ಹಿರಿಯ ರಾಜ್ಯ ಕಾರಣಿ, ರಾಜ್ಯ ಸಭಾದ ಸಂಸದ, ಮಾಜಿ ಕೇಂದ್ರ ಸಚಿವ ಹಾಗೂ ಎಐಸಿಸಿ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೂಡಲೇ ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎಐಸಿಸಿ ಅಧ್ಯಕ್ಷರಾದ ಮೇಲೆಂತೂ ಅವರ ಜವಾಬ್ಧಾರಿ ಹೆಚ್ಚಾಯಿತು. ಆದರೂ ಕೂಡ ಅವರು ಪಕ್ಷ ಸಂಘಟನೆ ಹಾಗೂ ಸಂಸದರ ಜವಾಬ್ಧಾರಿಯನ್ನು ಒಟ್ಟಿಗೆ ನಿರ್ವಹಿಸುತ್ತಿದ್ದರು. ಈ ಎಲ್ಲದರ ಜೊತೆಗೆ ಬಿಹಾರದ ಚುನವಾಣೆ ಹಿನ್ನಲೆಯಲ್ಲಿ ಪ್ರವಾಸ ಮತ್ತು ಪ್ರಚಾರದಲ್ಲಿ full active ಆಗಿ ತೊಡಗಿಸಿಕೊಂಡರು. ಈ ಕಾರಣಗಳಿಂದಾಗಿ ಅನಾರೋಗ್ಯ ಕಾಣಿಸಿಕೊಂಡಿರುವ ಸಾದ್ಯತೆ ಹೆಚ್ಚಿದೆ.

ಸದ್ಯ ಚಿಕಿತ್ಯೆ ಪಡೆಯುತ್ತಿರುವ ಹಿರಿಯ ರಾಜಕಾರಣಿ ಅವರು ಶೀಘ್ರವಾಗಿ ಗುಣ ಮುಖರಾಗಲೆಂದು ಅವರ ಅಭಿಮಾನಿಗಳು, ಕಾರ್ಯಕರ್ತರು ಅವರು ಶೀಘ್ರವಾಗಿ ಗುಣ ಮುಖರಾಗಲೆಂದು ದೇವರಲ್ಲಿ ಪ್ರಾರ್ಥನೆಯನ್ನು ಸಲ್ಲಿಸುತ್ತಿದ್ದಾರೆ.

ಮಲ್ಲಿಕಾರ್ಜುನ್ ಖರ್ಗೆ ರವರು ರಾಜ್ಯ ರಾಜಕೀಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಒಂದು ದಿನವು ಕೂಡ ಬಿಡುವು ಮಾಡಿಕೊಳ್ಳದೆ ರಾಜಕೀಯದಲ್ಲಿ
ತಮ್ಮನ್ನು ತಾವು ತೊಡಗಿಸಿಕೊಂಡು, ಸ್ವ ಕ್ಷೇತ್ರಕ್ಕೆ ಪ್ರವಾಸ ಸೇರಿದಂತೆ, ನಿರಂತರ ಪ್ರವಾಸದಲ್ಲಿದ್ದ ಖರ್ಗೆ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು,
ಈ ಹಿನ್ನಲೆಯಲ್ಲಿಅವರಿಗೆ ಚಿಕಿತ್ಯೆ ಒದಗಿಸುವ ಸಲುವಾಗಿ ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಯೆ ನೀಡಲಾಗುತ್ತಿದೆ.

ಅವರ ಆನರೋಗ್ಯದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿ, ಮಲ್ಲಿಖಾರ್ಜುನ ಖರ್ಗೆ ಅವರು ನಿರಂತರ ಪ್ರವಾಸದಲ್ಲಿದ್ದ ಕಾರಣ ಸುಸ್ತು ಕಾಣಿಸಿದೆ, ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೆ, ಚಿಕಿತ್ಯೆ ಪಡೆದು ನಂತರ ಅವರು ಹುಷಾರಾಗಿದ್ದು, ನಾಳೆ ಅವರು ಆಸ್ಪತ್ರೆಯಿಂದ Discharge ಆಗಕಲಿದ್ದಾರೆಂದು
ಸಿದ್ದರಾಮಯ್ಯರವರು ಹೇಳಿದರು.











