿಡಿಯೋ ಮಾಡಿ ಬಳಿಕ ವೈಯ್ಯಾಲಿಕಾವಲ್‌ನ ಕಚೇರಿಯಲ್ಲೇ ಸೋಮವಾರ ಸಂಜೆಯೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ವೆಂಕಟೇಶ್ ಸಾವಿಗೂ ಮುನ್ನ ಮಾಡಿರುವ ವಿಡಿಯೋ ಇಂದು ಬೆಳಕಿಗೆ ಬಂದಿದೆ. ನಾನು ಚೀಟಿ ಏಜೆಂಟ್ ಆಗಿದ್ದೇನೆ. ನಾನು ಕಷ್ಟಕ್ಕೆ ಸಿಲುಕಿದ್ದೇನೆ. ಯಾರೂ ಕೂಡ ಚೀಟಿ ವ್ಯವಹಾರ ಮಾಡಬೇಡಿ. ಚೀಟಿ ಹಣದಲ್ಲಿ ನಡೆದ ಮೋಸದಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ವೆಂಕಟೇಶ್ ವಿಡಿಯೋ ಮಾಡಿದ್ದಾರೆ.

