ಬೆಂಗಳೂರು: ಡೇಟಿಂಗ್ ಆ್ಯಪ್ ನಲ್ಲಿ ಪರಿಚಯವಾಗಿದ್ದ ಹುಡುಗಿ ಯುವಕನ 69 ಲಕ್ಷದ ರೂ. ಮೌಲ್ಯದ ಚಿನ್ನಾಭರಣ, ಹಣ ದೋಚಿರೋ ಘಟನೆ ಇಂದಿರಾನಗರದಲ್ಲಿ ನಡೆದಿದೆ.
2 ತಿಂಗಳ ಹಿಂದೆ ಯುವಕನೊಬ್ಬನಿಗೆ Happn appನಲ್ಲಿ
ಕವಿಪ್ರಿಯಾ ಎಂಬ ಹೆಸರಿನ ಯುವತಿ ಪರಿಚಯ ಆಗಿದ್ದು, ಇಬ್ಬರ ನಡುವೆ ಸ್ನೇಹ ಬೆಳೆದಿದೆ. ನ.1ರಂದು ಇಂದಿರಾನಗರದ ರೆಸ್ಟೋರೆಂಟ್ ನಲ್ಲಿ ಇಬ್ಬರು ಭೇಟಿಯಾಗಿದ್ದರು. ಬಳಿಕ ರೆಸ್ಟೋರೆಂಟ್ ನಲ್ಲಿ ಇಬ್ಬರು ಮದ್ಯಪಾನ ಮಾಡಿದ್ದರು. ಆದರೆ ಎಣ್ಣೆ ಪಾರ್ಟಿ ಬಳಿಕ ಪಿಜಿಗೆ ಹೋಗುವುದು ಬೇಡ ಎಂದ ಯುವತಿ ಸಮೀಪದ ಲಾಡ್ಜ್ ಗೆ ಕರೆದೊಯ್ದಿದ್ದಾಳೆ.
ಲಾಡ್ಜ್‌ನಲ್ಲಿ ಮಧ್ಯರಾತ್ರಿ ಆಕೆಯೇ ಊಟ ಆರ್ಡರ್ ಮಾಡಿ ತರಿಸಿಕೊಂಡಿದ್ದಳು. ಊಟ ಮಾಡಿದ ನಂತರ ಕವಿಪ್ರಿಯಾ ಕೊಟ್ಟ ನೀರು ಕುಡಿದ ಯುವಕನಿಗೆ ಪ್ರಜ್ಞೆ ತಪ್ಪಿದೆ.. ಬೆಳಗ್ಗೆ ಕಣ್ಣು ಬಿಟ್ಟು ನೋಡಿದ್ರೆ ರೂಮಿನಲ್ಲಿ ಆಕೆಯೂ ಇಲ್ಲ, ತನ್ನ ಬಳಿ ಇದ್ದ 6.89 ಲಕ್ಷ ರೂ. ಮೌಲ್ಯದ 28 ಗ್ರಾಂ. ಚಿನ್ನದ ಸರ, 30 ಗ್ರಾಂ ಚಿನ್ನದ ಕೈ ಬಳೆ, 10 ಸಾವಿರ ರೂ. ನಗದು, ಒಂದು ಹೆಡ್ ಸೆಟ್ ಮಾಯಾವಾಗಿತ್ತು.
ಸದ್ಯ ಘಟನೆ ಸಂಬಂಧ ಇಂದಿರಾನಗರ ಠಾಣೆಗೆ ವಂಚನೆಗೆ ಒಳಗಾದ ಯುವಕ ದೂರು ನೀಡಿದ್ದಾನೆ. ಸದ್ಯ ಪ್ರಕರಣ ದಾಖಲಿಸಿರುವ ಪೊಲೀಸರು ಯುವತಿಗಾಗಿ ಹುಡುಕಾಟ ನಡೆಸಿದ್ದಾರೆ.












