
ಇಂದು ನಗರದಲ್ಲಿನ ಚಂದ್ರ ಲೇಔಟ್ನಲ್ಲಿ Sunya IAS ನೂತನ ಸೆಂಟರ್ ಉದ್ಘಾಟನೆಗೊಂಡಿತು. ಚಂದ್ರ ಬಡಾವಣೆಯಲ್ಲಿ Civil Services Training Institutions ಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ಬೇರೆ ಬೇರೆ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಪದವಿಧರರು ಹಾಗೂ ಉನ್ನತ ಶಿಕ್ಷಣವನ್ನು ಪಡೆದವರು ತಾವು ಭವಿಷ್ಯದಲ್ಲಿ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಆಸೆಯನ್ನು ಹೊತ್ತು ಅಧ್ಯಯನವನ್ನು ನಡೆಸಲು ಸಲುವಾಗಿ ಚಂದ್ರಲೇಔಟ್ ನಲ್ಲಿರುವ
ಸೆಟಂರ್ಗಳನ್ನು ಅರಿಸಿ ಬರುತ್ತಾರೆ.

ಇಂತಹ ಸೆಂಟರ್ಗಳು ಯುವ ಸಮೂಹಕ್ಕೆ ಸೂಕ್ತವಾದ ತರಬೇತಿಗಳನ್ನು ನೀಡುತ್ತಿರುವುದು ಗಮಾರ್ನಹ ಸಂಗತಿಯಾಗಿದೆ. ಇನ್ನು ಹೊಸದಾಗಿ ಪ್ರಾರಂಭಗೊಂಡ ಪ್ರಖ್ಯಾತ Sunya
IAS ಕೇಂದ್ರದ ಉದ್ಘಾಟನೆಗೆ ಸಭಾಧ್ಯಕ್ಷರಾದ ಯೂ.ಟಿ. ಖಾದರ್ ಅವರು ಆಗಮಿಸಿ ಕೇಚರಿಯ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿ ಕೇಂದ್ರವನ್ನು ರೆಡ್ ಟೇಪ್ ಕಟ್ ಮಾಡುವ ಮೂಲಕ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಬಳಿಕ ಮಾತನಾಡಿದ ಅವರು ಭವಿಷ್ಯದ ಅಧಿಕಾರಿಗಳಾಗಿ ಕನಸ್ಸು ಕಾಣುತ್ತಿರುವ ಪ್ರತಿಭಾನ್ವಿತ ಹಾಗೂ ಉತ್ಸಾಹಿ ಯುವಕ ಯುವತಿಯರ ಜೊತೆ ಸಂವಾದ ನಡೆಸಿದ್ದು ಖುಷಿ ತಂದಿದೆ ಎಂದು ಅಭಿಪ್ರಾಯ ಹಂಚಿಕೊಂಡರು.