ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ನಿನ್ನೆ ಸಂಜೆ ಸಂಭವಿಸಿದ ನಿಗೂಢ ಕಾರು ಸ್ಫೋಟ ಸಂಪೂರ್ಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಸದ್ಯಕ್ಕೆ ಈ ಸ್ಫೋಟವು ಭಯೋತ್ಪಾದಕ ಕೃತ್ಯವಾಗಿರಬಹುದು ಎಂದು ತನಿಖಾ ಸಂಸ್ಥೆಗಳು ಅನುಮಾನಿಸಲಾಗಿದ್ದು, ಇದೊಂದು ಆತ್ಮಾ**ತಿ ದಾಳಿ ಎಂದು ಶಂಕಿಸಲಾಗಿದೆ.

ಪ್ರಾಥಮಿಕವಾಗಿ ಈ ಪ್ರಕರಣದಲ್ಲಿ ಉಮರ್ ಮೊಹಮ್ಮದ್ ಆತ್ಮಾ*ತಿ ಬಾಂಬರ್ ಎನ್ನುವ ಅನುಮಾನಗಳು ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸ್ಫೋಟವಾದ ಸ್ಥಳದಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದ ಉಮರ್ ಮೊಹಮ್ಮದ್‌ನ ಕುಟುಂಬಸ್ಥರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ಫೋಟಗೊಂಡ ಐ20 ಕಾರಿನೊಳಗೆ ಉಮರ್ ಮೊಹಮ್ಮದ್ ಇದ್ದ ಎನ್ನಲಾಗುತ್ತಿದ್ದು, ಆತನ ಗುರುತು ಪತ್ತೆ ಹಚ್ಚಲು ಮೃತದೇಹದ ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ. ಸ್ಫೋಟ ಸಂಭವಿಸಿದ ಸ್ಥಳದ ಸಮೀಪದ ಸಿಸಿಟಿವಿಯಲ್ಲಿ ಒಬ್ಬನೇ ಕಾರಿನಲ್ಲಿರುವುದು ಕಂಡು ಬಂದಿದೆ. ಇನ್ನು ಕಾರಿನ ದಾಖಲೆಗಳನ್ನು ಪರಿಶೀಲಿಸಿದಾದ ಸ್ಫೋಟಗೊಂಡ ಕಾರು ಪುಲ್ವಾಮಾದ ತಾರೀಖ್ ಎಂಬಾತನದು ಎಂದು ತಿಳಿದು ಬಂದಿದ್ದು, ಆತನನ್ನೂ ಕೂಡ ವಶಕ್ಕೆ ಪಡೆಯಲಾಗಿದೆ. ಸದ್ಯ ತನಿಖೆ ತೀವ್ರಗೊಂಡಿದ್ದು, ಕೆಲವು ಅಧೀಕೃತ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದೆ.


