

ಮಹಾತ್ಮ ಗಾಂಧಿ ಅವರು 1925ರಲ್ಲಿ ಪರ್ವತಗಳ ನಾಡಿಗೆ ಭೇಟಿ ನೀಡಿದ್ದರು. ಅವರು ಅಂದು ಭೇಟಿ ನೀಡಿದ್ದನ್ನು ಸ್ಮರಿಸಲು ಡಾಜರ್ಲಿಂಗ್ ಹಿಮಾಲಯನ್ ರೈಲ್ವೆ (DHR) ವತಿಯಿಂದ ಒಂದು ತಿಂಗಳ ಕಾಲ ʼ ಶತಾಬ್ದಿ ಮಾರ್ಚ್ʼ ಪ್ರಾರಂಭಿಸಲಿದೆ.

ಈ ʼ ಶತಾಬ್ಧಿ ಮಾರ್ಚ್ ʼ ಪಶ್ಚಿಮ ಬಂಗಳಾದ ಡಾರ್ಜಲಿಂಗ್ ರೈಲ್ವೆ ನಿಲ್ದಾಣದಿಂದ ಆರಂಭಗೊಂಡು ಸಿಲಿಗುರಿ ನಿಲ್ಧಾಣದವರೆಗೂ ಸಂಚರಿಸಲಿದೆ.

1925ರಲ್ಲಿ ಜೂನ್ ನಲ್ಲಿ ಬಾಪು ಅವರು ಡಾರ್ಜಲಿಂಗ್ ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪ್ರಖ್ಯಾತ ವಕೀಲರು ಹಾಗೂ ಸ್ವರಾಜ್ ಪಕ್ಷದ ಸಂಸ್ಥಾಪಕ ದೇಶಬಂಧು ಚಿತ್ತರಂಜನ್ ದಾಸ್ ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಅವರು ಪ್ರಯಾಣಿಸಿದರು. ಜೂನ್ 4 ರಿಂದ 9 ರವರೆಗೂ ದಾಸ್ ಅವರೊಂದಿಗೆ ಬಾಪು 5 ದಿನಗಳ ಕಾಲ ಜೊತೆಗಿದ್ದು, ಅವರ ಯೋಗ ಕ್ಷೇಮವನ್ನು ನೋಡಿಕೊಳ್ಳುವುದುರ ಜೊತೆಗೆ ಅವರೊಂದಿಗೆ ಅನೇಕ ವಿಚಾರಗಳ ಬಗ್ಗ ಚರ್ಚೆ ನಡೆಸಿದ್ದರು.











