
ವಿಪಕ್ಷ ನಾಯಕರಾದ ರಾಹುಲ್ ಗಾಂಧಿ ಅವರಿಗೆ ಕೇರಳದ ಬಿಜೆಪಿ ವಕ್ತಾರ ಪಿಂಟು ಮಹಾದೇವನ್ ಬೆದರಿಕೆ ಒಡ್ಡಿದ್ದು, ಹತ್ಯೆ ಮಾಡುವುದಾಗಿ ಹೇಳಿದ್ದಾನೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕ ಮತ್ತು ಸಂಸದ ಕೆ.ಸಿ. ವೇಣು ಗೋಪಾಲ್ ರವರು ಬಿಜೆಪಿ ನಾಯಕ ಮತ್ತು ಗೃಹ ಸಚಿವಾರದ ಅಮಿತ್ ಶಾ ರವರಿಗೆ ಪಿಂಟು ನೀಡುರುವ ಹೇಳಿಕೆಯನ್ನು ಖಂಡಿಸಿ, ಆತನ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.


ರಾಹುಲ್ ಗಾಂಧಿ ವಿಪಕ್ಷಗಳ ನಾಯಕ, ಪ್ರಜಾಪ್ರಭುತ್ವದಡಿಯಲ್ಲಿ ಮಹತ್ತರ ಜವಾಬ್ಧಾರಿಯನ್ನು ಹೊಂದಿದ್ದು, ವಿಪಕ್ಷಗಳ ನಾಯಕನನ್ನು Shadow Prime Minister ಎಂದು ಕರೆಯಲಾಗುತ್ತದೆ. ಪತ್ರಬರೆದು 2 ದಿನಗಳು ಕಳೆದಿದ್ದು, ಈವರೆಗೂ ಬಿಜೆಪಿ ವಕ್ತಾರನ ವಿರುದ್ಧ ಬಿಜೆಪಿ ಯಾಗಲೀ/ ಕೇಂದ್ರ ಸರ್ಕಾರವಾಗಲೀ ಯಾವುದೇ ಕ್ರಮವನ್ನು ಜರುಗಿಸಿಲ್ಲ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣಾರಾಯಿ ವಿಜಯನ್ ಸರ್ಕಾರವು ಕೂಡ ಈ ಘಟನೆಗೆ ಕುರಿತು ಯಾವುದೇ ಹೇಳಿಕೆಯನ್ನು ನೀಡದೆ. ಮೌನಕ್ಕೆ ಶರಣಾಗಿರುವುದು ದೊಡ್ಡ ದುರಂತ. ಕಾರಣ ರಾಹುಲ್ ರವರು 2019ರಲ್ಲಿ ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಕೇರಳ ರಾಜ್ಯದ ಸಂಸದರಾಗಿ ಆಯ್ಕೆಯಾಗುತ್ತಾರೆ. ಇನ್ನು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಎರಡು ಸಂಸದೀಯ ಮತ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಕ್ಷೇತ್ರದಲ್ಲೂ ಅತೀ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಅಭೂತ ಪೂರ್ವ ಜಯವನ್ನು ಸಾಧಿಸಿದ್ದರು. ಕೇರಳದ ವಯನಾಡು ಹಾಗೂ ಉತ್ತರಪ್ರದೇಶದ ರಾಯ್ ಬರೇಲಿ ಕ್ಷೇತ್ರಗಳಿಂದ ಸ್ಪರ್ಧಿಸಿ ಚುನಾವಣೆಯಲ್ಲಿ ಜಯವನ್ನು ದಾಖಲಿಸಿದರು.

2019ರಿಂದ 2024ರವರೆಗೂ ಈವರೆಗೂ ಕೇರಳ ಸೇರಿದಂತೆ ಯಾವ ರಾಜ್ಯದ ಸಂಸದರು ರಾಹುಲ್ ಗಾಂಧಿ ರವರಷ್ಟು ಸಕ್ರಿಯವಾಗಿ, ಅಭಿವೃದ್ದಿ ಕಡೆ ಗಮನ ಹಿರಿಸದಿರವುದು ಗೊತ್ತಾಗುತ್ತದೆ.
ಇದರ ಜೊತೆಗೆ ಕೇರಳ ರಾಜ್ಯಕ್ಕೆ ಹೆಚ್ಚಿನ ಮಹತ್ವ ನೀಡಿದಲ್ಲದೆ, ರಾಜ್ಯದಲ್ಲಿ ಹೆಚ್ಚು ಮಳೆ ಸುರಿಯುವುದರ ಜೊತೆಗೆ ಪ್ರವಾಹದಂತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಭೂ ಕುಸಿತದಿಂದ ರಸ್ತೆಯ ಹೆದ್ದಾರಿಗಳು ಬಂದಾಗುವುದು, ಹೀಗೆ ಅನೇಕ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಜನರು ನಿರಾಶ್ರಿತರಾಗಿ, ಸಾರ್ವಜನಿಕರು ತಮ್ಮ ದೈನಂದಿನ ಜೀವನವನ್ನು ನಡೆಸುವುದು ಕಷ್ಟಪಡುವಂತಹ ಸಂದರ್ಭದಲ್ಲೂ ಸಹ ರಾಹುಲ್ ಗಾಂಧಿ ಸಂಸದನಾಗಿ ಜವಾಬ್ಧಾರಿಯನ್ನು ಹೊತ್ತು ಜನತೆಯ ಸಮಸ್ಯೆಗೆ ಸ್ಪಂದಿಸಿದಲ್ಲದೆ, ಹಾಗೂ ಕೇಂದ್ರವು ದಕ್ಷಣ ಭಾರತದ ರಾಜ್ಯಗಳನ್ನು ನಿರ್ಲಕ್ಷಿಸುತ್ತಿರುವ ಸಂದರ್ಭದಲ್ಲೂ ಸಹ ರಾಹುಲ್ ಗಾಂಧಿ ಸಂಸದನಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೂ ಕೇರಳಕ್ಕೆ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರದ ವಿರುದ್ಧ ಸಂಸತ್ ಒಳಗೂ ಹಾಗೂ ಹೊರಗೂ ಸಮರ ಸಾರಿ ಅನುದಾನವನ್ನು ಕೊಡಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸಿದ್ದಾರೆ.


ಇಷ್ಟೇಲ್ಲ ಸಾಧಿಸಿರುವ ವಿಪಕ್ಷ ನಾಯಕನಿಗೆ ಕೇರಳ ಸರ್ಕಾರ ಇವರ ಹತ್ಯೆಗೆ ಬೆದರಿಕೆ ಹಾಕಿರುವ ಬಿಜೆಪಿ ವಕ್ತಾರನ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದು ಎಷ್ಟರ ಮಟ್ಟಿಗೆ ಸರಿ?
ಇನ್ನು ರಾಹುಲ್ ಗಾಂಧಿ ಅವರು ಎರಡು ಸಂಸದೀಯ ಕ್ಷೇತ್ರದಲ್ಲಿ ಒಂದನ್ನು ಅವರು ತ್ಯಜಿಸಬೇಕಿತ್ತು.ಇದರ ಅನ್ವಯ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೇರಳದ ವಾಯಿನಾಡನ್ನು ಬಿಟ್ಟುಕೊಡುತ್ತಾರೆ. ಇದಾದ ಬಳಿಕ ಈ ಕ್ಷೇತ್ರಕ್ಕೆ ಮರು ಚುನಾವಣೆ ನಡೆಯುತ್ತದೆ. ಈ ಭಾಗದಿಂದ ರಾಹುಲ್ ಗಾಂಧಿ ಅವರ ಸಹೋದರಿಯಾದ ಪ್ರಿಯಾಂಕ ಗಾಂಧಿ ರವರು ಸ್ಪರ್ದಿಸಿ ಅವರು ಕೂಡ ಸಂಸದರಾಗಿ ಆಯ್ಕೆಯಾಗುತ್ತಾರೆ. ಹೀಗಿರುವಾಗ ಕೇರಳ ರಾಜ್ಯದ ಮುಖ್ಯಮಂತ್ರಿ ಈವರೆಗೂ ಬಿಜೆಪಿ ಪಕ್ಷದ ವಕ್ತಾರನ ವಿರುದ್ಧ ಯಾವುದೇ ಕ್ರಮ ಜರುಗಿಸದಿರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.