
ಸರ್ಕಾರಿ ನೌಕರನೊಬ್ಬ ಮನನೊಂದು ಆತ್ನ ಹತ್ಯೆಗೆ ಯತ್ನಿಸಿರುವ ಘಟನೆ ಮೆಜೆಸ್ಟಿಕ್ ನ ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ವೀರೇಶ್ ಎಂದು ಗುರುತಿಸಲಾಗಿದ್ದು, ಆತ ವಿಧಾನಸೌಧದಲ್ಲಿ ʼಡಿ ಗ್ರೂಪ್ʼ ನೌಕರನಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದುಬಂದಿದೆ.
ಘಟನೆಯ ವಿವರ
ಮಧ್ಯಾಹ್ನ ಸುಮಾರು 3:15 ರಿಂದ 3:30ರ ನಡುವೆ ವೀರೇಶ್ ಮೆಟ್ರೋ ನಿಲ್ಧಾಣದ ಪ್ಲಾಟ್‌ಫಾರಂ 3ರಲ್ಲಿ ( platform) (Green Line) ಮೆಜೆಸ್ಟಿಕ್ ನಿಂದ ಸಿಲ್ಕ್ ಬೋರ್ಡ್ ನಡುವೆ ಸಾಗುವ ಮೆಟ್ರೋ ರೈಲು ಸಂಚರಿಸುವ ಮಾರ್ಗದ ಹಳಿಗೆ ಹಾರಿದ್ದಾನೆ. ರೈಲು ಚಂಚಾರ ಸ್ಥಗಿತಗೊಳಿಸಿದ್ದರಿಂದಾಗಿ, ಸ್ಥಳದಲ್ಲಿದ್ದ ಮೆಟ್ರೋ ಸಿಬ್ಬಂದಿಗಳು ಕಾರ್ಯಪ್ರೋವೃತ್ತರಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದುಕೊಳ್ಳುತ್ತಿದ್ದಂತೆ ಆಗ್ನಿಶಾಮಕ ಸಿಬ್ಬಂದಿ ಅವರು ತಡ ಮಾಡದೆ ಸ್ಥಳಕ್ಕೆ ಆಗಮಿಸಿ ಆತನ ರಕ್ಷಣೆಗೆ ಮುಂದಾಗಿದ್ದಾರೆ. ಗಂಭೀರ ಗಾಯಗೊಂಡ ವೀರೇಶ್ ನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದಾನೆ. ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರು ಹೇಳಿಕೆಯ ಪ್ರಕಾರ ವೀರೇಶ್ ಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆಯಾದರು ಆತ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲವೆಂದು ಹೇಳಿದ್ದಾರೆ.
