• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬಿಹಾರದಲ್ಲಿ SIR ಜಾರಿ, ಮೂದಲು 67 ಲಕ್ಷದ ಮತದಾರರು ಔಟ್‌, ಈಗ  47 ಲಕ್ಷ ಮತಾದರರು ಔಟ್‌ !

ಪ್ರತಿಧ್ವನಿ by ಪ್ರತಿಧ್ವನಿ
October 2, 2025
in Top Story, ಕರ್ನಾಟಕ, ದೇಶ, ರಾಜಕೀಯ
0
ಬಿಹಾರದಲ್ಲಿ SIR ಜಾರಿ, ಮೂದಲು 67 ಲಕ್ಷದ ಮತದಾರರು ಔಟ್‌, ಈಗ  47 ಲಕ್ಷ ಮತಾದರರು ಔಟ್‌ !

**EDS: TO GO WITH STORY** New Delhi: The signboard of 'Nirvachan Sadan' outside the Election Commission of India (ECI) building, in New Delhi, Wednesday, Feb. 28, 2024. (PTI Photo/Kamal Kishore) (PTI02_29_2024_000003A)

Share on WhatsAppShare on FacebookShare on Telegram

ಚುನಾವಣೆಯ ಹೊಸ್ತಿಲಿನಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ನಡೆಸಿದ್ದು, ಅಂತಿಮ ಮತಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ಬಿಹಾರದ ಮತಪಟ್ಟಿಯಿಂದ ಬರೋಬ್ಬರಿ 6% ಅಂದರೆ, ಸುಮಾರು 47 ಲಕ್ಷ ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ. ಬೃಹತ್ ಸಂಖ್ಯೆಯ ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆ. ಮತದಾನದಿಂದ ವಂಚಿತರಾಗಿದ್ದಾರೆ.

ADVERTISEMENT

ಜೂನ್ 24ರಂದು ಎಸ್‌ಐಆರ್‌ ಪ್ರಕ್ರಿಯೆಯನ್ನುಆರಂಭಿಸಿದಾಗ ಬಿಹಾರದಲ್ಲಿ 7.89 ಕೋಟಿ ಮತದಾರರಿದ್ದರು. ಮೂರು ತಿಂಗಳ ಕಾಲ ನಡೆದ ಪರಿಷ್ಕರಣೆಯ ನಂತರ ರಾಜ್ಯದಲ್ಲಿ ಅಂತಿಮ ಮತದಾರರ ಸಂಖ್ಯೆ 7.42 ಕೋಟಿಗೆ ಕುಸಿದಿದ್ದು. ಮತದಾರರ ಪ್ರಮಾಣ 5.95% ರಷ್ಟು ಇಳಿಕೆಯಾಗಿದೆ

ಜೂನ್ 24ರಂದು ಎಸ್‌ಐಆರ್ ಆರಂಭ ಮತ್ತು ಸೆಪ್ಟೆಂಬರ್ 30ರಂದು ಅಂತಿಮ ಪಟ್ಟಿ ಪ್ರಕಟಣೆ ನಡುವೆ, ಆಗಸ್ಟ್ 1 ರಂದು ಮತದಾರರ ಕರಡು ಪಟ್ಟಿಯನ್ನು ಆಯೋಗ ಪ್ರಕಟಿಸಿತ್ತು. ಆ ಪಟ್ಟಿಯಲ್ಲಿ 7.24 ಕೋಟಿ ಮತದಾರರ ಹೆಸರುಗಳಿದ್ದವು, 65 ಲಕ್ಷ ಮತದಾರರನ್ನು ಕೈಬಿಡಲಾಗಿತ್ತು. ಆ ನಂತರ, ನಡೆದ ಆಕ್ಷೇಪ ಸ್ವೀಕಾರ ಮತ್ತು ಮರು ಪರಿಶೀಲನಾ ಪ್ರಕ್ರಿಯೆಯಲ್ಲಿ 21.53 ಲಕ್ಷ ಅರ್ಹ ಮತದಾರರನ್ನು ಫಾರ್ಮ್ 6 ಅರ್ಜಿಯ ಮೂಲಕ ಮರಳಿ ಸೇರಿಸಲಾಗಿದೆ.ಆದಾಗ್ಯೂ 47 ಲಕ್ಷ ಮತದಾರರನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ.


ಈ ಪ್ರಕ್ರಿಯೆ ಮತ್ತು ಆಯೋಗದ ಧೋರಣೆಯಿಂದಾಗಿ ಮತದಾನದ ಹಕ್ಕನ್ನು ಕಳೆದುಕೊಂಡಿರುವ 47 ಲಕ್ಷ ಜನರಲ್ಲಿ ಬಹುಸಂಖ್ಯಾತರು ಬಡವರು, ಹಿಂದುಳಿದವರು, ತಳ ಸಮುದಾಯದವರು ಹಾಗೂ ಅಲ್ಪಸಂಖ್ಯಾತರೇ ಆಗಿದ್ದಾರೆ ಎಂದು ಹೇಳಲಾಗಿದೆ. ಇವರಲ್ಲಿ ಹೆಚ್ಚಿನವರು ಬಿಜೆಪಿ ವಿರುದ್ಧ ಮತ ಚಲಾಯಿಸುವವರೇ ಆಗಿದ್ದರೆಂದೂ ಚರ್ಚೆಗಳು ನಡೆಯುತ್ತಿವೆ.


ಜೂನ್ 24 ರಂದು ಎಸ್‌ಐಆರ್ ಘೋಷಿಸಿದ ಚುನಾವಣಾ ಆಯೋಗವು, ಮತದಾರರ ಪಟ್ಟಿಯಲ್ಲಿ ‘ವಿದೇಶಿ ಅಕ್ರಮ ವಲಸಿಗರು ಮತಪಟ್ಟಿಯಿಂದ ತೆಗೆದುಹಾಕುವುದು, ಒಂದಕ್ಕಿಂತ ಹೆಚ್ಚು ಮತದಾರ ಗುರುತಿನ ಚೀಟಿ ಹೊಂದಿರುವವರನ್ನು ಪರಿಷ್ಕರಿಸಿ, ಕೈಬಿಡುವುದು ಹಾಗೂ ವಲಸೆ ಹೋದವರು ಮತ್ತು ಮೃತಪಟ್ಟವರ ಹೆಸರನ್ನು ಪರಿಷ್ಕರಿಸುವುದು’ ಸೇರಿದಂತೆ ವಿವಿಧ ಗುರಿಯನ್ನು ಸಾಧಿಸಲು ಎಸ್‌ಐಆರ್‌ ಅಗತ್ಯವೆಂದು ಹೇಳಿಕೊಂಡಿತ್ತು. ಅದಕ್ಕಾಗಿ, ಬಿಹಾರದಲ್ಲಿನ ನಿವಾಸಿಗಳಲ್ಲಿ, 1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮದಿನಾಂಕ ಅಥವಾ ಜನ್ಮಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬೇಕು ಎಂದು ಹೇಳಿತ್ತು. ಆಧಾರ್ ಅನ್ನು ಪುರಾವೆಯಾಗಿ ಪರಿಗಣಿಸುವುದಿಲ್ಲ ಎಂದು ಘೋಷಿಸಿತ್ತು. ಇದು ಮತಪಟ್ಟಿ ಪರಿಷ್ಕರಣೆ ಮಾತ್ರವಲ್ಲ, ಪೌರತ್ವ ಪರಿಷ್ಕರಣೆಯೂ ಆಗಿದೆ ಎಂಬ ಗಂಭೀರ ಆರೋಪ-ವಿರೋಧಕ್ಕೆ ಗುರಿಯಾಗಿತ್ತು.




ಆಯೋಗದ ಈ ನಿರ್ಧಾರವು, ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ, ವಿಶೇಷವಾಗಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅತೀ ಹಿಂದುಳಿದ ಸಮುದಾಯಗಳ ಜನರು ಆಯೋಗದ ಕ್ರಮದಿಂದ ತೀವ್ರ ತೊಂದರೆಗೆ ಸಿಲುಕಿಸಿತು. ಸಾಮಾನ್ಯವಾಗಿ ಬಳಸಲಾಗುವ ದಾಖಲೆಗಳಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಮನರೇಗಾ ಜಾಬ್ ಕಾರ್ಡ್ ಅಥವಾ ಆಯುಷ್ಮಾನ್ ಆರೋಗ್ಯ ಕಾರ್ಡ್‌ಗಳನ್ನು ಪೌರತ್ವದ ಪುರಾವೆಯಾಗಿ ಪರಿಗಣಿಸಲಾಗುತ್ತಿಲ್ಲ ಮತ್ತು ಸ್ವೀಕರಿಸಲಾಗುತ್ತಿಲ್ಲ. ಬದಲಿಗೆ, ಜನನ ಪ್ರಮಾಣಪತ್ರ ಅಥವಾ ಶಾಲಾ ದಾಖಲೆಗಳಂತಹ ದಾಖಲೆಗಳನ್ನು ಕೇಳಲಾಗುತ್ತಿದೆ. ಆದರೆ, ಈ ದಾಖಲೆಗಳು ಗ್ರಾಮೀಣ ಬಡವರ ಬಳಿ ಸಾಮಾನ್ಯವಾಗಿ ಇರಲಿಲ್ಲ.

ಆದ್ದರಿಂದ, ಆಧಾರ್‌ಅನ್ನು ಗುರುತಿನ ಪುರಾವೆಯಾಗಿ ಪರಿಗಣಿಸಬೇಕೆಂದು ಆಯೋಗಕ್ಕೆ ನಿರ್ದೇಶಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಎಸ್‌ಐಆರ್ ಪ್ರಕ್ರಿಯೆಯಲ್ಲಿ ಆಧಾರ್‌ಅನ್ನು ಪರಿಗಣಿಸುವಂತೆ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತು.

ಆದಾಗ್ಯೂ, ಮಂಗಳವಾರ ಚುನಾವಣಾ ಆಯೋಗ ಪ್ರಕಟಿಸಿದ ಮತಪಟ್ಟಿಯಲ್ಲಿ 47 ಲಕ್ಷ ಮತದಾರರನ್ನು ಕೈಬಿಡಲಾಗಿದೆ. ಆದರೆ, ಪರಿಷ್ಕರಣೆ ವೇಳೆ ಎಷ್ಟು ವಿದೇಶಿ ಅಕ್ರಮ ವಲಸಿಗರು ಕಂಡುಬಂದಿದ್ದಾರೆ ಎಂಬುದನ್ನು ಆಯೋಗ ತಿಳಿಸಿಲ್ಲ.


ಆಗಸ್ಟ್‌ 1ರಂದು ಪ್ರಕಟವಾದ ಕರಡು ಪಟ್ಟಿಯಲ್ಲಿ ಹೊರಹಾಕಲಾಗಿದ್ದ 65 ಲಕ್ಷ ಮತದಾರರಲ್ಲಿ, 22 ಲಕ್ಷ ಮತದಾರರನ್ನು ಸತ್ತವರು ಮತ್ತು 36 ಲಕ್ಷ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ 7 ಲಕ್ಷ ಜನರನ್ನು ಬಹು ಸ್ಥಳಗಳಲ್ಲಿ ನೋಂದಣಿ ಹೊಂದಿರುವವರು ಎಂದು ಆಯೋಗ ಘೋಷಿಸಿತ್ತು. ಇದೀಗ, ಆಕ್ಷೇಪಣೆ ಮತ್ತು ಮರು ಪರಿಶೀಲನೆ ಬಳಿಕ, 18 ಲಕ್ಷ ಮಂದಿಯನ್ನು ಮರು ಸೇರ್ಪಡೆ ಮಾಡಲಾಗಿದೆ. ಇನ್ನೂ, 47 ಲಕ್ಷ ಮಂದಿ ಮತಪಟ್ಟಿಯಿಂದ ಹೊರಗುಳಿದಿದ್ದಾರೆ.


ಸೆಪ್ಟೆಂಬರ್‌ 1ರವರೆಗೆ ಮಾತ್ರವೇ ನೀಡಲಾಗಿದ್ದ ಆಕ್ಷೇಪಣೆ ಮತ್ತು ಮರುಪರಿಶೀಲನೆ ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು ಆಯೋಗ ವಿಸ್ತರಿಸಿದೆ. ಬಿಹಾರದಲ್ಲಿ ಚುನಾವಣೆ ಘೋಷಣೆಯಾಗಿ, ನಾಮಪತ್ರ ಸಲ್ಲಿಕೆಯ ದಿನಾಂಕಕ್ಕಿಂತ 10 ದಿನಗಳ ಮುಂಚಿನವರೆಗೂ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಆಯೋಗ ಹೇಳಿಕೊಂಡಿದೆ.

ಬಿಹಾರದಲ್ಲಿ ಆಯೋಗವು ಎಸ್‌ಐಆರ್ ಪ್ರಕ್ರಿಯೆ ಆರಂಭಿಸಿದ್ದು, ಮತಪಟ್ಟಿಯ ಪರಿಷ್ಕರಣೆ ನೆಪದಲ್ಲಿ ಪೌರತ್ವ ಪರಿಷ್ಕರಣೆ ನಡೆಸುವ ಹುನ್ನಾರವನ್ನು ಹೊಂದಿದೆ. ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಮೂಲಕ ಹಿಂಬಾಗಿಲಿನಿಂದ ‘ರಾಷ್ಟ್ರೀಯ ಪೌರತ್ವ ನೋಂದಣಿ’ಯನ್ನು (ಎನ್‌ಆರ್‌ಸಿ) ಜಾರಿಗೆ ತರುತ್ತಿದೆ. ಜನರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ತಮ್ಮ ಪೌರತ್ವವನ್ನು ಸಾಬೀತು ಮಾಡಬೇಕಾಗಿದೆ. ಮತಪಟ್ಟಿಯಿಂದ ಹೆಸರು ಕಳೆದುಕೊಂಡವರನ್ನು ಭಾರತದ ಪೌರರಲ್ಲವೆಂದು ಗುರುತಿಸುವ ಅಪಾಯವಿದೆ ಎಂದು ಆರೋಪಿಸಲಾಗಿತ್ತು. ಆಯೋಗದ ಧೋರಣೆಯೂ ಅದೇ ರೀತಿಯಲ್ಲಿತ್ತು.

ಆದ್ದರಿಂದಲೇ, ಈ ಪರಿಷ್ಕರಣೆಯು ಬಿಹಾರದಲ್ಲಿ ‘ವೋಟ್‌ಬಂದಿ’ (ಮತದಾನದ ಹಕ್ಕನ್ನು ಕಿತ್ತುಕೊಳ್ಳುವ ಕೃತ್ಯ) ಎಂದು ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟ ಟೀಕಿಸಿತು. ಜನರನ್ನು ಪೌರತ್ವ ಇಲ್ಲದವರೆಂದು ಗುರುತಿಸುವ ಕುತಂತ್ರವಾಗಿದೆ ಎಂದು ಆರೋಪಿಸಿತು.

ಚುನಾವಣಾ ಆಯೋಗದ ಈ ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ವಿಪಕ್ಷಗಳು ನಿರಂತರ ಹೋರಾಟಗಳನ್ನು ನಡೆಸಿವೆ. ಮಾತ್ರವಲ್ಲದೆ, ಬಿಜೆಪಿ ‘ವೋಟ್‌ ಚೋರಿ’ (ಮತ ಕಳವು) ನಡೆಸುತ್ತಿದ್ದು, ಬಿಜೆಪಿಗೆ ಚುನಾವಣಾ ಆಯೋಗ ನೆರವು ನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿವೆ.

Tags: AICCBJPChief Election CommissionerChief Election OfficecongressECGnanesh Kumar ECRahul GandhiRahul Gandhi Leader of OppositionRJDSIRsupreme courtTejaswi Yadav
Previous Post

AICC ಅಧ್ಯಕ್ಷರಿಗೆ ಅನಾರೋಗ್ಯ, MSR ಆಸ್ಪತ್ರೆಗೆ ದಾಖಲು

Next Post

ಫಿಲಿಪೈನ್ಸ್‌ ನಲ್ಲಿ ಭಾರೀ ಭೂಕಂಪ !

Related Posts

ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನ: ನಾರಾಯಣ ಗೌಡ ಪರ ಕರವೇ ಕಾನೂನು ಹೋರಾಟ
ಕರ್ನಾಟಕ

ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನ: ನಾರಾಯಣ ಗೌಡ ಪರ ಕರವೇ ಕಾನೂನು ಹೋರಾಟ

by ಪ್ರತಿಧ್ವನಿ
April 23, 2026
0

ಕನ್ನಡ–ಹಿಂದಿ ಭಾಷಾ ವಿವಾದದ ನಡುವೆಯೇ ಕನ್ನಡ ಹೋರಾಟಗಾರರ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಕೇಳಿಬರುತ್ತಿರುವುದು ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಿರುದ್ಧ ಸಾಮಾಜಿಕ...

Read moreDetails
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

April 22, 2026
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
Next Post
ಫಿಲಿಪೈನ್ಸ್‌ ನಲ್ಲಿ ಭಾರೀ ಭೂಕಂಪ !

ಫಿಲಿಪೈನ್ಸ್‌ ನಲ್ಲಿ ಭಾರೀ ಭೂಕಂಪ !

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada