• Home
  • About Us
  • ಕರ್ನಾಟಕ
Tuesday, January 13, 2026
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಜಾತಿ ಸಂಕಟಗಳ ನಡುವೆ ಸ್ವಾಭಿಮಾನದ ಶೋಧ

ವ್ಯಕ್ತಿ ಜೀವನವನ್ನು ಸಮಷ್ಟಿಗೆ ಸಲ್ಲಿಸಿ ಬದುಕು ಕಟ್ಟಿಕೊಳ್ಳುವ ಸ್ವಾಭಿಮಾನಿಯ ಕಥನ

ನಾ ದಿವಾಕರ by ನಾ ದಿವಾಕರ
November 6, 2025
in ಅಂಕಣ, ಇದೀಗ, ಕರ್ನಾಟಕ, ಜೀವನದ ಶೈಲಿ, ದೇಶ, ರಾಜಕೀಯ, ವಿಶೇಷ
0
ಜಾತಿ ಸಂಕಟಗಳ ನಡುವೆ ಸ್ವಾಭಿಮಾನದ ಶೋಧ
Share on WhatsAppShare on FacebookShare on Telegram

 21ನೆ ಶತಮಾನದ ಡಿಜಿಟಲ್‌ ಯುಗದಲ್ಲಿ ನಿಂತು ನೋಡುವಾಗಲೂ ಭಾರತೀಯ ಸಮಾಜದ ಬಗ್ಗೆ ಮೂಡುವ ಸಮಾನ ಎಳೆಯ ಅಭಿಪ್ರಾಯ ಎಂದರೆ “ ಈ ದೇಶದ ಸಮಾಜಗಳಿಗೆ ಶ್ರೇಣೀಕೃತ ಜಾತಿ ವ್ಯವಸ್ಥೆ ಒಂದು ಅಳಿಸಲಾಗದ ಕಳಂಕ ”. ಅನುಭವಾತ್ಮಕವಾಗಿ ಅಥವಾ ಅನುಭಾವದ ನೆಲೆಯಲ್ಲಿ, ಎರಡೂ ಸ್ತರಗಳಲ್ಲಿ ನಿಂತು ನೋಡುವಾಗಲೂ ಈ ಅಭಿಪ್ರಾಯದಲ್ಲಿ ಹೆಚ್ಚಿನ ವ್ಯತ್ಯಯವೇನೂ ಆಗದು. ವಿಪರ್ಯಾಸ ಎಂದರೆ ಈ ಜನಾಭಿಪ್ರಾಯ ಅಥವಾ ಸಂವೇದನೆಯ ನುಡಿಗಳಿಗೆ ಭಾರತದ ಇತಿಹಾಸದಷ್ಟೇ ವಯಸ್ಸಾಗಿದೆ. ಮನುಸ್ಮೃತಿಯ ಕಾಲದಿಂದ ಸಂವಿಧಾನದ ಯುಗದವರೆಗೂ ವಿಸ್ತರಿಸುವ ಭಾರತದ ನಾಗರಿಕತೆಯನ್ನು ಒಳಹೊಕ್ಕು ನೋಡಿದಾಗ, ಮನುಜ ಪ್ರಜ್ಞೆ-ಜೀವ ಸಂವೇದನೆ ಇರುವ ಯಾವುದೇ ವ್ಯಕ್ತಿಗಾದರೂ ಮನಸ್ಸು ತಲ್ಲಣಿಸುತ್ತದೆ, ಹೃದಯ ಮಿಡಿಯುತ್ತದೆ.

ADVERTISEMENT

ಏಕೆಂದರೆ ಈ ಜಾತಿ ವ್ಯವಸ್ಥೆಯು ಶತಮಾನಗಳ ಪಯಣದಲ್ಲಿ ಬೇರುಬಿಟ್ಟಿರುವ ರೀತಿಯನ್ನು, ಮಾದರಿಗಳನ್ನು, ವಿಧಾನಗಳನ್ನು ಗಮನಿಸಿದರೆ, ಡ್ರಾಯಿಂಗ್‌ ರೂಮ್‌ನಲ್ಲಿ ಕುಳಿತು ಇಂಜಿನಿಯರ್‌ ಒಬ್ಬ ಸಿದ್ಧಪಡಿಸಿದ ಶಾಶ್ವತವಾದ ನೀಲ ನಕ್ಷೆಯ ಚಿತ್ರಣ ಕಣ್ಮುಂದೆ ಹಾದು ಹೋಗುತ್ತದೆ. ಆಂಗ್ಲ ಭಾಷೆಯಲ್ಲಿ Social Engineering ಎಂಬ ಪದ ಬಳಕೆಯಲ್ಲಿದೆ. ಇದನ್ನೇ ಭಿನ್ನ ರೀತಿಯಲ್ಲಿ ವಿಸ್ತರಿಸಿ ನೋಡಿದಾಗ,  ಒಂದು ಸಮಾಜದ ಒಳಹೊಕ್ಕು, ಅದರ ಬೇಕು ಬೇಡಗಳನ್ನು ಅರಿತು, ತನ್ನಿಚ್ಛೆಯಂತೆ ಅಲ್ಲಿನ ಸಾಮುದಾಯಿಕ ಬದುಕನ್ನು, ಆರ್ಥಿಕ ನೆಲೆಗಳನ್ನು ಹಾಗೂ ಸಾಂಸ್ಕೃತಿಕ ಜೀವನ ಶೈಲಿಗಳನ್ನು ರೂಪಿಸುವ ಒಂದು ಪ್ರಕ್ರಿಯೆ ಎನ್ನಬಹುದು.. ತನ್ಮೂಲಕ ತನ್ನದೇ ಆದ ಸಾಮಾಜಿಕ-ಆರ್ಥಿಕ ಪ್ರಾಬಲ್ಯ ಹಾಗೂ ಸಾಂಸ್ಕೃತಿಕ ಪಾರಮ್ಯವನ್ನು ಶಾಶ್ವತವಾಗಿ ಇರುವಂತಹ ಸಂರಚನೆಗಳನ್ನು ನಿರ್ಮಿಸುವ ಕ್ರಿಯೆ. ಸಾಮಾನ್ಯವಾಗಿ ಸಮಾಜದ ಬಲಾಢ್ಯ ವರ್ಗಗಳು, ಜಾತಿ ಸಮಾಜದ ನೆಲೆಯಲ್ಲಿ ಮೇಲ್ಜಾತಿಗಳು ಇದರ ಉಸ್ತುವಾರಿ ವಹಿಸಿಕೊಳ್ಳುತ್ತವೆ.

 ಜಾತಿ ಬೇರುಗಳು ವರ್ತಮಾನದ ಸ್ಥಿತಿಗತಿ

ಈ ಪುನರ್‌ ನಿರ್ಮಿತ ಅಥವಾ ನವೀಕೃತ ಸಮಾಜಗಳನ್ನು ವರ್ತಮಾನದ ಸಂದರ್ಭದಲ್ಲಿ ನೋಡಿದಾಗ, ಜಾತಿ ವ್ಯವಸ್ಥೆಯ ಬೇರುಗಳು ಯಥಾಸ್ಥಿತಿಯಲ್ಲಿದ್ದರೂ, ಅದರ ಬಾಹ್ಯ ನೋಟ (Outer Form) ರೂಪಾಂತರಗೊಂಡು, ಆಧುನಿಕ ನಾಗರಿಕತೆಗೆ ತಕ್ಕಂತೆ, ಬದಲಾದ ಸಾಮಾಜಿಕ ಸಮೀಕರಣಗಳಿಗೆ ಹೊಂದಾಣಿಕೆಯಾಗುವ ರೀತಿಯಲ್ಲಿ, ನವ ಉದಾರವಾದದ ಆರ್ಥಿಕ ವ್ಯತ್ಯಯಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು, ತನ್ನ ಮೂಲ ಸಂರಚನೆಯನ್ನು ಉಳಿಸಿಕೊಂಡು ಬಂದಿರುವುದನ್ನು ಮೆಟ್ರೋಪಾಲಿಟನ್‌ ನಗರಗಳಲ್ಲೂ ಸಹ ಗುರುತಿಸಬಹುದು. ದೊಡ್ಡ ನಗರಗಳ ಆಧುನಿಕ ಐಷಾರಾಮಿ ಅಗ್ರಹಾರಗಳು ಇದಕ್ಕೆ ಪ್ರತ್ಯಕ್ಷ ನಿದರ್ಶನ. ವಿಚಿತ್ರ ಎಂದರೆ ಈ ರೂಪಾಂತರದ ಪ್ರಕ್ರಿಯೆಯಲ್ಲಿ ಮೇಲ್ಜಾತಿಯ ಸಾಂಪ್ರದಾಯಿಕ ಸಂಸ್ಥೆಗಳು ಬಹಳ ಅಚ್ಚುಕಟ್ಟಾಗಿ, ಕೆಳಸ್ತರದ ಜಾತಿ ಸಮುದಾಯಗಳ ಒಂದು ವರ್ಗವನ್ನು, ಸಂವಿಧಾನದ ಫಲಾನುಭವಿ ಹಿತವಲಯಗಳನ್ನು ಹಾಗೂ ಆರ್ಥಿಕ ಮೇಲ್‌ ಚಲನೆ ಪಡೆದಿರುವ ಮೇಲ್ಪದರವನ್ನು (Elites) ತನ್ನೊಳಗೆ ಸೆಳೆದುಕೊಂಡಿದೆ.

Rahul GAndhi on Hariyanaelection : ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಬಿಗ್‌ ಶಾಕ್‌ ಕೊಟ್ಟ ರಾಹುಲ್‌ ಗಾಂಧಿ..!

ವಿಶಾಲ ಸಮಾಜಕ್ಕೆ ಅಥವಾ ತಳಸಮುದಾಯಗಳನ್ನು (subaltern Communities) ಪ್ರತಿನಿಧಿಸುವ ಸಂಘಟನೆಗಳಿಗೆ ಈ ಪಲ್ಲಟ ಅರಿವಿಗೆ ಬಂದಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಮೇಲ್‌ ಸ್ತರ ಸಮಾಜದ (Upper level Society) ಆಯಸ್ಕಾಂತೀಯ ಸೆಳೆತ ಎಷ್ಟು ಪ್ರಭಾವಶಾಲಿಯಾಗಿದೆ ಎಂದರೆ, ಅದು ಒಳಕ್ಕೆಳೆದುಕೊಳ್ಳುವ ಸಮುದಾಯಗಳಲ್ಲಿ ತಮ್ಮ ಮೂಲ ನೆಲೆಯನ್ನೇ ಮರೆತುಬಿಡುವಂತೆ ಮಾಡುವಷ್ಟು ಬೌದ್ಧಿಕ ಶಕ್ತಿ-ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗಾಗಿಯೇ ಭಾರತದ ಶೋಷಿತ ಸಮುದಾಯಗಳ ಏಳಿಗೆಗಾಗಿ ಅವಿರತ ಶ್ರಮಿಸುತ್ತಲೇ ಇರುವ ಸಾಂಘಿಕ-ಸಾಂಸ್ಥಿಕ ಶಕ್ತಿಗಳು ಸಹ, ಶೋಷಿತ ಸಮಾಜಗಳ ಎಲ್ಲರನ್ನೂ ಒಳಗೊಳ್ಳುವ  (All Inclusive) ಕ್ರಾಂತಿಕಾರಕ ಹೆಜ್ಜೆಗಳನ್ನು ಅನುಸರಿಸಲು ಸಾಧ್ಯವಾಗಿಲ್ಲ. ದಲಿತ ಚಳುವಳಿಗಳ ವಿಘಟನೆಗೆ, ಸೈದ್ದಾಂತಿಕ ವೈಫಲ್ಯಕ್ಕೆ ಇದೂ ಒಂದು ಕಾರಣವಾಗಿದೆ. ಇತ್ತೀಚಿನ ಒಳಮೀಸಲಾತಿ ಸಂಘರ್ಷಗಳು ಇದನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ.

ವಿಘಟಿತ ಚಳುವಳಿಯ ತೊರೆಗಳ ನಡುವೆ

ಈ ಸಂಘಟನಾತ್ಮಕ ವಿಘಟನೆಗಳು ಒಂದು ರೀತಿಯಲ್ಲಿ ಒಟ್ಟಾರೆ ದಲಿತ ಚಳುವಳಿಗೆ ಮತ್ತು ಶೋಷಿತರ ಹೋರಾಟಗಳಿಗೆ ಹಿನ್ನಡೆ ಉಂಟುಮಾಡಿದ್ದರೆ, ಮತ್ತೊಂದು ಬದಿಯಲ್ಲಿ ಸ್ಥಾಪಿತ ಸಂಘಟನೆಗಳ ದ್ವಿಮುಖ ನೀತಿ, ಸ್ವ-ಪ್ರತಿಷ್ಠೆ ಮತ್ತು ಅಪ್ರಜಾಸತ್ತಾತ್ಮಕ ನಡವಳಿಕೆಯ ಪರಿಣಾಮವಾಗಿ, ಅನೇಕ ದಲಿತ ಕಾರ್ಯಕರ್ತರು, ಬುದ್ಧಿಜೀವಿಗಳು, ಶೈಕ್ಷಣಿಕ ವಲಯದಲ್ಲಿರುವ ಚಿಂತಕರು ತಮ್ಮದೇ ಆದ ಹಾದಿ ಅನುಸರಿಸಿದ್ದನ್ನು ಆರಂಭ ಘಟ್ಟದಿಂದಲೇ ಗುರುತಿಸಬಹುದು. ಇದು ಒಂದು ಮಗ್ಗುಲಿನಲ್ಲಿ ಏಕವ್ಯಕ್ತಿ ಸಂಘಟನೆಗಳನ್ನು ಸೃಷ್ಟಿಸಿದ್ದರೆ, ಮತ್ತೊಂದೆಡೆ ತಮ್ಮ ಸಂಪನ್ಮೂಲಗಳ ಇತಿಮಿತಿಯಲ್ಲೇ, ತಾವಿರುವ ಸ್ಥಳದಲ್ಲಿ ಅಂಬೇಡ್ಕರ್‌, ಪೆರಿಯಾರ್‌ ಮತ್ತಿತರ ದಾರ್ಶನಿಕರ ಆಲೋಚನೆಗಳನ್ನು ಯುವ ಸಮೂಹದ ನಡುವೆ, ಜನಸಾಮಾನ್ಯರ ನಡುವೆ ಬಿತ್ತುವ ಕೆಲಸದಲ್ಲಿ ನಿರತರಾಗಿದ್ದಾರೆ.

ವ್ಯಕ್ತಿಗಳಲ್ಲಿ ಈ ಧೋರಣೆ ಅಥವಾ ಆಲೋಚನಾ ವಿಧಾನ ರೂಪುಗೊಳ್ಳಲು ಎರಡು ಕಾರಣಗಳಿರುತ್ತವೆ. ಅನುಭವದ ನೆಲೆಯಲ್ಲಿ ತಾವೇ ಸ್ವತಃ ಅನುಭವಿಸಿದ ಜಾತಿ ತಾರತಮ್ಯ, ದೌರ್ಜನ್ಯ ಮತ್ತು ಶೋಷಣೆಗಳು ವ್ಯಕ್ತಿಗಳನ್ನು ಸುಧಾರಣೆಯ ಹಾದಿಗೆ, ಕ್ರಾಂತಿಕಾರಿ ಚಳುವಳಿಗಳ ಮಾರ್ಗಕ್ಕೆ, ಮಾರ್ಕ್ಸ್‌ವಾದಿ ಚಿಂತನೆಗಳಿಗೆ, ಭವಿಷ್ಯದ ಸಮಾಜವನ್ನು ಮಾನವೀಯವಾಗಿ ಕಟ್ಟುವ ಔದಾತ್ಯಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತವೆ. ಮತ್ತೊಂದೆಡೆ ಅನುಭಾವಿಕ ನೆಲೆಯಲ್ಲಿ ತಾವು ಬದುಕುವ ಸಮಾಜದಲ್ಲೇ ದಿನನಿತ್ಯ ನಡೆಯುತ್ತಿರುವ ಜಾತಿ ದೌರ್ಜನ್ಯಗಳನ್ನು ಸಹಿಸಲಾಗದೆ, ಅನುಕಂಪಕ್ಕಿಂತಲೂ ಹೆಚ್ಚಾಗಿ ಸಹಾನುಭೂತಿ-ಪರಾನುಭೂತಿಯೊಂದಿಗೆ ಶೋಷಿತರೊಡನೆ ಗುರುತಿಸಿಕೊಳ್ಳುವಂತೆ ಮಾಡುತ್ತದೆ. ಈ ಎರಡೂ ಕ್ರಿಯೆಗಳು ಸಾಹಿತ್ಯಿಕವಾಗಿ, ಸಂಘಟನಾತ್ಮಕವಾಗಿ ಅಥವಾ ಬೌದ್ಧಿಕ ಚಿಂತನಾ ಮಾದರಿಗಳ ಮೂಲಕ ಸಮಾಜದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಸಾಂಘಿಕ ಹಂಗಿಲ್ಲದೆ ಸ್ವಾಯತ್ತತೆಯಿಂದ ಕಾರ್ಯನಿರ್ವಹಿಸಲು ಇದು ನೆರವಾಗುತ್ತದೆ.

ಶೋಷಣೆಯ ನಡುವೆ ರೂಪುಗೊಂಡ ಜೀವಿ

ಇಂತಹುದೇ ಸನ್ನಿವೇಶಗಳಲ್ಲಿ, ಇದೇ ರೀತಿಯ ಸಂಕೀರ್ಣತೆಗಳ ನಡುವೆ ಗುರುತಿಸಬಹುದಾದ ದಲಿತ ಚಿಂತಕ, ಹೋರಾಟಗಾರ ಹಾಗೂ ಅಂಬೇಡ್ಕರ್‌ವಾದಿ ಚಿಂತಕ ಎಂದರೆ ಗೆಳೆಯ ಎಸ್.‌ ಶಿವಲಿಂಗಮ್.‌ ಬಹುತೇಕ ನಾಲ್ಕು ದಶಕಗಳ ಹಿಂದೆ , 1988-89ರಲ್ಲಿ  ನಾನು ಕೆಜಿಎಫ್‌, ಕೆನರಾಬ್ಯಾಂಕ್ ಶಾಖೆಯಲ್ಲಿದ್ದಾಗ  ಸಂಪರ್ಕಕ್ಕೆ ಬಂದ ಶಿವಲಿಂಗಮ್‌ , ಆ ದಿನಗಳಿಂದಲೂ ಸಾಮಾಜಿಕ ಕಾಳಜಿ, ಕಳಕಳಿ, ಶೋಷಿತರ ಜೀವನದ ಬಗ್ಗೆ ಅಪಾರವಾದ ಸಹಾನುಭೂತಿ ಹೊಂದಿದ್ದವರು. ಅವರ ಹೋರಾಟದ ಹಾದಿಗಳು ಭಿನ್ನ ಕವಲುಗಳಲ್ಲಿ ಸಾಗಿ ಈಗ “ ಸ್ವಾಭಿಮಾನಿ ದಲಿತ ಶಕ್ತಿ “ ಎಂಬ ಜನಾಂದೋಲನ ಸಂಘಟನೆಯನ್ನು ಮುನ್ನಡೆಸುತ್ತಿದ್ದು, ಈ ಆಂದೋಲನದ ಭಾಗವಾಗಿ ಅವರು ಕೈಗೊಂಡ ಹೋರಾಟಗಳು ಮತ್ತು ಅವುಗಳ ಸಾಫಲ್ಯಗಳನ್ನು ವಿವರಿಸುವ ಭಾರತದ ಕಾಂಡಕೊರಕ ಜಾತಿ – ಸ್ವಾಭಿಮಾನಿ ದಲಿತ ಶಕ್ತಿಯ ಆತ್ಮಕಥೆ “ ಮನಸ್ಸಾಕ್ಷಿ ಮಾತನಾಡಲಿ ” ಎಂಬ ಪುಸ್ತಕವನ್ನು ಹೊರತಂದಿದ್ದಾರೆ. (ಸ್ವಾಭಿಮಾನಿ ಪ್ರಕಾಶನ ಹಾಲಗೇರಿ ರಾಣಿಬೆನ್ನೂರು).

ಆತ್ಮೀಯ ಸಂಗಾತಿ, ಹೋರಾಟಗಾರ ಪಾರ್ವತೀಶ್‌ ಬಿಳಿದಾಳೆ ಮುನ್ನುಡಿಯಲ್ಲಿ ಹೇಳಿರುವ ಹಾಗೆ ಈ ಕೃತಿಯು  ಒಂದು ಅನುಭವ ಕಥನ. ಭಾರತೀಯ ಸಮಾಜದಲ್ಲಿ ಸಾಂಪ್ರದಾಯಿಕತೆಯನ್ನೂ ಮೀರಿದ ಹಾಗೆ ಜೀವಂತಿಕೆಯಿಂದ, ಕ್ರಿಯಾಶೀಲವಾಗಿರುವ ಪ್ರಜಾಪ್ರಭುತ್ವೀಯ ಮಾನವ ಸಂವೇದನೆಯ ಚಿಂತನಾ ವಾಹಿನಿಗಳ ನಡುವೆ ನಿಂತು ನೋಡಿದಾಗ, ಈ ಬಹುತ್ವದ ಪರಿಸರದಲ್ಲಿ  ಸಮಾಜಗಳ ನಡುವಿನ ಜನಜೀವನವನ್ನು ಪ್ರಜಾಪ್ರಭುತ್ವೀಯಗೊಳಿಸುವ ಅವಶ್ಯಕತೆ ಖಂಡಿತವಾಗಿಯೂ ಇದೆ ಎನಿಸುತ್ತದೆ. ಈ ದೃಷ್ಟಿಯಿಂದಲೇ ತಮ್ಮ ಅಧ್ಯಾಪಕ ವೃತ್ತಿಯೊಂದಿಗೇ, ಪ್ರವೃತ್ತಿಯಾಗಿ ಸಮಾಜಗಳ ನಡುವೆ ಗುರುತಿಸಿಕೊಂಡು ನಿರಂತರವಾಗಿ ಹೋರಾಟಗಳನ್ನು ರೂಪಿಸುತ್ತಾ ಬಂದಿರುವ ಶಿವಲಿಂಗಮ್‌, ತಮ್ಮ ಬದುಕಿನ ಸಂಕಷ್ಟಗಳ ಹಂದರದ ಒಳಗೇ ಇಡೀ ಸಮಾಜವನ್ನು ದಿಟ್ಟಿಸುತ್ತಾ ಅಲ್ಲಿರಬಹುದಾದ ಅನ್ಯಾಯ, ದಬ್ಬಾಳಿಕೆ, ದೌರ್ಜನ್ಯ, ತಾರತಮ್ಯಗಳನ್ನು ಹೋಗಲಾಡಿಸುವ ವಿನೂತನ ಹೋರಾಟಗಳಿಗೆ ಸಾಕ್ಷಿಯಾಗಿರುವುದನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ಹೆಚ್​​ಡಿಕೆಗೆ ಉತ್ತರ ಕೊಡೋಕೆ ರೆಡಿಯಾಗಿದ್ದೀವಿ #hdkumaraswamy #pratidhvani

ಆತ್ಮಕಥನದ ವಿಶಾಲ ಹಂದರದಲ್ಲಿ

ತಮ್ಮ ಪ್ರವೇಶಿಕೆಯಲ್ಲೇ ಕೃತಿಕಾರರು ವಿವರಿಸಿರುವಂತೆ, ದೌರ್ಜನ್ಯಗಳನ್ನು ಎದುರಿಸುತ್ತಲೇ ಬೆಳೆದಿರುವ ಜೀವವೊಂದು ತಮ್ಮ ಕಣ್ಣೆದುರಿನಲ್ಲೇ ನಡೆಯುತ್ತಿರುವ ದೌರ್ಜನ್ಯಗಳಿಗೆ ಕುರುಡಾಗಿರುವುದು, ಕಿವುಡಾಗಿರುವುದು ಸಾಧ್ಯವೇ ಇಲ್ಲ. ತಾವು ಬಾಲ್ಯದಲ್ಲಿ ಅನುಭವಿಸಿದ ಯಾತನೆಗಳೇ ವರ್ತಮಾನದ ಸಂದರ್ಭದಲ್ಲೂ ಕಾಣುತ್ತಿರುವುದು ಶಿವಲಿಂಗಮ್‌ ಅವರನ್ನು ಕಾಡಿರಬಹುದಾದ ಬಹುದೊಡ್ಡ ಜಿಜ್ಞಾಸೆ. ಇದಕ್ಕೆ ಹೇಗೆ ಸ್ಪಂದಿಸುವುದು ಎನ್ನುವುದಕ್ಕಿಂತಲೂ, ಇದನ್ನು ಹೇಗೆ ಪರಿಹರಿಸುವುದು ಎಂಬ ಪ್ರಶ್ನೆಗೆ ಉತ್ತರಗಳನ್ನು ಶೋಧಿಸಿರುವುದು ಶಿವಲಿಂಗಮ್‌ ಅವರ ಹೆಗ್ಗಳಿಕೆ. ಅವರ ಹೋರಾಟದ ಹಾದಿಯುದ್ದಕ್ಕೂ ಈ ಪ್ರಶ್ನೆಯನ್ನೇ ಪ್ರಧಾನವಾಗಿ ಗುರುತಿಸಬಹುದು. ಅಸ್ಪೃಶ್ತತೆಯಂತಹ ಹೀನ, ಅಮಾನವೀಯ ಆಚರಣೆಯನ್ನು ಸ್ವತಃ ಅನುಭವಿಸಿ, ಅನುಭಾವಾತ್ಮಕವಾಗಿ ಕಾಣುತ್ತಲೇ ಬಂದಿರುವ ಶಿವಲಿಂಗಮ್‌, ಇದನ್ನೂ ದಾಟಿ ಅಂಬೇಡ್ಕರ್‌, ಮಾರ್ಕ್ಸ್‌,ಪೆರಿಯಾರ್‌ ಮೊದಲಾದ ದಾರ್ಶನಿಕರ ಮಾರ್ಗದಲ್ಲಿ, ಭೂಮಿಯ ಪ್ರಶ್ನೆಯನ್ನೂ ಎದುರಿಸಿ ಹೋರಾಡಿರುವುದು ಅವರ ಈ ಕೃತಿಯಲ್ಲಿ ಧ್ನನಿಸಿದೆ.

ಮೊದಲೆರಡು ಅಧ್ಯಾಯಗಳಲ್ಲಿ ಭಾರತೀಯ ಸಮಾಜದ ಜಾತಿ ವೈರುಧ್ಯಗಳನ್ನು ಹಾಗೂ ಇದನ್ನು ಎದುರಿಸಿ ನಿಂತಾಗ ಎದುರಿಸಬೇಕಾದ ಸೈದ್ಧಾಂತಿಕ ತಡೆಗೋಡೆಗಳನ್ನು ಶಿವಲಿಂಗಮ್‌ ವಿವರಿಸುತ್ತಾರೆ. ಇದೇ ಹಾದಿಯಲ್ಲಿ ತಾವು ಕಂಡುಕೊಳ್ಳಲು ಸಾಧ್ಯವಾದ ಕೆಲವು ಕಹಿ ಸತ್ಯಗಳನ್ನೂ ಲೇಖಕರು ನಿರ್ಭಿಡೆಯಿಂದ ಪ್ರಸ್ತಾಪಿಸುತ್ತಾರೆ. ದಬ್ಬಾಳಿಕೆಯ ವಿರುದ್ಧ, ಸಮಸಮಾಜಕ್ಕಾಗಿ, ಸಮಾನತೆಯ ಆಶಯದೊಂದಿಗೆ ಹೋರಾಡುವ ಪುರೋಗಾಮಿ ಸಂಘಟನೆಗಳೂ ಜಾತಿ ಪ್ರಶ್ನೆ ಬಂದಾಗ, ವಿಮುಖವಾಗುವುದು ಅಥವಾ ವಸ್ತುನಿಷ್ಠವಾಗಿ ಸ್ಪಂದಿಸದೆ ಇರುವುದು, ಇತ್ತೀಚಿನವರೆಗೂ ಕಾಣಬಹುದಾಗಿದ್ದ ವಿದ್ಯಮಾನ.  ಅನುಭವಾತ್ಮಕವಾಗಿ ಹಲವು ಇಂತಹ ಸಂಘಟನೆಗಳೊಡನೆ ಸಂಪರ್ಕ ಸಾಧಿಸಿದ್ದ ಶಿವಲಿಂಗಮ್‌ ಅಂತಿಮ ಸತ್ಯವನ್ನು ಕಂಡುಕೊಂಡಿರುವುದು, ಪಾಲೋ ಫ್ರೇರಿ ತನ್ನ Pedagogy of the Oppressed ಕೃತಿಯಲ್ಲಿ  ಹೇಳುವ ಮಾದರಿಯಲ್ಲಿ. ಅಂದರೆ ಅನ್ಯಾಯಕ್ಕೊಳಗಾದ ಜಾತಿ ಸಮುದಾಯಗಳ ಜನರೊಡನೆ ಮುಕ್ತ ಸಂವಾದ ನಡೆಸುವ ಮೂಲಕ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಪರಿಹಾರೋಪಾಯಗಳನ್ನು ಆಲೋಚಿಸುವುದು.

C M Siddaramaiah  : ಸಿದ್ದರಾಮಯ್ಯನ ಇಂಗ್ಲೀಷ್‌ ಭಾಷಣ #pratidhvani

ಶಿವಲಿಂಗಮ್‌ ಕಳೆದ ಮೂರು ದಶಕಗಳಲ್ಲಿ ಇದೇ ಮಾದರಿಯನ್ನು ಅನುಸರಿಸಿ, ಸಾಮಾಜಿಕ ಅನ್ಯಾಯ, ಆರ್ಥಿಕ ದಬ್ಬಾಳಿಕೆ ಮತ್ತು ಶೋಷಣೆ ಎದುರಿಸಿದ ಸಮುದಾಯಗಳಿಗೆ ನ್ಯಾಯ ದೊರಕಿಸುವ ಹೋರಾಟಗಳಲ್ಲಿ ನಿರತರಾಗಿದ್ದಾರೆ.” ನಮ್ಮ ಸಂಘಟನೆಯ ಅನುಸಂಧಾನ ,,,,,” ಅಧ್ಯಾಯದಲ್ಲಿ (ಪುಟ 36) ಇದನ್ನು ಕೃತಿಕಾರರು ವಿವರಿಸುತ್ತಾರೆ. ಹಲವು ಜಾತಿಗಳನ್ನು ಬಾಧಿಸುವ ಸಮಸ್ಯೆಗಳನ್ನು ಅಧ್ಯಾಯ 4ರಲ್ಲಿ ಗುರುತಿಸಲು ಯತ್ನಿಸುವ ಶಿವಲಿಂಗಂ ಕೆಜಿಎಫ್‌ ಬಳಿ ಇರುವ ಮರದಘಟ್ಟ ಎಂಬ ಗ್ರಾಮದ ಸಮಸ್ಯೆಗಳ ಮೂಲಕ ವಿವರಿಸುತ್ತಾರೆ. ಈ ಹಳ್ಳಿಯ ಪ್ರಬಲ ರೆಡ್ಡಿ ಜಾತಿಯ ಶ್ರೀಮಂತ ರೈತರು ಎಲ್ಲ ಸಮುದಾಯಗಳ ಬಡ ರೈತರ ಜಮೀನುಗಳಲ್ಲಿ ಅವರ ದನಗಳನ್ನು ಮೇಯಲು ಬಿಡುವ ಮೂಲಕ, ಬೆಳೆಗಳನ್ನು ನಾಶಪಡಿಸುವ ದೌರ್ಜನ್ಯ ನಡೆಸುತ್ತಿದ್ದುದನ್ನು ಗಮನಿಸಿದ ಶಿವಲಿಂಗಮ್‌ ಇದನ್ನು ಬಗೆಹರಿಸಲು ನಿರ್ಧರಿಸುತ್ತಾರೆ. ಈ ಸಂದರ್ಭದಲ್ಲಿ ಶಿವಲಿಂಗಮ್‌ ಸಂಪರ್ಕದಲ್ಲಿದ್ದ ಕರ್ನಾಟಕ ವಿಮೋಚನಾ ರಂಗದ ಭಿನ್ನ ಆಲೋಚನೆಯಿಂದ ಖಿನ್ನರಾದರೂ ಧೃತಿಗೆಡದೆ ಹೋರಾಡಿ , ದಲಿತರನ್ನು ಒಗ್ಗೂಡಿಸಿ ದೌರ್ಜನ್ಯಗಳನ್ನು ಕೊನೆಗಾಣಿಸುವಲ್ಲಿ ಯಶಸ್ವಿಯಾಗಿದ್ದು ಈ ಅಧ್ಯಾಯದ ತಿರುಳು .

ಚಿತ್ರದುರ್ಗ ಜಿಲ್ಲೆಯಲ್ಲಿ ತಮ್ಮ ಹೋರಾಟದ ಅನುಭವಗಳನ್ನು ಅಧ್ಯಾಯ 5ರಲ್ಲಿ ಹಂಚಿಕೊಳ್ಳುವ ಶಿವಲಿಂಗಮ್‌ ತನಿಗೇನಹಳ್ಳಿ ಎಂಬ ಗ್ರಾಮದ ಉದಾಹರಣೆಯ ಮೂಲಕ ತಮ್ಮ  ಪ್ರಯತ್ನಗಳನ್ನು ದಾಖಲಿಸುತ್ತಾರೆ. ಎತ್ತರದ ಪ್ರದೇಶದಲ್ಲಿದ್ದ ನಾಯಕ ಸಮುದಾಯದವರು ತಮ್ಮ ಮನೆಗಳ ತ್ಯಾಜ್ಯ ನೀರನ್ನು ಕೆಳಗಿನ ಪ್ರದೇಶದಲ್ಲಿದ್ದ ಮಾದಿಗರ ಮನೆಗಳ ಕಡೆ ಹರಿಸುವಂತೆ ಮಾಡಿ,ಇದಕ್ಕಾಗಿಯೇ ನಡುವೆ ಇರುವ ರಸ್ತೆಯನ್ನೂ ಹಾಳುಮಾಡಿರುತ್ತಾರೆ. ಇದನ್ನು ಪ್ರಶ್ನಿಸಿದ ಮಾದಿಗರ ಮೇಲೆ ಭೀಕರ ದಾಳಿ ನಡೆಸುತ್ತಾರೆ. ಅನೇಕರಿಗೆ ಪೆಟ್ಟಾಗುತ್ತದೆ. ಇಂತಹುದೇ ಜಾತಿ ವೈಷಮ್ಯದ ಕಲಹಗಳನ್ನು ಪರಿಹರಿಸಲು ಶಿವಲಿಂಗಮ್‌ ಅವರ ಸಂಘಟನೆಯು ಸಮುದಾಯಗಳೊಂದಿಗೆ ಮಾತುಕತೆಗಳನ್ನಾಡುವ ಮೂಲಕವೇ ಅಂತ್ಯಗೊಳಿಸುತ್ತದೆ. ಇಂತಹ ಹಲವು ಪ್ರಜಾಸತ್ತಾತ್ಮಕ ಮಾದರಿಯ ಹೋರಾಟಗಳನ್ನು ತಮ್ಮ ಕೃತಿಯಲ್ಲಿ ಶಿವಲಿಂಗಮ್‌ ದಾಖಲಿಸುತ್ತಾರೆ. ಹೊಸರಂಗಾಪುರ , ಪಲ್ಲವಗೆರೆ ಗ್ರಾಮಗಳ ಗ್ರಾಮ ಭೂ ಹೋರಾಟಗಳು ಇದೇ ಮಾದರಿಯಲ್ಲಿ ಅಂತ್ಯವಾಗುತ್ತವೆ. ,

ಅಧ್ಯಾಯ ಹತ್ತರಲ್ಲಿ ಶಿವಲಿಂಗಮ್‌ ರಾಣೆಬೆನ್ನೂರು ತಾಲ್ಲೂಕಿನ 87 ಗ್ರಾಮಗಳ ಸಮೀಕ್ಷೆಯ ಅಂಕಿಅಂಶಗಳನ್ನು ದಾಖಲಿಸುತ್ತಾರೆ. ಈ ಕಾರ್ಯದಲ್ಲಿ ಜಾತಿ ಗೋಡೆಗಳನ್ನು ಒಡೆದು ಮುನ್ನಡೆದಿರುವುದು ಉತ್ತಮ ಬೆಳವಣಿಗೆಯಾಗಿ ಕಾಣುತ್ತದೆ. ಈ ಗ್ರಾಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮಾದಿಗ ಸಮುದಾಯದ ಸ್ಥಿತಿಗತಿಗಳನ್ನು ದತ್ತಾಂಶ ಸಮೇತ ಸರ್ಕಾರಕ್ಕೆ ಸಲ್ಲಿಸುವ ಮೂಲಕ ಸ್ವಾಭಿಮಾನಿ ದಲಿತ ಶಕ್ತಿ ಸಂಘಟನೆ, ಸಾಂವಿಧಾನಿಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಒಂದು ಹೋರಾಟದ ಮಾದರಿಯನ್ನು ಅನಾವರಣಗೊಳಿಸುತ್ತಾರೆ. ಸೈದ್ಧಾಂತಿಕ ತಳಹದಿ, ತಾತ್ವಿಕ ಚೌಕಟ್ಟು ಮತ್ತು ತಲುಪಬೇಕಾದ ಗುರಿ ಇವುಗಳು ವೈರುಧ್ಯಗಳನ್ನು ಮೀರಿ ಸ್ಪಷ್ಟವಾಗಿ ಇದ್ದರೆ, ಹೋರಾಟದ ಮಾದರಿ ಯಾವುದೇ ಆದರೂ ಯಶಸ್ಸು ಗಳಿಸಬಹುದು ಎನ್ನುವುದನ್ನು ಶಿವಲಿಂಗಮ್‌ ಮತ್ತು ಅವರ “ ಸ್ವಾಭಿಮಾನಿ ದಲಿತ ಶಕ್ತಿ ” ಸಂಘಟನೆ ನಿರೂಪಿಸಿರುವುದು  ಈ ಪುಸ್ತಕದ ಓದಿನಿಂದ ಸ್ಪಷ್ಟವಾಗುತ್ತದೆ.

 

 ಶಿವಲಿಂಗಮ್ ರವರು ನನಗೆ ಕಳೆದ ಮೂವತ್ತು ವರುಷಗಳಿಂದ ಪರಿಚಿತರು. ಅವರು ನಡೆಸುತ್ತಿರುವ ಸಂಘಟನೆಗಳ ಬಗ್ಗೆಯೂ ನನಗೆ ಅರಿವಿದೆ. ತಳಮಟ್ಟದಲ್ಲಿ ಅವರರ ಸಂಘಟನಾಚಾತುರ್ಯ ಮೆಚ್ಚುವಂತಹವುದು. ಈ ಬಗೆಯ ಕೌಶಲ ಸಾಧ್ಯವಾಗುವುದು ಆ ಮಟ್ಟದ ಅವಮಾನ ನೋವುಗಳನ್ನು ಸ್ವಂತವಾಗಿ ಅನುಭವಿಸಿದಾಗಲೇ. ಅಂಬೇಡ್ಕರರ ಸಂವಿಧಾನದ ಫಲದಿಂದಾಗಿ ಶಿವಲಿಂಗಮ್ ನಂತಹವರಿಗೆ ಶಿಕ್ಷಣ ದೊರಕಿತು. ಅದನ್ನು ಸಮಾಜದ ಪರಿವರ್ತನೆ ಗಾಗಿ ಬಳಸುವ ತಾತ್ವಿಕ ತೀರ್ಮಾನಕ್ಕೆ ಶಿವಲಿಂಗಮ್ ರವರ ವ್ಯಕ್ತಿತ್ವ  ಮತ್ತು ಬದ್ಧತೆಗಳು ಎಲ್ಲರಿಗು ದಕ್ಕುವಂತಹುದಲ್ಲ. ಇದಕ್ಕೆ ಅಪಾರವಾದ ಓದು, ವಿಚಾರಮಂಥನ ಮತ್ತು ಮಾನಸಿಕ ಸಿದ್ಧತೆಗಳು ಬೇಕಾಗುತ್ತವೆ. ದೂರದ ತಮಿಳುನಾಡಿನಿಂದ ಬಂದು ಈ ನೆಲದ ಕಸುವನ್ನು ಅರಿತುಕೊಂಡು ದೀನ ದಲಿತರ ಸಂಕಷ್ಟಗಳಿಗೆ ಸ್ಪಂದಿಸುವುದು ಸಾಮಾನ್ಯವಲ್ಲ. ಹಾಗಾಗಿ ಶಿವಲಿಂಗಮ್ ರವರು ನನಗೆ ಅಸಾಮಾನ್ಯರಾಗಿಯೇ ಕಾಣುತ್ತಾರೆ.  ಸರಕಾರೀ ಕೆಲಸಕ್ಕೆ ಸೇರುವಾಗ ಹಿರಿಯರೊಬ್ಬರು ಹೇಳಿದ ಕಿವಿ ಮಾತಿದು–  ಈಗಿನ ಸರಕಾರೀ ವ್ಯವಸ್ಥೆ ಎಷ್ಟು ಪಕ್ಕಾ ಆಗಿದೆಯೆಂದರೆ , ಅದು ಒಳ ಸೇರಿದವರನ್ನು ಗೋಳು ಹೊಯ್ದುಕೊಳ್ಳದೆ,  ಅವಮಾನಪಡಿಸದೆ, ನಾನು ಯಾಕಾದರೂ ಈ ಕೆಲಸಕ್ಕೆ ಬಂದೆ ಎಂದು ಅನಿಸದೇ ಯಾರನ್ನೂ  ಹೊರಗೆ ಕಳುಹಿಸಿದ ದಾಖಲೆಯೇ ಇಲ್ಲ. ಇಂತಹ ಪರಿಸರದಲ್ಲೂ ಶಿವಲಿಂಗಮ್ ರವರು ಸಮಾಜದತ್ತ ತಿರುಗಿ ಇಷ್ಟೆಲ್ಲಾ ಸಾಧಿಸಿದ್ದಾರಲ್ಲ ಎಂಬುದೇ  ಅಸಾಮಾನ್ಯವಾಗಿ ಕಾಣುವುದು. ಅದೆಷ್ಟು ಕುಟುಂಬಗಳಿಗೆ ಶಿವಲಿಂಗಂ  ತಲೆಗೊಂದು ಸೂರು ಒದಗಿಸಿದ್ದಾರೋ , ಎಷ್ಟು ಜನರಿಗೆ ಒಂದಿಷ್ಟು ಜಮೀನು ಒದಗಿಸಿದ್ದಾರೋ  ,ಅದೆಷ್ಟು ಯುವಕರನ್ನು  ಜೀವನದಲ್ಲಿ ಸದುದ್ಧೇಷ್ಯಕ್ಕೆ ಸಜ್ಜುಗೊಳಿಸಿದ್ದಾರೋ ಲೆಕ್ಕವಿಲ್ಲ. ಇವೆಲ್ಲ ಅವರ ಪ್ರತಿಭೆ ,ನಿಷ್ಠೆ ,ನಿರಂತರ ಶ್ರಮಗಳಿಂದ ಸಾಧ್ಯ ವಾಗಿದೆ. ಆದರೆ ಶಿವಲಿಂಗಮ್ ಇದಕ್ಕೆ ಕಾರಣವಾಗಿ ನಮ್ಮ ದೇಶದ ಜಾತಿ ವ್ಯವಸ್ಥೆಯಬಗ್ಗೆ ಬೆರಳು ತೋರಿಸುತ್ತಾರೆ. ಇಂತಹ ವ್ಯವಸ್ಥೆಯ ಸುಧಾರಣೆಯಾಗಿದ್ದಿದ್ದರೆ ನನ್ನಂತಹವರ  ಅಗತ್ಯವೇ ಇರುವುದಿಲ್ಲ ಎನ್ನುವ ಭಾವನೆ ಅವರದು. ಇದು ಆಧುನಿಕ ಭಾರತಕ್ಕೆ ಒಂದಿಷ್ಟು ಭರವಸೆ ನೀಡುತ್ತದೆ. ಅಲ್ಲಲ್ಲಿ ಶಿವಲಿಂಗಮ್ ತರಹದವರು ಇರುವುದರಿಂದ ಬಾಬಾಸಾಹೇಬರ ಕನಸು ಮುಂದೆಂದಾದರೂ ನಿಜವಾದೀತೇನೋ ಎಂಬ ಆಸೆ ಚಿಗುರುತ್ತದೆ.

 ವಿ ಎಸ್  ಎಸ್  ಶಾಸ್ತ್ರೀ   ಕೋಲಾರ

 ತತ್ವ ಸಿದ್ದಾಂತಗಳ ಒಳಗೊಳ್ಳುವಿಕೆ

ಭಾರತೀಯ ಸಮಾಜದಲ್ಲಿ ಸಾಂಪ್ರದಾಯಿಕ ಪ್ರತಿಗಾಮಿ ಚಿಂತನೆಗಳನ್ನು ಮೀರಿ, ಹಿಮ್ಮೆಟ್ಟಿಸುವಂತಹ ಪುರೋಗಾಮಿ ಚಿಂತನೆಗಳ ಕಣಜವೇ ಲಭ್ಯವಿದೆ. ಇದನ್ನು ಅನುಸರಿಸುವುದು, ಅನುಕರಿಸುವುದು ಸಮಾಜದ ಜವಾಬ್ದಾರಿಯಾಗಿರುತ್ತದೆ. ಗಾಂಧಿ, ಲೋಹಿಯಾ, ಅಂಬೇಡ್ಕರ್‌, ಪೆರಿಯಾರ್‌, ಮಾರ್ಕ್ಸ್‌ ಹೀಗೆ ಶೋಷಿತ ಜನಸಮುದಾಯಗಳ ವಿಮೋಚನೆ ಮತ್ತು ಉನ್ನತಿಗೆ ಅನುಸರಿಸಬೇಕಾದ ಮಾರ್ಗಗಳನ್ನು ಭಿನ್ನ ರೀತಿಗಳಲ್ಲಿ ನಿರ್ವಚಿಸಿ ನಮ್ಮ ನಡುವೆ ಬಿಟ್ಟುಹೋಗಿದ್ದಾರೆ. ಈ ಎಲ್ಲ ದಾರ್ಶನಿಕರ ಗುರಿ ಒಂದೇ, ಮಾನವ ಸಮಾಜದ ಅಭ್ಯುದಯ ಹಾಗೂ ಮಾನವ ಘನತೆ, ಸಮಾನತೆಯ ಬದುಕು. ಇದನ್ನು ಸಾಧಿಸಲು ವರ್ತಮಾನದಲ್ಲಿ ನಾವು ಅನುಸರಿಸುವ ಮಾರ್ಗಗಳು ಭಿನ್ನವಾಗಿರುವುದು ಸಹಜವೂ ಹೌದು ಅಗತ್ಯವೂ ಹೌದು. ಈ ದೃಷ್ಟಿಯಿಂದಲೇ ಗೆಳೆಯ ಶಿವಲಿಂಗಮ್‌ ಅವರ  ʼಸ್ವಾಭಿಮಾನಿ ದಲಿತ ಶಕ್ತಿʼ ಸಂಘಟನೆಯ ಹೋರಾಟಗಳನ್ನು ಗುರುತಿಸಬೇಕಿದೆ.

ಜಾತಿ ಶ್ರೇಣಿಯಲ್ಲಿ ಅತ್ಯಂತ ಕೆಳಸ್ತರದಲ್ಲಿ ಗುರುತಿಸಲ್ಪಡುವ ಕಾಂಡಕೊರಕ ಎಂಬ ಜಾತಿಯಲ್ಲಿ ಹುಟ್ಟಿ ಬೆಳೆದು ತಾವು ಅನುಭವಿಸಿದ, ಎದುರಿಸಿದ ದೌರ್ಜನ್ಯ, ತಾರತಮ್ಯ, ಅಸ್ಪೃಶ್ಯತೆ, ಅನ್ಯಾಯ ಮತ್ತು ಅಸಮಾನತೆಗಳ ಕಾರಣಗಳನ್ನು ಚಾರಿತ್ರಿಕ ನೆಲೆಯಲ್ಲಿ ಗ್ರಹಿಸಿ, ವರ್ತಮಾನದಲ್ಲಿ ಅದಕ್ಕೆ ಪರಿಹಾರೋಪಾಯಗಳನ್ನು ರೂಪಿಸಿಕೊಂಡು, ಭವಿಷ್ಯದಲ್ಲಿ ಶೋಷಿತ ಸಮುದಾಯಗಳ ಉಜ್ವಲ ಜೀವನಕ್ಕಾಗಿ ಶ್ರಮಿಸುವುದು , 21ನೆ ಶತಮಾನದ ಡಿಜಿಟಲ್‌ ಯುಗದಲ್ಲಿ ಆಗಲೇಬೇಕಾದ ಕೆಲಸ. ಇದನ್ನು ತಮ್ಮದೇ ಆದ ಇತಿಮಿತಿಯಲ್ಲಿ, ಒಂದು ಸಣ್ಣ ಪ್ರದೇಶದಲ್ಲಿ ಪ್ರಯೋಗಿಸಿ, ಯಶಸ್ವಿಯಾಗಿರುವ ಶಿವಲಿಂಗಮ್‌ ಮತ್ತು ಅವರ ಸಂಘಟನೆಯ ಯಶೋಗಾಥೆ ಅನುಕರಣೀಯ ಎಂದರೆ ಅತಿಶಯೋಕ್ತಿಯಾಗಲಾರದು. ಈ ಕಾರಣಕ್ಕಾಗಿ ಇಂದಿನ ಯುವ ತಲೆಮಾರು ಇಂತಹ ಕೃತಿಗಳನ್ನು ಓದಬೇಕು, ಚರ್ಚೆ ಮಾಡಬೇಕು. ತಿಳುವಳಿಕೆ, ಅರಿವು ಹೆಚ್ಚಿಸಿಕೊಳ್ಳಬೇಕು. (ಕೋಲಾರದ ಸಂಗಾತಿ ಮಾರ್ಕ್ಸ್‌ವಾದಿ ಚಿಂತಕ ವಿ.ಎಸ್.ಎಸ್.‌ ಶಾಸ್ತ್ರಿ ಅವರ ಗಮನಾರ್ಹ ಮಾತುಗಳನ್ನು ಬಾಕ್ಸ್‌ನಲ್ಲಿ ನೀಡಲಾಗಿದೆ.)

ಗೆಳೆಯ ಎಸ್‌ ಶಿವಲಿಂಗಮ್‌ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.

 

C M Siddaramaiah  :  ನವೆಂಬರ್​​ ಕ್ರಾಂತಿ ಸದ್ದು, ದೆಹಲಿ ದಂಡಯಾತ್ರೆಗೆ ನಾಯಕರು ಸಜ್ಜು  #pratidhvani

 

 

Tags: autobiographyna divakaraS̤ Shivalingamspecial articles
Previous Post

ಇಂದಿನ ರಾಶಿ ಭವಿಷ್ಯ: ಈ ರಾಶಿಯವರಿಗೆ ಎಚ್ಚರಿಕೆ..!

Next Post

ವೃದ್ದೆ ಕೊ* ಮಾಡಿ ಚಿನ್ನ ದೋಚಿದ್ದ ಬಾಡಿಗೆದಾರರು..

Related Posts

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
0

ಥಣಿಸಂದ್ರದ ಎಸ್‌ಆರ್‌ಕೆ ನಗರದಲ್ಲಿ ನಡೆದಿರುವ ಮನೆಗಳ ಧ್ವಂಸ ಕಾರ್ಯವು, ಕೇವಲ ಒಂದು ಬಡಾವಣೆಯ ತೆರವು ಅಲ್ಲ; ಅದು ಇಂದಿನ ಆಡಳಿತ ವ್ಯವಸ್ಥೆಯ ಮಾನವೀಯ ಮುಖವನ್ನು ಪ್ರಶ್ನಿಸುವ ಗಂಭೀರ...

Read moreDetails
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

ಪೊಲೀಸರ ಮೇಲಿನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್

January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

January 13, 2026
ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

January 13, 2026
Next Post
ವೃದ್ದೆ ಕೊ* ಮಾಡಿ ಚಿನ್ನ ದೋಚಿದ್ದ ಬಾಡಿಗೆದಾರರು..

ವೃದ್ದೆ ಕೊ* ಮಾಡಿ ಚಿನ್ನ ದೋಚಿದ್ದ ಬಾಡಿಗೆದಾರರು..

Recent News

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!
Top Story

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

by ಪ್ರತಿಧ್ವನಿ
January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ
Top Story

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Top Story

ರಾಹುಲ್ ಗಾಂಧಿ ಜೊತೆಗೆ ರಾಜಕಾರಣ ಚರ್ಚೆ ಮಾಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

by ಪ್ರತಿಧ್ವನಿ
January 13, 2026
ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?
Top Story

ಅಕ್ರಮ ಗಣಿಗಾರಿಕೆ ಸಾಬೀತು: ಶಾಸಕ ಜನಾರ್ದನ ರೆಡ್ಡಿಗೆ ಮತ್ತೆ ಕಾನೂನು ಸಂಕಷ್ಟ..?

by ಪ್ರತಿಧ್ವನಿ
January 13, 2026
10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?
Top Story

10 ನಿಮಿಷಗಳ ಡೆಲಿವರಿ ಕೈಬಿಟ್ಟ ಬ್ಲಿಂಕಿಟ್: ಮಹತ್ವದ ನಿರ್ಧಾರದ ಹಿಂದಿನ ಕಾರಣವೇನು?

by ಪ್ರತಿಧ್ವನಿ
January 13, 2026
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

ಅಕ್ರಮ ತೆರವಿನ ಹೆಸರಿನಲ್ಲಿ ಬಡವರ ಬದುಕು ಧ್ವಂಸ!: ರಾ ಚಿಂತನ್..!!

January 13, 2026
ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

ಮಹಾತ್ಮ ಗಾಂಧಿ ಹೆಸರು ಎಂದರೆ ಬಿಜೆಪಿಗೆ ಅಲರ್ಜಿ: ಸಿ.ಎಂ ಸಿದ್ದರಾಮಯ್ಯ

January 13, 2026
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada