
ಪರಪ್ಪನ ಆಗ್ರಹಾರದ ಕೇಂದ್ರ ಕಾರಗ್ರಹದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಗೆ ಸೆಲ್ಲಿನಲ್ಲಿಹಾಸಿಗೆ, ದಿಂಬುಗಳನ್ನು ಒದಗಿಸಬೇಕೆಂದು 64ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

ನಟ ದರ್ಶನ್ ಪರ ವಕೀಲರು ವಾದ ಮಂಡಿಸಿ ಕನಿಷ್ಟ ಸೌಕರ್ಯಗಳನ್ನು ಒದಗಿಸಲು ಕೋರ್ಟ್ ಆದೇಶವಿದ್ದರೂ ಕೂಡ ಪರಪ್ಪನ ಅಗ್ರಹಾರದ ಜೈಲ್ ಅಧಿಕಾರಿಗಳು ಆದೇಶವನ್ನು ಪಾಲಿಸುವುದರ ಬದಲಿಗೆ, ಕೋರ್ಟ್ ತಿರ್ಮಾನವನ್ನೇ ಉಲ್ಲಂಘಿಸುತ್ತಿರವ ವಿಚಾರವಾಗಿ, ವಕೀಲರು ಜೈಲ್ ಅಧಿಕಾರಿಗಳ ವಿರುದ್ಧವೇ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸಲ್ಲಿಸಿದ್ದರು.
ವಿಚಾರಣೆ ಸಂದರ್ಭದಲ್ಲಿ ಜೈಲ್ Superintendent of Police (SP) ಸುರೇಶ್ ಕೂಡ ಹಾಜರಿದ್ದರು. ಈ ದರ್ಶನ್ ಹಾಗೂ ಟೀಂ ಇಂದ ಹತ್ಯೆಗೊಳಗಾದ ರೇಣುಕ ಸ್ವಾಮಿ ಪರ ವಕೀಲರಾದ ಪ್ರಸನ್ನಕುಮಾರ್ ಹಾಗೂ ದರ್ಶನ್ ವಕೀಲ ಸುನೀಲ್ ಕುಮಾರ್ ಅವರ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯವು ಅಕ್ಟೋಬರ್ 9 ಕ್ಕೆ ಆದೇಶವನ್ನು ಕಾಯ್ದಿರಿಸಿದೆ.

ಈ ಮೊದಲು ದರ್ಶನ್ ಪರ ವಕೀಲರು, ಜೈಲಿನಲ್ಲಿ ಕನಿಷ್ಠ ಸೌಲಭ್ಯಗಳನ್ನಾದರೂ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು. ಅದರಂತೆ ನ್ಯಾಯಾಲಯವೂ ಕೂಡ ಕನಿಷ್ಠ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಿತ್ತು. ಆದರೆ ಜೈಲ್ ಅಧಿಕಾರಿಗಳು ಕೋರ್ಟ್ ಆದೇಶವನ್ನು ಪಾಲಿಸದೇ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ವಕೀಲರು ನ್ಯಾಯಾಧಿಶರ ಎದುರು ಅಳಲನ್ನು ತೊಡಿಕೊಂಡರು.