• Home
  • About Us
  • ಕರ್ನಾಟಕ
Wednesday, October 1, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

ಪ್ರತಿಧ್ವನಿ by ಪ್ರತಿಧ್ವನಿ
September 29, 2025
in Top Story, ಇದೀಗ, ರಾಜಕೀಯ, ವಿಶೇಷ, ಸಿನಿಮಾ
0
ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ
Share on WhatsAppShare on FacebookShare on Telegram
ADVERTISEMENT
Karur stampede: ಕರೂರ್‌ನಲ್ಲಿ ನಟ ಮತ್ತು ರಾಜಕಾರಣಿ ವಿಜಯ್ ಅವರ ರ‍್ಯಾಲಿಯಲ್ಲಿ ಕಾಲ್ತುಳಿತ..! #vijaythalapathy

ಕಾಲಿವುಡ್‌ ಚಿತ್ರರಂಗದ ಸೂಪರ್‌ ಸ್ಟಾರ್‌ ನಟ ವಿಜಯ್‌ ರಾಜಕೀಯವನ್ನು ಪ್ರವೇಶಿಸುತ್ತೇನೆಂದು ಹೇಳಿದ್ದರು. ಹೇಳಿದಂತೆ ಅವರು ಯಾವುದೇ ಪಕ್ಷವನ್ನು ಸೇರಲ್ಲ, ಬದಲಿಗೆ ಸ್ವಂತ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಬರುತ್ತೇನೆ ಹಾಗೂ ಚುನಾವಣೆಗಳಲ್ಲಿ ಸ್ವತಂತ್ರ್ಯವಾಗಿ ಸ್ಪರ್ಧಿಸುತ್ತೇನೆಂದು ಹೇಳಿದ್ದರು. ಅದರಂತೆ ಅವರು “ ತಮಿಳಿಗ ವೆಟ್ರಿ ಕಳಗಂ” ಪಕ್ಷವನ್ನು ಸ್ಥಾಪಿಸಿದರು. ತಮಿಳು ನಾಡಿನಲ್ಲಿ 2026ರ ನಡೆಯಲಿರುವ ವಿಧಾನ ಸಭಾ ಚುನಾವಣೆಗೆ ದಳಪತಿ ವಿಜಯ್‌ ಈಗಿನಿಂದಲೇ ತಯಾರಿ ನಡೆಸುತ್ತಿದ್ದಾರೆ.

ಚುನಾವಣೆಯ ಪ್ರಚಾರಕ್ಕೆ ಸಕಲ ಸಿದ್ದತೆಗಳೊಂದಿಗೆ ಅವರು ಪ್ರಚಾರ ನಡೆಸಲು ಮುಂದಾದರು.ಅವರು ಅಂದುಕೊಂಡಂತೆ ತಮಿಳುನಾಡಿನ ಕರೂರ್‌ನಲ್ಲಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಚಾರ ಮಾಡಿದರು. ಖುದ್ದು ನಾನೇ ಪ್ರಚಾರದಲ್ಲಿ ಭಾಗವಹಿಸುತ್ತೇನೆಂದು ತಿಳಿಸಿದ್ದರು ವಿಜಯ್.

ಇವರನ್ನು ನೋಡಲು 2 ಲಕ್ಷಕ್ಕಿಂತ ಹೆಚ್ಚಿನ ಅಭಿಮಾನಿಗಳು ಸ್ಟಾರ್‌ ಕಮ್‌ ರಾಜಕಾರಣಿ ನೋಡಲು ಆಗಮಿಸಿದ್ದರು.

Karur stampede: ಕರೂರ್‌ನಲ್ಲಿ ಕಾಲ್ತುಳಿತದಲ್ಲಿ ದುರಂತ ನಟ ವಿಜಯ್‌ಗೆ ಚಪ್ಪಲಿ ಎಸೆತ..! #vijaythalapathy

ಇದು ಯೋಜಿತ ಕಾರ್ಯಕ್ರಮವೇ ಆಗಿತ್ತಾದರೂ ಕೂಡ ಭಾರೀ ಅನುಹಾತವೊಂದು ಸಂಭವಿಸಿದೆ.ತಮ್ಮ ನೆಚ್ಚಿನ ನಟರನ್ನು ನೋಡಲು ಹಾಗೂ ಚುನಾವಣೆ ಪ್ರಚಾರದ ನೆಪದಲ್ಲಾದರು ಹತ್ತರಿದಂದ ನೋಡಬಹುದೆಂಬ ಕಾರಣಕ್ಕೆ ಹೆಚ್ಚಿನ ಸಂಖ್ಯೆಲ್ಲಿ ಜನರು ಸೇರಿದ್ದರು. ಈ ಹಿನ್ನಲೆಯಲ್ಲಿ ನೂಕುನುಗ್ಗಲು ಉಂಟಾಗಿ ಕನಿಷ್ಠ 39 ಮಂದಿ ಕಾಲ್ತುಳಿತದಿಂದ ಮೃತ ಪಟ್ಟಿದ್ದಾರೆಂದು, ಎಡಿಜಿಪಿ ಡೇವಿಡ್‌ ಸನ್‌ ಆರ್ಶಿವಾದ್‌ ರವರು ಮಾಹಿತಿ ನೀಡಿದರು. ಇನ್ನೂ ಇದೇ ವೇಳೆ 48 ಜನರಿಗೆ ಗಾಯಳಾಗಿದ್ದು ಓರ್ವರ ಸ್ಥಿತಿ ತುಂಬಾ ಗಂಭಿರವಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದರು.

10,000 ಜನರು ವಿಜಯ್‌ ಹಮ್ಮಿಕೊಂಡಿದ್ದ ಪ್ರಚಾರದಲ್ಲಿ ಭಾಗಿಯಾಗಲೂ ನೊಂದಾಯಿಸಿಕೊಂಡಿದ್ದರು. ಆದರೆ ಅಲ್ಲಿ ಸೇರಿದ್ದು 2 ಲಕ್ಷಕ್ಕೂ ಹೆಚ್ಚಿನ ಜನರು ಈ ಒಂದು ಪೂರ್ವಯೋಜಿತ ಕಾರ್ಯಕ್ರಮಕ್ಕೆ ಭಾಗವಹಿಸಿದರು. ಭದ್ರತೆ ದೃಷ್ಠಿಯಿಂದ ಸ್ಥಳೀಯ 116 ಪೊಲೀಸರು ಸೇರಿದಂತೆ ಹೆಚ್ಚುವರಿಯಾಗಿ 500 ಪೊಲೀಸರನ್ನು ನಿಯೋಜಿಸಲಾಗಿತ್ತಾದರೂ ಕೂಡ ಈ ಒಂದು ದುರಂತ ಸಂಭವಿಸಿದೆ.

Retired IAS Officer Jamadar Special Interview: ಲಿಂಗಾಯಿತ ಪ್ರತ್ಯೇಕ ಧರ್ಮವೇ ಅಥವಾ ಅಲ್ಲವೇ #lingayat

ದುರಂತದ ಬಗ್ಗೆ ತಿಳಿಯುತ್ತಿದ್ದೆಂತೆ ನಟ ಕಮ್‌ ರಾಜಕಾರಣಿ ತಮ್ಮ ಪ್ರಚಾರದ ನುಡವೆ ಭಾಷಣವನ್ನು ಆಗಷ್ಟೇ ಪ್ರಾರಂಭಿಸಿದ್ದ ವಿಜಯ್‌, ಕೂಡಲೇ ಭಾಷಣವನ್ನು ಮೊಟುಕುಗೊಳಿಸಿ, ಚನ್ನೈಗೆ ಹಿಂತಿರುಗಿದ್ದಾರೆ.

ಈ ದುರ್ಘಟನೆ ಬಳಿಕ ವಿಜಯ್‌ ದುರಂತದಲ್ಲಿ ಸಾವಿಗೀಡಾದ ಮತ್ತು ಗಾಯಗೊಂಡಿವರಿಗೆ ಸಾಂತ್ವನ ತಿಳಿಸಿದ್ದು, ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ತಲ 20 ಲಕ್ಷ ರೂ, ಹಾಗೂ ಗಾಯಗೊಂಡವರಿಗೆ ತಲ 2 ಲಕ್ಷ ರೂ ನೀಡುವುದಾಗಿ ತಿಳಿಸಿದ್ದಾರೆ.

ಇನ್ನೂ ಕಾಲ್ತುಳಿತ ಸಂಭವಿಸಿ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಮಿಳುನಾಡಿನಲ್ಲಿ ಸರ್ಕಾರವನ್ನು ಆಡಳಿತ ನಡೆಸುತ್ತಿರುವ ಡಿಎಂಕೆ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಂತಾಪ ಸೂಚಿಸಿ, ಪರಿಹಾರವನ್ನು ಘೋಷಿಸಿದ್ದಾರೆ. ಮೃತರ ಕುಟುಂಬಕ್ಕೆ ತಲ 10 ಲಕ್ಷ ರೂ ಪರಿಹಾರ ಮೊತ್ತವನ್ನು ನೀಡಲಾಗುವುದೆಂದು ಹೇಳಿದ್ದಾರೆ.
ಕಾಲ್ತುಳಿತ ಬಗ್ಗೆ ಅನೇಕ ರಾಜಕಾರಣಿಗಳು ಸಂತಾಪದ ಸೂಚಿಸಿದ್ದೂ ಅದರಲ್ಲೂ ಕಾಂಗ್ರೆಸ್‌ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್‌ ಗಾಂಧಿ ಘಟನೆ ತಿಳಿಯುತ್ತಿದ್ದೆಂತೆ ʼಎಕ್ಷ್‌ʼ ನಲ್ಲಿ ಸಂತಾಪ ಸೂಚಿಸಿದ್ದಾರೆ.

ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ನೇತೃತ್ವ ಭಾರತ್‌ ಐಕ್ಯತಾ ಯಾತ್ರೆ ಮಾದರಿ !

ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಪಕ್ಷದ ನೇತೃತ್ವದಲ್ಲಿ ಮೂರ ವರ್ಷಗಳ ಹಿಂದೆ. ಸೆಪ್ಟಂಬರ್‌ 7ನೇ ತಾರಿಕಿನೆಂದು ತಮಿಳು ನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಪಾದಯಾತ್ರೆ ಜಮ್ಮು-ಕಾಶ್ಮೀರದವರೆಗೂ ತಲುಪಿ ಅಭೂತ ಪೂರ್ವ ಯಶಸ್ಸನ್ನು ಕಂಡಿತ್ತು.

ಸುಮಾರು 14 ರಾಜ್ಯಗಳಲ್ಲಿ ಪಾದಯಾತ್ರೆ ನಡೆಯಿತು. ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ನಾಯಕರನ್ನು ನೋಡಲು. ಭೇಟಿಯಾಗಲೂ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರುತ್ತಿದ್ದರು, ರಸ್ತೆ ಉದ್ದಕ್ಕೂ ಜನ ಸಾಗರದ ನಡುವೆ ರಾಹುಲ್‌ ಗಾಂಧಿ ಹಾಗೂ ಕೈ ನಾಯಕರು, ಯೋಜಿತ ತಂಡ, ಮತ್ತು ನೊಂದಾಯಿತ ಸದಸ್ಯರುಗಳು 136 ದಿನಗಳ ಕಾಲ ಹೆಜ್ಜೆ ಹಾಕುತ್ತ, ದೇಶವನ್ನು ಸಂಚಾರ ಮಾಡುತ್ತಲ್ಲೇ ಜನರನ್ನು ಭೇಟಿಯಾಗುತ್ತ, ಅವರನ್ನು ಮಾತನಾಡಿಸುತ್ತ. ಪೊಲೀಸ್‌ ಭದ್ರತೆ ನಡುವೆ ಪ್ರಜೆಗಳ ಕಷ್ಟ. ನೋವುಗಳನ್ನು ಅರ್ಥ ಮಾಡಿಕೊಳ್ಳುಲು ಕೈ ನಾಯಕರಿಗೆ ಸಾಧ್ಯವಾಗಿದ್ದಲ್ಲದೆ ಯಶಸ್ವಿಯಾಗಿ ಪಾದಯಾತ್ರೆಯನ್ನು ಪೂರೈಸಿದರು.

ಇಂತಹ ಒಂದು ಐತಿಹಾಸಿಕ ಹೋರಾಟವನ್ನು ನಡೆಸಿದ ರಾಹುಲ್‌ ಗಾಂಧಿ ಹಾಗೂ ಕಾಂಗ್ರೆಸ್‌ ಯಾವ ಸುದ್ದಿ ಮಾಧ್ಯಮಗಳು ಇದನ್ನು ಕವರ್‌ ಮಾಡಲಿಲ್ಲ, ಪ್ರಚಾರ ಮಾಡಲಿಲ್ಲವಾದರು, ಅಷ್ಟೋಂದು ಸಂಖ್ಯೆಯಲ್ಲಿ ಜನರು ಸೇರಿತ್ತಿದ್ದಾರೂ ಹೇಗೆ?, ಮತ್ತೆ ಎಲ್ಲೂ ಕೂಡ ಒಂದೇ ಒಂದು ಅಹಿತಕರ ಘಟನೆಗಳಾದ ಕಾಲ್ತುಳಿತ, ಕಲ್ಲೂ ತೂರಾಟ, ರಸ್ತೆ ತಡೆ, ಕನಿಷ್ಟ ಪಕ್ಷ ಟೈಯರ್‌ ಸುಟ್ಟುಹಾಕಿದ್ದಂತಹ ಘಟನೆಗಳು ನಡೆಯಲಿಲ್ಲ.

ರಾಜ್ಯದ ರಾಜಧಾನಿಯಲ್ಲಿ ಆರ್‌ ಸಿ ಬಿ ಗೆಲುವಿನ ಪ್ರಚಾರ ಹಾಗೂ ಸಂಭ್ರಮಾಚರಣೆ ಪ್ರಯುಕ್ತ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಸಂಭವಿಸಿತು, ಇದಕ್ಕೆ ಪ್ರಮುಖ ಕಾರಣ ಆರ್‌ ಸಿ ಬಿ ಮತ್ತು ಐಪಿಲ್‌ ಆಯೋಜಕರೆ ಹೊರೆತು ರಾಜ್ಯ ಸರ್ಕಾರ, ಗೃಹ ಇಲಾಖೆಯ ವೈಫಲ್ಯವಲ್ಲ. ಕಾರಣ ಚಿನ್ನಸ್ವಾಮಿ ಕ್ರೀಂಡಾಂಗಣ ಖಾಸಗಿ ಸ್ವತ್ತ ಹೊರತು ಸರ್ಕಾರದ ಸ್ವತ್ತಲ್ಲ. ಆಯೋಜಕರು ಕಟ್ಟು ನಿಟ್ಟಾಗಿ ಸುತ್ತೋಲೆಯನ್ನು ಹೊರಡಿಸಿದ್ದರು, ಸುತ್ತೋಲೆಯಲ್ಲಿ ಕೇವಲ ಚಿನ್ನಸ್ವಾಮಿ ಕ್ಲಬ್‌ ಸದಸ್ಯರುಗಳಿಗೆ ಮಾತ್ರ ಪ್ರವೇಶವೆಂದು ಆದೇಶ ಹೊರಡಿಸಿತ್ತಾದರೂ ಕೂಡ ಇಂತಹ ಘಟನೆ ನಡೆಯಿತು.ದೇಶದಲ್ಲಿ ಯಾವುದೇ ಇಂತಹ ಅಹಿತಕರ ಘಟನೆ ನಡೆಯಬಾರದು ಎಂದು ಎಲ್ಲರ ಆಶಯ.

ಸುದ್ದಿವಾಹಿನಗಳ ಕಳ್ಳಾಟ! – ಕಳೆದ 11 ವರ್ಷಗಳಲ್ಲಿ ದೇಶದಲ್ಲಾಗಿರುವ ಅನಾಹುತಗಳ ಬಗ್ಗೆ ಸುದ್ದಿ ಪ್ರಸಾರವಾಗಿಲ್ಲ, ಹಾಗೂ ಈ ಬಗ್ಗೆ ಗಂಭೀರ ಚರ್ಚೆಗಳು ನಡೆದಿಲ್ಲ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಅದರಲ್ಲೂ ಉತ್ತರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್‌, ಮಣಿಪುರ, ಅಸ್ಸಾಂ ಸೇರಿದಂತೆ ಇತರೆ ರಾಜ್ಯಗಳಲ್ಲಿ ನಡೆದಿರುವ ಭ್ರಷ್ಟಾಚಾರ, ಅತ್ಯಾಚಾರ, ಹಿಂಸಾಚಾರ, ಗಲಭೆಗಳ ಬಗ್ಗೆ ಪರಿಣಾಮಕಾರಿಯಾಗಿ ನ್ಯೂಸ್‌ ಚ್ಯಾನಲ್‌ ಗಳು ವರದಿಗಳನ್ನು ಪ್ರಸಾರ ಮಾಡುತ್ತಿಲ್ಲವೇಕೆ?

Food Ration Card: BPL ಕಾರ್ಡ್‌ ಇದ್ದಿದ್ದು APL ಆಗಿದೆ ಅಧಿಕಾರಿ ಮುಂದೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಮಹಿಳೆ..!

ಉತ್ತರ ಪ್ರದೇಶದಲ್ಲಿ ಕುಂಭಮೇಳೆದ ಆಚರಣೆಯಲ್ಲಿ ಸಾವಿರಕ್ಕಿಂತ ಹೆಚ್ಚು ಜನರು ಮೃತಪಟ್ಟಿದ್ದರೂ ಸಹ ಮುಚ್ಚಿಡುವ ಕೆಲಸ ಅಲ್ಲಿನ ಸರ್ಕಾರದ ಜೊತೆ ಅಷ್ಟೇ ಪ್ರಭಾವಶಾಲಿಯಾಗಿ ಈ ನ್ಯೂಸ್‌ ಚ್ಯಾನಲ್‌ಗಳು ಪ್ರಸಾರ ಮಾಡದಂತೆ ಸರ್ಕಾರದ ರಕ್ಷಣೆಗೆ ನಿಂತಿರುವುದು ಎಷ್ಟರಮಟ್ಟಿಗೆ ಸರಿ?
ಮಹಾರಾಷ್ಟ್ರದಲ್ಲಿ ಐಪಿಲ್‌ ಗೆದ್ದು, ಸಂಭ್ರಮಾಚರಣೆ ವೇಳೆ ಬೆಂಗಳೂರಿಗಿಂತ ಭೀಕರವಾದ ಘಟನೆಗಳು, ಅನಾಹುತಗಳು ಮತ್ತು ಅತೀ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಗಳು ಸಂಭವಿಸಿತ್ತಾದರೂ ಈ ಬಗ್ಗೆ 24*7 ನ್ಯೂಸ್‌ ಚ್ಯಾನಲ್‌ ಮತ್ತು ಅದರ ನಿರೂಪಕರ, ವರದಿಗಾರರ ಬಾಯಿ ಬಂದಾಗಿತ್ತಲ್ಲವೇಕೆ?

ರಾಜ್ಯದಲ್ಲಿ ಇದೇ ಬಿಜೆಪಿಗಳು ಆಡಳಿತವಿದ್ದ ಸಂದರ್ಭದಲ್ಲಿ ಚಾಮರಾಜನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ Oxygen Cylinder ಸಿಗಲಾರದೆ ಕನಿಷ್ಠ 24 ರೋಗಿಗಳು ಮೃತಪಟ್ಟರಲ್ಲ ಆಗ
ಇದೇ ಮಾಧ್ಯಮಗಳು ಮತ್ತು 24*7 ನ್ಯೂಸ್‌ ವಾಹಿನಗಳ ಮುಖ್ಯಸ್ಥರು ಈ ಘಟನೆ ಬಗ್ಗೆ ಆಗಿನ ಶಿಕ್ಷಣ ಸಚಿವರು ಮತ್ತು ಚಾಮರಾಜನಗರದ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಳ್ಳಲ್ಲಿವೇಕೆ? ಉತ್ತರ ಪ್ರದೇಶದಲ್ಲಿ ಇದೇ Oxygen Cylinder ಕೊರೆತೆಯಿಂದಾಗಿ ಕೋವಿಡ್‌ ಗೆ ತುತ್ತಾದ ರೋಗಿಗಳು ಮೃತ ಪಟ್ಟಾಗ ಗೋಧಿ ಮಾಧ್ಯಮಗಳು ಅಲ್ಲಿನ ಮುಖ್ಯಮಂತ್ರಿ ವಿರುದ್ಧ ಮತ್ತು ಸರ್ಕಾರ ವಿರುದ್ಧ ಗುಡುಗಲಿಲ್ಲವೇಕೆ?

Karur stampede: ಕರೂರ್‌ಗೆ ನಟ ವಿಜಯ್‌ ಬರ್ತಿದಂತೆ ಓಡೋಡಿ ಹೋದ ಫ್ಯಾನ್ಸ್..!‌ #Vijayrally #TamilNadu #Karur

ಜನರನ್ನು ಭಯಪಡಿಸಿದ್ದು ಬಿಟ್ಟರೆ, ಗೋಧಿ ಮಾಧ್ಯಮಗಳ ನಿರೂಪಕರು ಮತ್ತು ವಾಹಿನಿಗಳ ಮುಖ್ಯಸ್ಥರು ವಸ್ತುನಿಷ್ಠಯಿಂದ, ವಾಸ್ತವವನ್ನು ಮುಚ್ಚಿಡುವ ಕೆಲಸವನ್ನು ಮಾಡುತ್ತಿದೆಯಲ್ಲ ಯಾಕೆ?

ಪುರಿ ಜಗನ್ನಾಥ್‌ ದೇವಾಲಯದ ರಥಾಯಾತ್ರೆ ಸಂದರ್ಭದಲ್ಲಿ ರಥಾಯಾತ್ರೆಯನ್ನು ಕಣ್ತುಂಬಿಕೊಳ್ಳಲು ಹೋಗಿದ್ದ ಭಕ್ತರು ಅಲ್ಲಿ ನಡೆದ ಕಾಲ್ತುಳಿದಿಂತ ಮೃತಪಟ್ಟರಲ್ಲ ಆಗಲೂ ಸಹ ಇದೇ 24*7 ಕೆಲಸಕ್ಕೆ ಬಾರದ ಜನ ವಿರೋಧಿ ಸುದ್ದಿ ಮಾಧ್ಯಮಗಳು ಈ ಘಟನೆ ಕುರಿತು ಪ್ರಸಾರ ಹಾಗೂ ಈ ಬಗ್ಗೆ ವಿಶ್ಲೇಷಣೆ, ಚರ್ಚೆಗಳನ್ನು ಮಾಡಲಿಲ್ಲವೇಕೆ?

ಟವಿ ಸುದ್ದಿ ಮಾಧ್ಯಮಗಳ ಕಣ್ಣಾಮುಚ್ಚಾಲೇ ನವರಂಗಿ ಆಟವಲ್ಲ ಜನರಿಗೆ ತಿಳಿಯಲ್ಲವೆಂದು ಭಾವಿಸುವುದು ಇವುಗಳ ಮೂರ್ಖತನವಲ್ಲವೇ?!

Retired IAS Officer Jamadar Special Interview: ಲಿಂಗಾಯಿತರ ಮತಗಳೇ  ರಾಜ್ಯ ರಾಜಕೀಯದಲ್ಲಿ ನಿರ್ಣಾಯಕವೇ!?
Tags: actorKarurahulgandhiRCBTamilnaduTamilnadu GovernmentTamilNaduPoliticsTamilnadustampedeTVKTVKNewsVijayVijaypoliticalpartyVijayrally
Previous Post

ಡಿಜಿಟಲ್‌ ಯುಗದಲ್ಲಿ ಭಗತ್‌ ಸಿಂಗ್‌-ನಾಸ್ತಿಕತೆ

Next Post

ಉತ್ತರ ಕರ್ನಾಟಕ ಭಾಗದಲ್ಲಿ ನಿಲ್ಲದ ಮಳೆ ಮುಂದುವರೆದ ರಕ್ಷಣಾ ಕಾರ್ಯಚರಣೆ !

Related Posts

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !
ಇತರೆ / Others

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

by ಪ್ರತಿಧ್ವನಿ
September 30, 2025
0

ಇಂದು ನಗರದಲ್ಲಿನ ಚಂದ್ರ ಲೇಔಟ್‌ನಲ್ಲಿ Sunya IAS ನೂತನ ಸೆಂಟರ್‌ ಉದ್ಘಾಟನೆಗೊಂಡಿತು. ಚಂದ್ರ ಬಡಾವಣೆಯಲ್ಲಿ Civil Services Training Institutions ಗಳಿಗೆ ಹೆಸರುವಾಸಿಯಾಗಿದೆ. ರಾಜ್ಯ ಬೇರೆ ಬೇರೆ...

Read moreDetails
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

September 30, 2025
ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

ಹೆಚ್ಚುವರಿ ಸೌಕರ್ಯಕ್ಕೆ ನಟ ದರ್ಶನ್‌ ಪರ ವಕೀಲರು ಕೋರ್ಟ್‌ ನಲ್ಲಿ ವಾದ !

September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

September 30, 2025
Next Post
ಉತ್ತರ ಕರ್ನಾಟಕ ಭಾಗದಲ್ಲಿ ನಿಲ್ಲದ ಮಳೆ ಮುಂದುವರೆದ ರಕ್ಷಣಾ ಕಾರ್ಯಚರಣೆ !

ಉತ್ತರ ಕರ್ನಾಟಕ ಭಾಗದಲ್ಲಿ ನಿಲ್ಲದ ಮಳೆ ಮುಂದುವರೆದ ರಕ್ಷಣಾ ಕಾರ್ಯಚರಣೆ !

Recent News

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !
Top Story

UAPA ಕಾನೂನಿನ ಅಡಿಯಲ್ಲಿ ಮೋದಿಯ ಬಹಳ ದೊಡ್ಡ ಅಭಿಮಾನಿ ಬಂಧನ !

by ಪ್ರತಿಧ್ವನಿ
September 30, 2025
ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ,  ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !
Top Story

ಬಿಜೆಪಿ ವಕ್ತಾರನಿಂದ ರಾಹುಲ್‌ ಗಾಂಧಿ ಹತ್ಯೆ ಬೆದರಿಕೆ, ಕೇಂದ್ರ ಹಾಗೂ ಕೇರಳ ಸರ್ಕಾರಗಳ ನಿರ್ಲಕ್ಷ್ಯ !

by ಪ್ರತಿಧ್ವನಿ
September 30, 2025
ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!
Top Story

ಪ್ರಸಿದ್ದ ಹಾಸ್ಯ ಕಲಾವಿದ, ರಂಗ ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!

by ಪ್ರತಿಧ್ವನಿ
September 29, 2025
ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ
Top Story

ಕಲ್ಯಾಣ ಕರ್ನಾಟಕದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ಕೈಗೊಳ್ಳಲು ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಆಗ್ರಹ

by ಪ್ರತಿಧ್ವನಿ
September 28, 2025
ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ
Top Story

ನಟ ವಿಜಯ್‌ : ಕಾಲ್ತುಳಿತದಲ್ಲಿ ಮೃತರ ಕುಟುಂಬಕ್ಕೆ ಸಂತಾಪ, ಪರಿಹಾರದ ವಾಗ್ದಾನ

by ಪ್ರತಿಧ್ವನಿ
September 29, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

ಶೂನ್ಯ ಐಎಎಸ್‌ ಸೆಂಟರ್‌ ಖಾದರ್‌ ರಿಂದ ಉದ್ಘಾಟನೆ !

September 30, 2025
NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

NAASH Studio Launch ಮಾಡಿದ ಸ್ಯಾಂಡಲ್‌ವುಡ್‌ ನಟಿ ಸುಧಾರಾಣಿ !

September 30, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada