
ರಾಜ್ಯದ ರಾಜಕೀಯದಲ್ಲಿ ಕೆಲ ಶಾಸಕರು ಹಾಗೂ ಸಚಿವರು ಸಿಎಂ ಬದಲಾವಣೆ ಕುರಿತು ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ದಹೆಲಿಯಿಂದ ಸರ್ಜೇವಾಲ ರವರು ಬೆಂಗಳೂರಿಗೆ ಆಗಮಿಸಿದ ಕೈ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಎಲ್ .ಆರ್ ಶಿವರಾಮೇಗೌಡ, ಹಾಗೂ ಕುಣಿಗಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ಹೆಚ್.ಡಿ ರಂಗನಾಥ್ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಪರ ಬ್ಯಾಂಟಿಗ್ ಮಾಡಿದ್ದಾರೆ.
ಸಿಎಂ ಬದಲಾವಣೆ ಖಚಿತ ಇನ್ನೆರೆಡು ತಿಂಗಳಲ್ಲಿ ಸಿಎಂ ಬದಲಾಗಲಿದ್ದು ನಿಶ್ಚಿತವಾಗಿ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುತ್ತಾರೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ನೀಡಿದ ನಾಯಕರಿಗೆ ಕಾಂಗ್ರೆಸ್ ಪಕ್ಷದ ಶಿಸ್ತು ಪಾಲನ ಸಮಿತಿ ಈ ಇಬ್ಬರೂ ನಾಯಕರಿಗೆ ನೋಟಿಸ್ ನೀಡಿದೆ.
ಕೆಲವು ತಿಂಗಳ ಹಿಂದಷ್ಟೇ ರಾಜ್ಯಕ್ಕೆ ರಣದೀಪ್ ಸಿಂಗ್ ಸರ್ಜೇವಾಲ ಎಐಸಿಸಿ ರಾಜ್ಯ ಉಸ್ತುವಾರಿ ಆಗಮಿಸಿ.
ಕೆಲ ಸಚಿವರು ಇದೇ ಸಿಎಂ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡಿದ್ದ ಹಿನ್ನಲೆಯಲ್ಲಿ ಅವರು ಕೈ ನಾಯಕರ ಸಭೆ ನಡೆಸಿದರು. ಅದರಲ್ಲೂ ಸಚಿವರು, ಶಾಸಕರು, ಸಂಸದರ ಜೊತೆ ಚರ್ಚೆ ನಡೆಸಿ ಯಾವುದೇ ಸಂದರ್ಭದಲ್ಲೂ ಹಾಗೂ ಸಾರ್ವಜನಿಕವಾಗಿ ಸಿಎಂ ಬದಲಾವಣೆ ಕುರಿತು ಹೇಳಿಕೆಯನ್ನು ನೀಡಬಾರದೆಂದು ಖಡಕ್ ಎಚ್ಚರಿಕೆಯನ್ನು ಕೈ ನಾಯಕರಿಗೆ ಮುಟ್ಟಿಸಿದರು.
ಇದಾದ ಕೆಲವು ದಿನಗಳಲ್ಲೇ ಕೆ.ಎನ್. ರಾಜಣ್ಣ ಸಹಾಕರ ಸಂಘಗಳ ಸಚಿವರು ಚುನಾವಣಾ ಆಕ್ರಮಕ್ಕೆ ಸಂಬಂಧಿಸಿದ ಹೇಳಿಕೆಯನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ʼವೋಟ್ ಚೋರಿʼ ಅಭಿಯಾನವನ್ನು ಪ್ರಾರಂಭಿಸಿತ್ತು ಇದೇ ಸಂದರ್ಭದಲ್ಲಿ ಸಚಿವರ ಈ ಹೇಳಿಕೆ ಕೊಲಾಹಲವನ್ನೇ ಸೃಷ್ಟಿಸಿತ್ತಲ್ಲದೆ, ರಾಹುಲ್ ಗಾಂಧಿ ಅವರನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಸುವಂತೆ ಮಾಡಿದ್ದು ಸುಳ್ಳಲ್ಲ. ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ High Command ಕೆ.ಎನ್ ರಾಜಣ್ಣ ಅವರ ಮೇಲೆ ಶಿಸ್ತುಕ್ರಮ ಜರುಗಿಸುವುದರ ಜೊತೆಗೆ ಕಠಿಣ ಕ್ರಮವನ್ನೇ ಜರುಗಿಸಿತು. ಅದುವೇ ಸಚಿವರನ್ನು ಸಚಿವ ಸಂಪುಟದಿಂದ ಕೈ ಬಿಡಲು ನಿರ್ಧಾರ ಮಾಡಿತ್ತು ರಾಜಣ್ಣ ಅವರು ರಾಜೀನಾಮೆಯನ್ನು ಸಲ್ಲಿಸುವ ಮೂಲಕ ಸಚಿವ ಸ್ಥಾನದಿಂದ ಕಳೆಗಿಳಿಬೇಕಾಯಿತು.

ಈ ಮಧ್ಯೆ, ದಸರ ಸಂಭ್ರಮಾಚರಣೆ ಇರುವಾಗಲೇ ರಾಜ್ಯದಲ್ಲಿ ಕೆಲವು ನಾಯಕರ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದೆ ತಡ, ಸಂಚಲನಕ್ಕೆ ಕಾರಣವಾಯಿತು. ಅವರು ಕೂಡ ಸಿಎಂ ವಿಚಾರದ ಹೇಳಿಕೆ ನೀಡಿದ ಹಿನ್ನಲ್ಲೆಯಲ್ಲಿ DAC (Disciplinary Action Committee) ತಡ ಮಾಡದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಎಡೆ ಮಾಡಿಕೊಡದೆ ಶಾಸಕರಿಗೆ ನೋಟಿಸ್ ನೀಡಿದೆ.
ಇನ್ನು ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದಾರಾಮಯ್ಯ ಮೈಸೂರು ರೌಂಡ್ಸ್ ಮಾಡುತ್ತಿದ್ದಾರೆ. ಶುಕ್ರವಾರದ ಸಂಜೆ ವೇಳೆ ಅಂಬಾರಿ ಬಸ್ ಮೂಲಕ ಅರಮನೆ ದೀಪಗಳ ಅಲಂಕಾರವನ್ನು ವೀಕ್ಷಿಸಿದಲ್ಲದೆ ಕೆಲವು ಸ್ಥಳಗಳಿಗೂ ಭೇಟಿ ನೀಡಿದ್ದಾರೆ.
ಸಿಎಂ ಬದಲಾವಣೆ ಕೂಗು ಕೇಳಿಸಿದರು, ಕೇಳಿಸದಂತೆ ಅತ್ತ ಸಿಎಂ ಸಿದ್ದರಾಮಯ್ಯ ರವರು ನಾನೇ ಮುಖ್ಯಮಂತ್ರಿಯಾಗಿ ಈ ಅವಧಿಯನ್ನು ಪೂರ್ಣಗೊಳಿಸುತ್ತೇನೆಂದು ವಿಶ್ವಾಸದಿಂದ ಹೇಳುತ್ತಿರುವ ಹಿಂದಿರುವ ಮರ್ಮವಾದರು ಏನು?

ಇತ್ತ ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡನ್ನು ನಿಭಾಯಿಸುತ್ತಿರುವುದು ಪಕ್ಷದಲ್ಲಿರುವ ವಿರೋಧಿಗಳು ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಎಂಬಂತೆ ನಡೆದುಕೊಳ್ಳುತ್ತಿರುವುದನ್ನು ಗಮನಿಸಬಹುದು.
ಪಕ್ಷ ಸಂಘಟನೆಯಲ್ಲಿ ಡಿ.ಕೆ. ಶಿವಕುಮಾರ್ ಆಧ್ಯಕ್ಷರಾಗುವ ಮುನ್ನಾ ಅಧ್ಯಕ್ಷರಾದ ಮೇಲಂತು ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದನ್ನು ಗಮನಿಸಬೇಕಾಗಿದೆ.
ಪಕ್ಷಕ್ಕೆ ಡಿ.ಕೆ. ಶಿವಕುಮಾರ್ ರವರು ಕೊಡುಗೆ ಅಪಾರವಾಗಿದ್ದು, ಅವರು ಸಿಎಂ ಆದರೂ ತಪ್ಪಿಲ್ಲವೆಂಬಂತೆ ಕೆಲ ನಾಯಕರು ಹೇಳಿಕೆಯನ್ನು ನೀಡುತ್ತಿರುವುದು ಪಕ್ಷಕ್ಕೆ Damage ಆಗುತ್ತಿರುವುದನ್ನು ಎಐಸಿಸಿ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿರುವುದು ಮಾತ್ರ ಸತ್ಯ.
ಸಿಎಂ ಬದಲಾವಣೆ ವಿಚಾರ ಬಿಜೆಪಿ ರಾಜಕೀಯ ಮಾಡಿದರು ಕೂಡ ಇದು ಅವರಿಗೆ ಪ್ಲಸ್ ಆಗದ ಕಾರಣ, ಬಿಜೆಪಿ ಪಕ್ಷ ಎರಡು ಭಾರೀ ಸಂವಿಧಾನದ ವಿರೋಧದ ನೀತಿಯಿಂದ ಅಧಿಕಾರಕ್ಕೆ ಬಂದಿತ್ತಾದರೂ ಅದು ಕೂಡ ಆಪರೇಷನ್ ಕಮಲದ ಮೂಲಕವೇ ಎಂಬುದನ್ನು ಬಿಜೆಪಿ ಮರೆಯಬಾರದರು. ಹಾಗೂ ಒಂದು ಬಾರಿಯೂ ಲಿಂಗಾಯತರ ನಾಯಕನೆಂದು ಗುರುತಿಸಿಕೊಂಡಿರುವ ಬಿ.ಎಸ್.ಯಡಿಯೂರಪ್ಪ ಪೂರ್ಣವಧಿ ಮುಖ್ಯಮಂತ್ರಿಯಾಗಿ ಪೂರೈಸಿಲ್ಲದಿರುವುದು ಮುಖ್ಯವಾದ ಸಂಗತಿಯಾಗಿದೆ.
ಆದರೆ ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರು ಈ ಬಾರೀ ಪೂರ್ಣ ಅವಧಿ ಪುರೈಸಲಿ ಪುರೈಸದಿರಲಿ ಅವರೇ ಹೆಚ್ಚು ಬಾರೀ ಕಾವೇರಿಗೆ ಬಾಗಿನ ಅರ್ಪಿಸಿರುವುದು, ನಾಡ ಹಬ್ಬ ದಸರಾ ಹಬ್ಬದ ಉದ್ಟಾಟನೆ, ಅತೀ ಹೆಚ್ಚು ಬಾರಿ ಬಡಜೆಟ್ ಮಂಡಿನೆ ಹೀಗೆ ಅನೇಕ ಆಯಮಗಳಲ್ಲಿ ಸಿದ್ದರಾಮಯ್ಯ ಅವರು ದಾಖಲೆ ಬರೆದಿದ್ದಾರೆ.
ಆದರೆ ಅವರು ದೇವರಾಜ್ ಅರಸ್ ಅವರಂತೆ ಆಗಲು ಸಾಧ್ಯವಿಲ್ಲ ಎಂಬುದು ಸ್ವತಃ ಸಿದ್ದರಾಮಯ್ಯ ಅವರಿಗೂ ತಿಳಿದಿದೆ.
ಸಿಎಂ ಬದಲಾವಣೆ high command ನಿರ್ಧಾರ ಮಾಡಲಿದ್ದು. ಈ ವಿಚಾರಚಾಗಿ ಕೈ ನಾಯಕರು ಹೆಚ್ಚು ಅಸಕ್ತಿ ತೋರುತ್ತಿರಿವುದು ಅದುವೇ ಅವರಿಗೆ ಮುಳುವಾಗಿರುವುದು ಮಾತ್ರ ಸತ್ಯ.