
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಮೊಬೈಲ್ ಬಳಕೆ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕರು ಕೂಡ ಜೈಲಿನ ಕರ್ಮಕಾಂಡದ ಬಗ್ಗೆ ಕಿಡಿಕಾರಿದ್ದಾರೆ. ಹೀಗಾಗಿ ಘಟನೆ ಬಗ್ಗೆ ಪ್ರಾಥಮಿಕ ಆಂತರಿಕ ತನಿಖೆಗೆ ಆದೇಶಿಸಲಾಗಿದೆ

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಕಾರಾಗೃಹಗಳ ಹೆಚ್ಚುವರಿ ಮಹಾನಿರೀಕ್ಷಕ ಆನಂದ್ ರೆಡ್ಡಿ,
ಮೊಬೈಲ್ ಬಳಕೆ ಬಗ್ಗೆ ಇಂದು ಜೈಲಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಾಗಿದೆ. ರಾಜಾತಿಥ್ಯ ಪಡೆದ ಖೈದಿಗಳು ಹಾಗೂ ಅಧಿಕಾರಿ ಸಿಬ್ಬಂದಿ ವಿಚಾರಣೆ ಮಾಡಲಾಗಿದೆ.
ಮಾಧ್ಯಮಗಳಲ್ಲಿ ಬಂದ ವೀಡಿಯೊಗಳ ಪೈಕಿ ಕೆಲವು ವಿಡಿಯೋಗಳು 2025 ಹಾಗೂ 2023 ರಲ್ಲಿ ಚಿತ್ರೀಕರಿಸಲಾಗಿದೆ. ಇವರಿಗೆ ವಿಡಿಯೋ ಚಿತ್ರೀಕರಿಸಲು ಮೊಬೈಲ್ ಕೊಟ್ಟವರು ಹಾಗೂ ಮಾಧ್ಯಮಕ್ಕೆ ವಿಡಿಯೋ ಹರಿಬಿಟ್ಟವರು ಯಾರು ಎಂಬುವುದರ ಪತ್ತೆ ಮಾಡಲಾಗುತ್ತೆ. ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ಇನ್ನು ಘಟನೆ ಬಗ್ಗೆ ಪ್ರಾಥಮಿಕ ಇಲಾಖಾ ತನಿಖೆಗಾಗಿ ದಕ್ಷಿಣ ವಲಯದ ಉಪ ಮಹಾನಿರೀಕ್ಷಕರಿಗೆ ಸೂಚಿಸಲಾಗಿದೆ. ಪ್ರಾಥಮಿಕ ತನಿಕೆ ಆಧಾರದ ಮೇಲೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಜಾ ಬಂಧಿ ಉಮೇಶ್ ರೆಡ್ಡಿ, ವಿಚಾರಣಾ ಕೈದಿ ತರುಣ್ ಮೊಬೈಲ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.ಇದು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು


