ಹೆಸರಾಂತ ರಂಗಭೂಮಿ ಕಲಾವಿದ ಹಲವಾರು ನಾಟಕಗಳನ್ನು ನಿರ್ದೇಶಿಸಿ-ನಟಿಸಿ ಕಲಾ ಕ್ಷೇತ್ರದಲ್ಲಿ ತಮ್ಮದೆ ಛಾಪನ್ನು ಮೂಡಿಸಿದ ಹಾಸ್ಯ ಕಲಾವಿದ ಯಶವಂತ ಸರದೇಶಪಾಂಡೆಯವರು ತೀವ್ರ ಹೃದಯಘಾತಕ್ಕೆ ತುತ್ತಾಗಿ ಅಸುನಿಗಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳಿ ಮೂಲದ ಕಲಾವಿದರಾದ ಇವರು ಅನೇಕ ಚಲನಚಿತ್ರಗಳಲ್ಲ ನಟಿಸಿದ್ದರು.
ರಂಗಭೂಮಿ ಕ್ಷೇತ್ರಕ್ಕೆ ಇವರು ಅಪಾರವಾದ ಸೇವೆಯನ್ನು ಸಲ್ಲಿಸಿ, ಹಾಸ್ಯ ರಸಕ್ಕೆ ಹೆಸರುವಾಸಿಯಾಗಿದ್ದರು. 60 ವರ್ಷದ ಯಶವಂತ ಅವರಿಗೆ ಎದೆ ನೋವು ಕಾಣಿಸಿದೆ, ಕೂಡಲೇ ಅವರ ಕುಟುಂಬದ ಸದಸ್ಯರುಗಳು ಅವರನ್ನು Fortis ಆಸ್ಪತ್ರೆಗೆ ದಾಖಲಿಸಿದ್ದಾರೂ, ಚಿಕಿತ್ಸೆ ಫಲಿಸದೆ ಕೊನೆಯುಸಿರನ್ನು ಎಳೆದಿದ್ದಾರೆಂದು ಅವರು ಕುಟುಂಬದವರು ದೃಢ ಪಡಿಸಿದರು.
ಯಶವಂತ ದೇಶ್ ಪಾಂಡೆ ಅವರು ನಿರ್ದೇಶಿಸಿದ “ಆಲ್ ದಿ ಬೆಸ್” ನಾಟಕವು ಭರ್ಜರಿ ಯಶಸ್ಸನ್ನು ಕಂಡಿತಲ್ಲದೆ, ವಿಮರ್ಶಕರಿಂದಲೂ ಹಾಗೂ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಯಶವಂತ ಸರದೇಶಪಾಂಡೆ ಅವರು ಮೂಲತ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಹೆಗ್ಗೋಡಿನ ನೀನಾಸಂ ನಾಟಕ ಸಂಸ್ಥೆಯಲ್ಲಿ ಡಿಪ್ಲೋಮಾ ಪದವಿಯನ್ನು ಪಡೆದುಕೊಳ್ಳುತ್ತಾರೆ. ಹಾಗೂ ರಂಗಬೂಮಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮತ್ತು
ಅವರಿಗಿದ್ದ ರಂಗಭೂಮಿಲ್ಲಿದ್ದ ಅಪಾರವಾದ ಆಸಕ್ತಿಯಿಂದಲೇ ಅವರು ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಭಾಗದಲ್ಲಿ ತರಬೇತಿ ಪಡೆಯುತ್ತಾರೆ.
ನಾಟಕಗಳ ಜೊತೆಗೆ ಇವರು ಕಿರುತರೆ ಮತ್ತು ಬೆಳ್ಳಿತರೆಯಲ್ಲೂ ಸಕ್ರಿಯರಾಗಿದ್ದರೂ. ಇವರ ಸಾವು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕಲಾ ಕ್ಷೇತ್ರಕ್ಕೆ ದೊಡ್ಡ ಶಾಕ್ ನೀಡಿದೆ.
ಆರೋಗ್ಯವಾಗಿದ್ದ ವ್ಯಕ್ತಿ ಸಡನ್ನಾಗಿ ಹೃದಯಘಾತಕ್ಕೆ ಒಳಗಾಗುತ್ತಾರೆ ಹಾಗೂ ಸಾವನ್ನಪ್ಪುತ್ತಾರೆಂದರೆ
ಇವರ ಸ್ನೇಹಿತರು ನಂಬಲಾಗದ ಸ್ಥಿತಿಯಲ್ಲಿದ್ದಾರೆ.
ಅಗಲಿದ ನಟನಿಗೆ ಕಂಬನಿ ಮಿಡಿದ ಸಚಿವ ಶಿವರಾಜ್ ತಂಗಡಗಿ !
ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿರುವ ಶಿವರಾಜ್ ತಂಗಡಗಿಯವರು ಅಗಲಿದ ಕಲಾವಿದನಿಗೆ ಕಂಬನಿ ಮಿಡಿದಿದ್ದಾರೆ.

ರಂಗಭೂಮಿ ಜೊತೆ ಸಿನಿಮಾ ಮತ್ತು ಟಿವಿ ಧಾರವಾಹಿಗಳಲ್ಲಿ ನಟನೆಯಿಂದ ಅಪಾರ ಹೆಸರು ಮಾಡಿರುವ ಯಶವಂತ ಸರದೇಶಪಾಂಡೆ ಸಮಕಾಲೀನ ಹಾಸ್ಯ ಕಲಾವಿದರ ಪಾಲಿನಲ್ಲಿ ತಮ್ಮ
ವಿಶಿಷ್ಟ ಭಾಷೆ, ಆಂಗಿಕ ಅಭಿನಯದಿಂದ ಅಪಾರ ಜನಪ್ರಿಯತೆ ಪಡೆದಿದ್ದರು.
ರಂಗ ವರ್ತುಲ ತಂಡವನ್ನು ಕಟ್ಟಿ, ಆ ಮೂಲಕ ಅಸಂಖ್ಯಾತ ನಾಟಕಗಳನ್ನು ಪ್ರದರ್ಶಿಸಿದ ಯಶವಂತ ಸರದೇಶಪಾಂಡೆ ಅವರ ಆಲ್ ದಿ ಬೆಸ್ಟ್ ನಾಟಕ ಪ್ರದರ್ಶನಗಳನ್ನು ಕಂಡಿದೆ.
ಕಲಮ ಹಾಸನ್ ಅಭಿನಯದ ರಾಮ ಶಾಮ ಭಾಮ ಜನಪ್ರಿಯ ಚಲನಚಿತ್ರದ ಸಂಭಾಷಕಾರರಾಗಿ
ಜೊತೆಗೆ ನಟಿಸಿ, ಅಪಾರ ಜನಪ್ರೀಯತೆ ಗಳಿಸಿದ್ದರು.

ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಯಶವಂತ ಸರದೇಶಪಾಂಡೆ ಅವರ ಸಾಂಸ್ಕೃತಿಕ ಮತ್ತು ಕೊಡುಗೆಗಾಗಿ ಅವರಿಗೆ ನನ್ನ ಗೌರವ ಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಚಿವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.