• Home
  • About Us
  • ಕರ್ನಾಟಕ
Sunday, October 12, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಅಪೂರ್ವ ಚೇತನದ ಒಳನೋಟಗಳ ದರ್ಶನ

ನಾ ದಿವಾಕರ by ನಾ ದಿವಾಕರ
September 17, 2025
in Top Story, ಕರ್ನಾಟಕ, ವಿಶೇಷ
0
ಅಪೂರ್ವ ಚೇತನದ ಒಳನೋಟಗಳ ದರ್ಶನ
Share on WhatsAppShare on FacebookShare on Telegram

ಇದು ಸಾಮಾನ್ಯ ಜೀವನ ಕಥನ ಅಲ್ಲ ವ್ಯಕ್ತಿಯ ಒಳಹೊಕ್ಕು ನೋಡುವ ವಿಶಿಷ್ಟ ಪಯಣ

ADVERTISEMENT

ನಾ ದಿವಾಕರ

“ ನನ್ನ ಶಾಲೆಯಲ್ಲಿ ಕಲಿತ ದಲಿತ ಜನಾಂಗದ ಮಕ್ಕಳು ವಿದ್ಯಾವಂತರಾಗಿ, ದೊಡ್ಡವರಾಗಿ, ಸರಕಾರಿ ನೌಕರಿಗೆ ಸೇರಿ ನಮ್ಮೂರ ರಸ್ತೆಗಳಲ್ಲಿ ಕಾರಿನಲ್ಲಿ ಓಡಾಡಬೇಕು. ಆಗ ರಸ್ತೆಯಲ್ಲಿ ಏಳುವ ಧೂಳು ನನ್ನ ತಲೆಗೆ ತಾಗಬೇಕು. ಆಗ ನನ್ನ ಜನ್ಮ ಸಾರ್ಥಕವಾಗುತ್ತದೆ ”

ಈ ಮಾತುಗಳು ಕರ್ನಾಟಕದ ಪ್ರಗತಿಪರ ಸಾಮಾಜಿಕ-ಸಾಂಸ್ಕೃತಿಕ ಹೋರಾಟಗಳಲ್ಲಿರುವ ಎಲ್ಲ ಮನಸ್ಸುಗಳಲ್ಲೂ ಆಳವಾಗಿ ನಾಟಿದೆ. ಬಹಳ ಅಪರೂಪ ಎನಿಸುವ ಈ ಭಾವನಾತ್ಮಕ ಅಭಿವ್ಯಕ್ತಿಯ ಕರ್ತೃ, ಕುದ್ಮುಲ್‌ ರಂಗರಾವ್‌ ಎಂಬ 19ನೆ ಶತಮಾನದ ಸಮಾಜ ಸುಧಾರಕ, ದಾರ್ಶನಿಕ ವ್ಯಕ್ತಿ.

 19ನೆ ಶತಮಾನದ ಭಾರತ ದಾರ್ಶನಿಕ ಚಿಂತಕರ, ಭವಿಷ್ಯ ಭಾರತದ ಭೌತಿಕ ದಿಕ್ಸೂಚಿಗಳ ಹುಟ್ಟು, ಬೆಳವಣಿಗೆ ಮತ್ತು ಆಲೋಚನಾ ವಿಧಾನಗಳಿಗೆ ಸಾಕ್ಷಿಯಾದ ಒಂದು ಯುಗ. 1827ರಲ್ಲಿ ಜ್ಯೋತಿ ಬಾ ಫುಲೆ,  1861ರಲ್ಲಿ ರವೀಂದ್ರ ನಾಥ ಠಾಗೋರ್‌, 1863 ವಿವೇಕಾನಂದ, 1869 ಮಹಾತ್ಮ ಗಾಂಧಿ, 1889 ಜವಹರಲಾಲ್‌ ನೆಹರೂ,  1891 ಭೀಮರಾವ್‌ ಅಂಬೇಡ್ಕರ್‌ ಈ ಮಹನೀಯರು ಪ್ರತಿಪಾದಿಸಿದ ತತ್ವ ಸಿದ್ಧಾಂತಗಳು ವಿಭಿನ್ನವಾಗಿದ್ದರೂ, ಅನುಸರಿಸಿದ ಹಾದಿ ಬೇರೆ ಬೇರೆಯೇ ಆದರೂ, ಎಲ್ಲರನ್ನೂ ಒಂದೇ ಆವರಣದಲ್ಲಿಟ್ಟು ನೋಡಿದಾಗ , ವರ್ತಮಾನದ ಭಾರತೀಯ ಸಮಾಜಕ್ಕೆ ಹಾಗೂ ಭವಿಷ್ಯದ ಭಾರತಕ್ಕೆ ಅತ್ಯವಶ್ಯವಾದ ʼಮೌಲ್ಯʼಗಳನ್ನು ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ನೆಲೆಗಳಲ್ಲಿ ಸಶಕ್ತವಾಗಿ ಒದಗಿಸುತ್ತದೆ. ವರ್ತಮಾನದ ವಾತಾವರಣದಲ್ಲ ಈ ಮೌಲ್ಯ ಎಂಬ ಪದವೇ ಕಾಣದಿರುವಾಗ, ಈ ಚಿಂತನೆಗಳು ಸಾಂತ್ವನ ನೀಡುತ್ತವೆ.

D.K.Shivakumar  : ರಸ್ತೆ ಬದಿಯಲ್ಲೇ ಕಸ ಹಾಕೋದನ್ನ ತಡೆಗಟ್ಟೋಕೆ ಹೊಸ ಪ್ಲ್ಯಾನ್ | | Garbage Disposal |Bengaluru

 ಅಪೂರ್ವ ಚೇತನದ ಉಗಮ

 ಇವರುಗಳ ನಡುವೆ ,1859ರಲ್ಲಿ ಜನಿಸಿ,  ಎಲೆಮರೆಕಾಯಿಯ ಹಾಗೆ ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಗಳ ವಿರುದ್ಧ ತಮ್ಮದೇ ಆದ ಸೀಮಿತ ಚೌಕಟ್ಟಿನಲ್ಲಿ ಶ್ರಮಿಸಿದವರು ಕುದ್ಮುಲ್‌ ರಂಗರಾವ್.ನೇಪಥ್ಯದಲ್ಲಿದ್ದರೂ, ಇತ್ತೀಚಿನ ದಶಕಗಳಲ್ಲಿ ಕರ್ನಾಟಕದ ದಲಿತ ಚಳುವಳಿಗಳಲ್ಲಿ ಹಾಗೂ ಎಲ್ಲ ಪ್ರಗತಿಪರ ಹೋರಾಟಗಳಲ್ಲಿ ಪ್ರಚಲಿತವಾಗಿರುವ, ಮನೆ ಮಾತಾಗಿರುವ ಹಾಗೂ ಸಮಾಜ ಸುಧಾರಣೆಯ ದಿಕ್ಕಿನಲ್ಲಿ ಮಾರ್ಗದರ್ಶಿಯಾಗಿ ರೂಪುಗೊಂಡಿರುವ ಮಹಾನ್‌ ಚಿಂತಕರೆಂದರೆ ಕುದ್ಮುಲ್‌ ರಂಗರಾವ್.‌ ಇವರ ಜೀವನಗಾಥೆ, ಯಶೋಗಾಥೆಯನ್ನು ಯುವ ಸಾಹಿತಿಗಳು, ಬರಹಗಾರರು, ಸಂಶೋಧಕರು ಅಪಾರ ಪ್ರಮಾಣದಲ್ಲಿ ದಾಖಲಿಸಿದ್ದಾರೆ. ಭಾರತೀಯ ಸಮಾಜಕ್ಕೆ ಶತಮಾನಗಳಿಂದ ಅಂಟಿರುವ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆಯಂತಹ ಹೀನ, ಅಮಾನುಷ ಆಚರಣೆಯ ವಿರುದ್ಧ ಹೋರಾಡಿದ ಮಹನೀಯರ ಪೈಕಿ ಕುದ್ಮುಲ್‌ ರಂಗರಾವ್‌ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಇವರನ್ನು ಕುರಿತ ಹಲವು ಗ್ರಂಥಗಳ ನಡುವೆ, ವಿಶಿಷ್ಟವಾದ ಒಂದು ಜೀವನಗಾಥೆಯ ಕೃತಿಯನ್ನು, ಬಹುರೂಪಿ ಪ್ರಕಾಶನವು “ ನೀವು ಕಂಡರಿಯದ ಕುದ್ಮುಲ್‌ ರಂಗರಾವ್‌ ” ಶೀರ್ಷಿಕೆಯಲ್ಲಿ ಕನ್ನಡಿಗರ ಮುಂದಿಟ್ಟಿದೆ.

 ಕುದ್ಮುಲ್‌ ಪಿಜ್ಜ ಎಂದೇ ಸಂಬೋಧಿಸುತ್ತಾ ಈ ಮಹಾನ್‌ ಚಿಂತಕರನ್ನು ಅವರ ಕುಟುಂಬದವರೇ ಕಂಡ ರೀತಿಯಲ್ಲಿ, ಅವರ ಅಭಿಪ್ರಾಯ, ಅನಿಸಿಕೆಗಳನ್ನು ದಾಖಲಿಸಿ ಒಂದು ಪುಟ್ಟ ಕೃತಿಯ ರೂಪದಲ್ಲಿ ಕನ್ನಡಿಗರ ಮುಂದೆ ಇರಿಸಲಾಗಿದೆ. ರಂಗರಾವ್‌ ಅವರ ಮರಿಮಗಳು ಪ್ರೇಮಿ ಎಂ ರಾವ್‌ ಮತ್ತು ಮರಿಮರಿ ಮಗ ಜಿ. ಪಾಂಡುರಂಗ ರಾವ್‌ ಅವರ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿರುವುದು ನಮ್ಮ ನಡುವಿನ ಹಿರಿಯ ವಿದ್ವಾಂಸರಾದ ಬಿ.ಎ. ವಿವೇಕ ರೈ. ಈ ಕೃತಿಯ ವೈಶಿಷ್ಟ್ಯ ಎಂದರೆ , ಕುದ್ಮುಲ್‌ ರಂಗರಾವ್‌ ತಮ್ಮ ಜೀವಿತ ಕಾಲದಲ್ಲೇ ಅವರಿಗೆ ಸಂಬಂಧಿಸಿದ ಎಲ್ಲ ಲಿಖಿತ ದಾಖಲೆಗಳನ್ನೂ ಸುಟ್ಟು ಹಾಕಿದ್ದುದರಿಂದ, ಅವರ ಕುಟುಂಬ ಸದಸ್ಯರ ಕಣ್ಣಲ್ಲಿ ಕುದ್ಮುಲ್‌ ಪಿಜ್ಜ ಕಂಡ ರೀತಿಯನ್ನು ದಾಖಲಿಸಿರುವುದು, ಈ ಪುಟ್ಟ ಪುಸ್ತಕದ ವಿಶೇಷ. ಮೂಲ ಲೇಖಕರು ತಮ್ಮ ಹಿರಿಯರಿಂದ ಕೇಳಿದ ಕಥನಗಳನ್ನು ಇಲ್ಲಿ ದಾಖಲಿಸಲಾಗಿದ್ದು, ಕುದ್ಮುಲ್‌ ಪಿಜ್ಜ ಅವರ ಚಿಂತನಾಧಾರೆಯನ್ನು ವರ್ತಮಾನದ ಸಾಮಾಜಿಕ ಸನ್ನಿವೇಶದೊಡನೆ ಅನುಸಂಧಾನ ಮಾಡುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.

ವಿಶಾಲ ಹಂದರದ ಸುಂದರ ಬೇರು

 ರಂಗರಾವ್‌ ಅವರ ಜನ್ಮ ಸ್ಥಳದ ವಿವರಗಳೊಂದಿಗೆ ಆರಂಭವಾಗುವ ಈ ವಿಹಂಗಮ ಕಥನವು ಭಿನ್ನ ಮಜಲುಗಳಲ್ಲಿ ಓದುಗರ ಮುಂದೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಕರಾವಳಿ ಸಮಾಜದಲ್ಲಿ ರಾಜಕೀಯ ಅಬ್ಬರಾಟಗಳಿಂದಾಚೆಗೆ ಇಂದಿಗೂ ತಳಮಟ್ಟದಲ್ಲಿ ಕಾಣಬಹುದಾದ ಸೌಹಾರ್ದತೆ, ಸಮನ್ವಯ ಮತು ಕೂಡು ಬಾಳ್ವೆಗೆ ಕುದ್ಮುಲ್‌ ಪಿಜ್ಜ ಅವರ ಶತಮಾನಗಳ ಹಿಂದಿನ ಪ್ರಯತ್ನಗಳು ಎಷ್ಟು ಪ್ರಭಾವಶಾಲಿಯಾಗಿ ಪರಿಣಮಿಸಿವೆ ಎನ್ನುವುದನ್ನು ಈ ಪುಸ್ತಕ ಓದುತ್ತಾ ತಿಳಿಯಬಹುದು. ಇತ್ತೀಚಿನ ದಿನಗಳಲ್ಲಿ ಹಿಂದೂ-ಕ್ರೈಸ್ತ-ಮುಸ್ಲಿಮರ ನಡುವೆ ಮತೀಯ ಸಂಘರ್ಷಗಳು ನಡೆಯುತ್ತಿರುವುದು ವಾಸ್ತವವಾದರೂ, ಇಂದಿಗೂ ಭಟ್ಕಳದಲ್ಲಿ ದೇವಸ್ಥಾನದ ರಥ ಮಸೀದಿಯನ್ನು ಹಾದು ಹೋಗುವಾಗ, ರಥ ಎಳೆಯುವ ಮುನ್ನ ಮುಲ್ಲಾಗಳು ಶುಭಾಶಯ ಕೋರುವ ಪದ್ಧತಿ ಜಾರಿಯಲ್ಲಿರುವುದನ್ನು ಲೇಖಕರು ಉಲ್ಲೇಖಿಸುತ್ತಾರೆ. (ಪುಟ 19).

 ಎರಡನೆ ಅಧ್ಯಾಯದಲ್ಲಿ ಸಾರಸ್ವತ ಸಮಾಜದ ಉಗಮ, ಆಗಮನ ಮತ್ತು ಇಲ್ಲಿನ ಸ್ಥಳೀಯ ಸಂಸ್ಕೃತಿಯೊಂದಿಗಿನ ಅನುಸಂಧಾನವನ್ನು ಕುರಿತು ವಿಸ್ತೃತ ಚಿತ್ರಣ ನೀಡಲಾಗಿದೆ. ಸಾಂಪ್ರದಾಯಿಕ ಸಮಾಜವಾಗಿಯೇ ಇಂದಿಗೂ ಗುರುತಿಸಿಕೊಂಡಿರುವ ಸಾರಸ್ವತ ಬ್ರಾಹ್ಮಣ ಸಮಾಜ, ಕೃಷಿಯನ್ನು ತೊರೆದು ನಗರಗಳಲ್ಲಿ, ಹೊರ ದೇಶಗಳಲ್ಲಿ ಬದುಕುಕಟ್ಟಿಕೊಂಡಿರುವುದನ್ನು ದಾಖಲಿಸುವ ಲೇಖಕರು, ಈ ಸಮಾಜದಲ್ಲಿ ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದ್ದ ಜಾತಿ ಪದ್ಧತಿಯ ಆಚರಣೆಗಳು, ಇಂದಿಗೂ ಮುಂದುವರೆದಿದ್ದರೂ, ಸಮಾಜದ ಒಳಗೇ ಮೀನು-ಮಾಂಸ ಸೇವಿಸುವ ಬ್ರಾಹ್ಮಣೇತರ ಸಾರಸ್ವತರು ಮತ್ತು ಬ್ರಾಹ್ಮಣ ಸಮುದಾಯಗಳ ನಡುವಿನ ಬಾಂಧವ್ಯವನ್ನು ಚಾರಿತ್ರಿಕ ನೆಲೆಯಲ್ಲಿ ಸಂಕ್ಷಿಪ್ತವಾಗಿ ವಿಶ್ಲೇಷಿಸಲಾಗಿದೆ.  ಇದೇ ವೇಳೆ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ, ಆಡಳಿತ ವ್ಯವಸ್ಥೆಯಲ್ಲಿ ಹಾಗೂ ಕಲೆ ರಂಗಭೂಮಿಯ ಉನ್ನತಿಯಲ್ಲಿ ಈ ಸಮಾಜದ ಕೊಡುಗೆಯನ್ನೂ ವಸ್ತುನಿಷ್ಠವಾಗಿ ಸ್ಮರಿಸಲಾಗಿದೆ. ಈ ಸಮಾಜದ ಪುತ್ರನಾಗಿ ಜನಿಸಿದ ಕುದ್ಮುಲ್‌ ರಂಗರಾಯರ್‌ ಸಾಂಪ್ರದಾಯಿಕತೆಯನ್ನು ಕಿತ್ತೊಗೆದು, ಸಮಾಜದ ಔನ್ನತ್ಯಕ್ಕಾಗಿ ಶ್ರಮಿಸಿದ ಮತ್ತು ಸಮುದಾಯದ ವಿರೋಧದ ನಡುವೆಯೂ ದಲಿತ ವಿಮೋಚನೆಗಾಗಿ ನಡೆಸಿದ ಹೋರಾಟ ಇಲ್ಲಿ ಗಮನಾರ್ಹ.

 ಕುದ್ಮುಲ್‌ ರಂಗರಾವ್‌ ಅವರ ಹುಟ್ಟು, ಬೆಳವಣಿಗೆ, ಸಾಂಸಾರಿಕ ಜೀವನ ಮತ್ತು ಕೌಟುಂಬಿಕ ಜವಾಬ್ದಾರಿಗಳನ್ನು ಎರಡು ಅಧ್ಯಾಯಗಳಲ್ಲಿ  ಮನಮುಟ್ಟುವಂತೆ ಪರಿಚಯಿಸಲಾಗಿದೆ. (ಪುಟ 27-37). ಅವರನ್ನು ಪ್ರತ್ಯಕ್ಷವಾಗಿ ನೋಡಿರುವ ಕುಟುಂಬದ ಸದಸ್ಯರು ಯಾರೂ ನಮ್ಮ ನಡುವೆ ಇಲ್ಲವಾದರೂ, ಅವರ ಬೆಳವಣಿಗೆಯನ್ನು ಹಂತಹಂತವಾಗಿ ಅವರು ಎದುರಿಸಿದ ಸಂಕಟ, ಸಂಕಷ್ಟಗಳ ಸಮೇತ ಓದುಗರ ಮುಂದಿಟ್ಟಿರುವುದು ಮೂಲ ಲೇಖಕರ ಬದ್ಧತೆಯನ್ನು ತೋರುತ್ತದೆ. ತಮ್ಮ ಸೋದರಿಯರ ಮದುವೆ, ತಮ್ಮ ವೈವಾಹಿಕ ಬದುಕು ನಿಭಾಯಿಸಿಕೊಂಡು ಕುದ್ಮುಲ್‌ ಪಿಜ್ಜ ತಮ್ಮ ಶಿಕ್ಷಣ, ನೌಕರಿ, ವೃತ್ತಿ ಎಲ್ಲವನ್ನೂ ನಿಭಾಯಿಸಿದ ರೀತಿಯನ್ನು ಗಮನಿಸಿದರೆ, ಅವರ ಬದುಕಿನ ಹಸಿವು ಸಂಕಟಗಳೇ ಅವರನ್ನು ದಲಿತರ ಕಡೆಗೆ ಸೆಳೆದಿದೆ ಎಂದೆನಿಸದಿರದು.

 ನಿಸ್ವಾರ್ಥ ಸೇವೆಯ ಸ್ಮರಣೀಯ ಹೆಜ್ಜೆಗಳು

 ಸಾಧಕರಾಗಿ ಸನ್ಮಾನ, ಸಮ್ಮಾನ, ಪ್ರಶಸ್ತಿಗಾಗಿ ಹಂಬಲಿಸುವ ವರ್ತಮಾನದ ಸಮಾಜದಲ್ಲಿ ನಿಂತು ನೋಡಿದಾಗ , “ತನ್ನ ಸುತ್ತಮುತ್ತಲಿನವರಿಗೆ ತನ್ನ ಹೆಸರು ಮರೆತುಹೋಗಬೇಕು, ಕೆಲಸಗಳು ಮಾತ್ರ ಉಳಿಯಬೇಕು”(ಪುಟ 35) ಎಂಬ ಉದಾತ್ತ ಆಲೋಚನೆಯೊಂದಿಗೆ ತಮ್ಮ ವ್ಯವಹಾರದ ಎಲ್ಲ ದಾಖಲೆಗಳನ್ನೂ, ಪ್ರಶಸ್ತಿ-ಗೌರವ ಪತ್ರ, ಬಹುಮಾನದ ವಸ್ತುಗಳು ಎಲ್ಲವನ್ನೂ ತಾವೇ ನಾಶ ಮಾಡಿದ ರಂಗರಾವ್‌ ನಿಜಕ್ಕೂ ಶತಮಾನದ ವಿಶಿಷ್ಟ ವ್ಯಕ್ತಿ ಎಂದು ಹೇಳಬಹುದು. ಕುಟುಂಬದೊಡನೆ ಫೋಟೋ ತೆಗೆಸಿಕೊಳ್ಳಲೂ ನಿರಾಕರಿಸಿರುವುದು ನಮ್ಮಂತಹ ಆಲ್ಬಂ ಪ್ರಿಯರಿಗೂ ಅಚ್ಚರಿ ಮೂಡಿಸುತ್ತದೆ. ಕುಟುಂಬದ ಯೋಗಕ್ಷೇಮದಷ್ಟೇ ತಮ್ಮ ಗೆಳೆತನವನ್ನೂ ಬೆಳೆಸಿಕೊಂಡಿದ್ದ ರಂಗರಾವ್‌ ಅವರ ಸ್ಫೂರ್ತಿಯ ಚಿಲುಮೆ ಉಳ್ಳಾಲ ರಘುನಾಥಯ್ಯ ಅವರ ಸಂಕ್ಷಿಪ್ತ ಪರಿಚಯ ಹೃದಯಸ್ಪರ್ಶಿಯಾಗಿದೆ.( ಪುಟ 38)

 ಬ್ರಾಹ್ಮಣ ಕುಟುಂಬದ ಸಂಪ್ರದಾಯಗಳನ್ನು ಧಿಕ್ಕರಿಸಿದರೂ, ಹಿಂದೂ ಧರ್ಮದಲ್ಲಿ ಸುಧಾರಣೆಗಳಿಗಾಗಿಯೇ ಉದಯಿಸಿದ್ದ ಬ್ರಹ್ಮ ಸಮಾಜದೊಡನೆ ಆಧ್ಯಾತ್ಮಿಕವಾಗಿ ಗುರುತಿಸಿಕೊಂಡಿದ್ದ ರಂಗರಾವ್‌ 1882ರಲ್ಲೇ ಮಂಗಳೂರಿನಲ್ಲಿ ಬ್ರಹ್ಮ ಸಮಾಜ ಮಂದಿರದಲ್ಲೇ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದ್ದ ರಂಗರಾವ್‌,  ಆಧ್ಯಾತ್ಮದ ಹಿಂದೆ ಬಿದ್ದು ಸಂಸಾರವನ್ನು ನಿರ್ಲಕ್ಷಿಸಿದವರಲ್ಲ.  ಹುಟ್ಟಿದ ನಾಲ್ವರು ಗಂಡುಮಕ್ಕಳಲ್ಲಿ ಕೊನೆಯವರು ಮಾತ್ರ ಉಳಿದುಕೊಳ್ಳುವುದು, ಯಾವ ತಂದೆಗಾದರೂ ಖಿನ್ನತೆಗೆ ದೂಡುವ ವಿಚಾರ. ಆದರೆ ರಂಗರಾವ್‌ ಆ ನೋವು ಸಂಕಟಗಳನ್ನು ಮೀರಿ ನಿಂತು ಹೆಣ್ಣುಮಕ್ಕಳನ್ನು ಪುರೋಗಾಮಿ ಮಾರ್ಗದಲ್ಲಿ ಪೋಷಿಸಿದ್ದರು. ಹಿರಿಯ ಪುತ್ರಿ ಲಲಿತಾ ಬಾಯಿ ಅವರ ಮುಂದಿನ ಬದುಕು, ಸಾಂಸಾರಿಕ ಪಯಣ ಇದಕ್ಕೆ ನಿದರ್ಶನ ಎನ್ನುವುದನ್ನು ಲೇಖಕರು ಆತ್ಮೀಯತೆಯಿಂದ ದಾಖಲಿಸಿದ್ದಾರೆ ( ಪುಟ45). ಇನ್ನಿಬ್ಬರು ಹೆಣ್ಣುಮಕ್ಕಳು ರಾಧಾಭಾಯಿ ಮತ್ತು ಶಾಂತಾ ಭಾಯಿ ಅವರ ಯಶೋಗಾಥೆಯೂ ಸಹ ಆದರ್ಶಪ್ರಾಯವಾದುದು.

ಶಿಕ್ಷಕರಾಗಿ ತಮ್ಮ ಬದುಕು ಸವೆಸಲಾರಂಭಿಸಿದ ರಂಗರಾವ್‌ ಸಮಾಜ ಸುಧಾರಕರಿಗೆ ಅತಿ ಅವಶ್ಯವಾಗಿ ಬೇಕಾಗುವ ಮತ್ತು ನೆರವಾಗುವ ವಕೀಲಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು ಅವರ ಬದುಕಿನ ಮಹಾ ತಿರುವು. ಮೇಲ್ವರ್ಗದ ವ್ಯಕ್ತಿಯೊಬ್ಬನಿಂದ ದಲಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದಾಗ, ಆಕೆಯ ಪರ ವಕಾಲತ್ತು ವಹಿಸಿ, ಗೆದ್ದು ಆಕೆಗೆ ನ್ಯಾಯ ದೊರಕಿಸಿಕೊಟ್ಟಿದ್ದು, ಆ ಕಾಲದಲ್ಲಿ ಕ್ರಾಂತಿಕಾರಕ ಹೆಜ್ಜೆಯಾಗಿತ್ತು.  ಜನಪ್ರಿಯ ವಕೀಲರಾಗಿದ್ದ ರಂಗರಾವ್‌ ಹಣಕ್ಕಾಗಿ ವೃತ್ತಿಯಲ್ಲಿರಲಿಲ್ಲ, ಬಡಜನತೆಗೆ ಉಚಿತವಾಗಿಯೇ ವಕಾಲತ್ತು ವಹಿಸುತ್ತಿದ್ದ ಪ್ರಸಂಗಗಳೂ ಸಾಕಷ್ಟಿವೆ.  ನ್ಯಾಯವಾದಿಯಾಗಿ ನ್ಯಾಯಾಲಯದ ನಾಲ್ಕು ಗೋಡೆಗಳ ಒಳಗೆ ಬಂಧಿಯಾಗದೆ, ಕುದ್ಮುಲ್‌ ಪಿಜ್ಜ ಬಾಹ್ಯ ಸಮಾಜದಲ್ಲಿ ಬಾಲ ವಿಧವೆಯರು, ಬಾಲಕನ್ಯೆಯರ ವಿವಾಹ ಮುಂತಾದ ಜಟಿಲ ಸಮಸ್ಯೆಗಳನ್ನು ನಿವಾರಿಸಲು ಸಂಕಲ್ಪ ಮಾಡಿದ್ದು ಅವರಲ್ಲಿದ್ದ ಕ್ರಾಂತಿಕಾರಿ ಸುಧಾರಕನ ಒಂದು ಮುಖವನ್ನು ಪ್ರದರ್ಶಿಸುತ್ತದೆ.

Ravi Krishna Reddy Exclusive Interview :   Anchor ಗಳು ಹುಚ್ಚು ... ಕಡ್ದಂಗೆ ಆಡ್ತಾರೆ.. #pratidhvani

 ಈ ಹಾದಿಯಲ್ಲಿ ಸಾಗುತ್ತಲೇ ತಮ್ಮ ಉನ್ನತ ವಕೀಲಿ ವೃತ್ತಿಯನ್ನೂ ತೊರೆದು, ದಲಿತರ ಬಡತನ ನಿವಾರಣೆ, ಅಸ್ಪೃಶ್ಯತೆ ನಿವಾರಣೆ, ಮಹಿಳಾ ಸಬಲೀಕರಣ, ಜೈಲುವಾಸದಿಂದ ಮುಕ್ತರಾದ ಕೈದಿಗಳ ಪುನರ್ವಸತಿ ಇವೇ ಮೊದಲಾದ ಕೈಂಕರ್ಯಗಳಲ್ಲಿ ತೊಡಗಿದ್ದು ಅವರ ಸಮಾಜಮುಖಿ ವ್ಯಕ್ತಿತ್ವವನ್ನು ತೋರಿದರೆ, 1901ರಲ್ಲಿ ಪ್ಲೇಗ್‌ ಮಾರಿ ಕಾಡಿದಾಗ, ಅವರ ಭಾವಿ ಅಳಿಯ ಸುಬ್ಬರಾವ್‌ ಅವರ ಜೊತೆಗೂಡಿ ಶವಗಳ ವಿಲೇವಾರಿ ಮಾಡಿದ್ದು, ಅವರೊಳಗಿದ್ದ ಅಪ್ಪಟ ಮಾನವೀಯ ವ್ಯಕ್ತಿತ್ವವನ್ನು ತೋರಿಸುತ್ತದೆ. ಮತ್ತೊಂದೆಡೆ ಆ ಕಾಲಘಟ್ಟದಲ್ಲಿ ಅತ್ಯಂತ ಕೆಳದರ್ಜೆಗೆ ಸೇರಿಸಲ್ಪಟ್ಟಿದ್ದ ಪಂಚಮರ ಏಳಿಗೆಗಾಗಿ, ವಿಮೋಚನೆಗಾಗಿ ಹಾಗೂ ಅವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕುದ್ಮುಲ್‌ ಪಿಜ್ಜ ಕೈಗೊಂಡ ಕ್ರಮಗಳು ಅವರೊಳಗಿದ್ದ ಸೈದ್ಧಾಂತಿಕ ಸ್ಪಷ್ಟತೆ ಮತ್ತು ಮಾನವೀಯ ಮೌಲ್ಯಗಳಿಗೆ ದ್ಯೋತಕವಾಗಿ ಕಾಣುತ್ತವೆ. ಜಾತಿ ವ್ಯವಸ್ಥೆಯ ಭಯಾನಕತೆ,,,,, ಅಧ್ಯಾಯದಲ್ಲಿ (ಪುಟ 72-80) ಲೇಖಕರು ಇದನ್ನು ದಾಖಲಿಸಿದ್ದಾರೆ.

 ಶೋಷಿತರ ಭವಿಷ್ಯದ ದೀವಿಗೆಯಾಗಿ,,,,,

  ಡಾ. ಬಿ. ಆರ್‌ ಅಂಬೇಡ್ಕರ್‌ ಜಾತಿ ವಿನಾಶಕ್ಕಾಗಿ, ಮೇಲ್ಜಾತಿಯ ದೌರ್ಜನ್ಯಗಳ ವಿರುದ್ಧ ಅಸ್ಪೃಶ್ಯರನ್ನು, ದಮನಿತರನ್ನು ಸಂಘಟಿಸುವ 40 ವರ್ಷಗಳಿಗೂ ಮುನ್ನವೇ ಕುದ್ಮುಲ್‌ ಪಿಜ್ಜ  ದಲಿತೋದ್ಧಾರದ ಆಲೋಚನೆಗಳನ್ನು ಸಮಾಜದಲ್ಲಿ ಬಿತ್ತಿರುವುದು ಚಾರಿತ್ರಿಕವಾಗಿ ಗಮನಿಸಬೇಕಾದ ಅಂಶ. ಸ್ವತಃ  ಗಾಂಧಿ ಮತ್ತು ಅಂಬೇಡ್ಕರ್‌ ಅವರೇ ರಂಗರಾವ್‌ ಅವರಿಂದ ಪ್ರಭಾವಿತರಾಗಿದ್ದರು ಎಂದು ಹೇಳಲಾಗುತ್ತದೆ. ಶಿಕ್ಷಣದಿಂದಲೇ ಸಾಮಾಜಿಕ ಉನ್ನತಿ ಸಾಧ್ಯ ಎಂಬ ಅಂಬೇಡ್ಕರ್‌ ಅವರ ಧ್ಯೇಯವಾಕ್ಯವನ್ನು, 19ನೆ ಶತಮಾನದ ಅಂಚಿನಲ್ಲೇ ಸಾಕಾರಗೊಳಿಸಲು ಯತ್ನಿಸಿದ ಕುದ್ಮುಲ್‌ ಪಿಜ್ಜ , ಮಹಾರಾಷ್ಟ್ರದಲ್ಲಿ ಫುಲೆ ದಂಪತಿಗಳ ಮಾದರಿಯಲ್ಲೇ ಪಂಚಮರಿಗಾಗಿ ಶಾಲೆಗಳನ್ನು ತೆರೆದು, ಹೆಣ್ಣುಮಕ್ಕಳನ್ನು ವಿದ್ಯಾರ್ಜನೆಗೆ ಉತ್ತೇಜಿಸಿರುವುದು ಹೆಮ್ಮೆಯ ವಿಚಾರ. ಈ ಹಾದಿಯಲ್ಲಿ ಫುಲೆ ಅವರಂತೆಯೇ ಸಾಂಪ್ರದಾಯಿಕ ಸಮಾಜದ ದೈಹಿಕ ದಾಳಿ, ಮೌಖಿಕ ಅಪಮಾನಗಳನ್ನೂ ಎದುರಿಸಿ ದಿಟ್ಟವಾಗಿ ನಿಂತಿದ್ದು ರಂಗರಾವ್‌ ಅವರ ಶ್ರೇಷ್ಠ ವ್ಯಕ್ತಿತ್ವದ ವೈಶಿಷ್ಟ್ಯ.

 ಅಪ್ಪಟ ಗಾಂಧಿವಾದಿ ಆಗಿದ್ದ ರಂಗರಾವ್‌ ಆವರು ಸರ್ವಧರ್ಮಗಳನ್ನೂ ಗೌರವಿಸುವ ಪರಂಪರೆಯನ್ನೇ ಅನುಸರಿಸಿ, ತಮ್ಮ ಡಿಸಿಎಂ ಶಾಲೆಯಲ್ಲಿ ಎಲ್ಲ ಧರ್ಮಗಳ ಜನರಿಗೂ ಮುಕ್ತ ಪ್ರವೇಶ, ಅವಕಾಶ ಸಮಾನ ಶಿಕ್ಷಣನ ಒದಗಿಸಿದ್ದು ಅವರ ವಿಶ್ವಮಾನವ ತತ್ವಕ್ಕೆ ನಿದರ್ಶನ. ಇದನ್ನೂ ದಾಟಿ ಕುದ್ಮುಲ್‌ ಪಿಜ್ಜ ಸ್ಮರಣೀಯರಾಗುವುದು, ವಿನೋಬಾ ಭಾವೆ ಅವರ ಭೂ ದಾನ ಚಳುವಳಿಯ ಕಲ್ಪನೆಯನ್ನು ಆ ಕಾಲದಲ್ಲೇ ಸಾಕಾರಗೊಳಿಸಿದ್ದು. ಪಂಚಮರಿಗೆ ಭೂಮಿ ಎನ್ನುವುದು ಮುಟ್ಟಲಾಗದ ಪವಿತ್ರ ವಸ್ತು ಎಂದು ಭಾವಿಸಲಾಗುತ್ತಿದ್ದ ಕಾಲಘಟ್ಟದಲ್ಲಿ ಪಂಚಮರಿಗೆ ಭೂ ಹಂಚಿಕೆಯನ್ನು ಮಾಡಿದ್ದು, ರಂಗರಾವ್‌ ಅವರ ಮೇರು ಸಾಧನೆಗಳಲ್ಲೊಂದು. ಇದರೊಟ್ಟಿಗೆ ಜೀತ ಪದ್ಧತಿಯ ವಿರುದ್ಧ ಹೋರಾಡಿ  ಈ ನಿಟ್ಟಿನಲ್ಲಿ ಜೀತದಾಳುಗಳಾಗಿದ್ದ ಅಸ್ಪೃಶ್ಯರಿಗೆ ಕರಕುಶಲ ಕಲೆಗಳಲ್ಲಿ, ಕೈಗಾರಿಕೆ, ಕೃಷಿಯಲ್ಲಿ ತರಬೇತಿ ಕೊಡುವ ಆಂದೋಲನವನ್ನೂ ಆರಂಭಿಸಿದ್ದರು.

ತಮ್ಮ ಜೀವಿತ ಕಾಲದ ಅಂತಿಮ ಘಟ್ಟದಲ್ಲಿ ಯಾವುದೇ ಸಾಮಾಜಿಕ ಸ್ಥಾನಮಾನ, ಹುದ್ದೆ, ಸಮ್ಮಾನಗಳನ್ನು ಅಪೇಕ್ಷಿಸದ ಕುದ್ಮುಲ್‌ ರಂಗರಾವ್‌ ಕೊನೆಗೆ ಮೊರೆ ಹೋಗಿದ್ದು ಸನ್ಯಾಸತ್ವಕ್ಕೆ.  ಚಿಕ್ಕಂದಿನಿಂದಲೇ ಅಪಾರ ದೈವಭಕ್ತರಾಗಿದ್ದ ರಂಗರಾವ್‌ , ಅದೇ ವೇಳೆ ಸಾಂಪ್ರದಾಯಿಕ ಸಮಾಜದ ಧಾರ್ಮಿಕ ವಿಧಿವಿಧಾನಗಳನ್ನು ಧಿಕ್ಕರಿಸಿದ್ದೂ ಒಂದು ವಿಶೇಷ. ಈಶ್ವರಾನಂದ ಸ್ವಾಮಿ ಎಂಬ ಹೆಸರಿನಲ್ಲಿ ದೀಕ್ಷೆ ಪಡೆದ ಕುದ್ಮುಲ್‌ ಪಿಜ್ಜ, ಕಾವಿಧಾರಿಯಾದ ಮಾತ್ರಕ್ಕೆ ತಮ್ಮ ಪೂರ್ವಾಶ್ರಮದ ತಾತ್ವಿಕ ನೆಲೆಗಳನ್ನು, ಜೀವನೋದ್ದೇಶಗಳನ್ನೂ ಮರೆಯಲಿಲ್ಲ ಎನ್ನುವುದು ವಿಶೇಷ. ಯಾವುದೇ ವ್ಯಕ್ತಿ ಸಮಾಜಮುಖಿಯಾಗಲು, ಶೋಷಿತ ವರ್ಗಗಳ ನೋವಿಗೆ ದನಿಯಾಗಲು, ಅಸ್ಪೃಶ್ಯತೆಯಂತಹ ಹೀನ ಆಚರಣೆಯ ವಿರುದ್ಧ ಹೋರಾಡಲು, ವೈಚಾರಿಕ ಪ್ರಜ್ಞೆಯನ್ನು ಹೊಂದಿರುವುದು ಮುಖ್ಯ .

 ಧರ್ಮ, ಅಧ್ಯಾತ್ಮದ ನೆರಳಿನಲ್ಲೇ ಈ ವೈಚಾರಿಕತೆಯನ್ನೂ ರೂಢಿಸಿಕೊಂಡು ತಮ್ಮ ಬದುಕು ಸವೆಸಿದ ಕುದ್ಮುಲ್‌ ರಂಗರಾವ್‌ ಅಲಿಯಾಸ್‌ ಕುದ್ಮುಲ್‌ ಪಿಜ್ಜ ಇದಕ್ಕೊಂದು ನಿದರ್ಶನ. ತಮ್ಮ ಕುಟುಂಬಕ್ಕಾಗಿ ಏನನ್ನೂ ಉಳಿಸದೆ, ತಮ್ಮ ಬದುಕಿನ ಹಾದಿಯ, ಅಲ್ಲಿ ಮಾಡಿದ ಸಾಧನೆಗಳ ಯಾವುದೇ ದಾಖಲೆಗಳನ್ನೂ ಉಳಿಸದೆ, ಅಜ್ಞಾತರಾಗಿಯೇ 1928ರ ಜನವರಿ 30ರಂದು ತಮ್ಮ 69ನೆ ವಯಸ್ಸಿನಲ್ಲಿ ಯಾತ್ರೆ ಮುಗಿಸಿದ ಕುದ್ಮುಲ್‌ ರಂಗರಾವ್‌ , ಶತಮಾನದ ನಂತರದಲ್ಲೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡುವ ಪ್ರಗತಿಶೀಲ ಮನಸ್ಸುಗಳಿಗೆ ಸ್ಪೂರ್ತಿಯ ಸೆಲೆಯಾಗಿರುವುದು, ಅವರ ಮೇರು ಸಾಧನೆಯ ದ್ಯೋತಕ. ಇಂದು ಗೋಪಾಲಸ್ವಾಮಿ ಐಯ್ಯರ್‌ ಮತ್ತು ಕುದ್ಮುಲ್‌ ರಂಗರಾವ್‌ ಮೇಲ್ಜಾತಿಯಲ್ಲಿ ಜನಿಸಿದ್ದರೂ, ಅಸ್ಪೃಶ್ಯರ ಏಳಿಗೆಗಾಗಿ, ಸಮಾಜದೊಳಗಿನ ಅಮಾನುಷ ಪದ್ಧತಿಗಳ ನಾಶಕ್ಕಾಗಿ ಹೋರಾಡಿದ ಮೇರು ಚೇತನಗಳಾಗಿ ನಮ್ಮ ನಡುವೆ ಉಸಿರಾಡುತ್ತಿದ್ದಾರೆ.

 ಕುದ್ಮುಲ್‌ ರಂಗರಾವ್‌ ಅವರ ಜೀವನಗಾಥೆಯನ್ನು ಸಾಂಪ್ರದಾಯಿಕ ಮಾದರಿಗಿಂತಲೂ ಭಿನ್ನ ರೀತಿಯಲ್ಲಿ, ಅವರನ್ನು ಕಾಣದಿದ್ದರೂ ಅವರ  ಬದುಕಿನ ಹೆಜ್ಜೆಗಳನ್ನು ಬಲ್ಲವರಾಗಿರುವ ಮರಿಮಗಳು ಮತ್ತು ಮರಿಮರಿಮಗ ಪ್ರೇಮಿ ಎಮ್‌ ರಾವ್‌ ಮತ್ತು ಪಾಂಡುರಂಗರಾವ್‌ ಅವರ ಮೂಲಕ ಕನ್ನಡಿಗರ ಮುಂದಿರಿಸಿರುರವ ವಿವೇಕ ರೈ ಅಭಿನಂದನಾರ್ಹರೂ. ಅಷ್ಟೇ ಅಭಿನಂದನೆ ಸಲ್ಲಬೇಕಿರುವುದು ಪುಸ್ತಕಕ್ಕೆ ವಿಶಿಷ್ಟ ರೀತಿಯ ಮುನ್ನುಡಿ ಬರೆದು, ಬಹುರೂಪಿ ಪ್ರಕಾಶನದ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿರುವ ಜಿ ಎನ್‌ ಮೋಹನ್‌ ಅವರು. ಈ ವಿಶಿಷ್ಟ ಕೃತಿಯನ್ನು ಬಯಾಗ್ರಫಿ ಎಂಬರ್ಥದಲ್ಲಿ ಓದದೆ, ಕುದ್ಮುಲ್ ರಂಗರಾವ್‌ ಎಂಬ ಮಹಾನ್‌ ಚೇತನದ ಹೆಜ್ಜೆಗುರುತುಗಳಾಗಿ ಓದಲು ಹೆಮ್ಮೆಯಾಗುತ್ತದೆ. ಈ ವೈಶಿಷ್ಟ್ಯಕ್ಕೆ ಕಾರಣರಾದ ಎಲ್ಲರೂ ಅಭಿನಂದನಾರ್ಹರು.

-೦-೦-೦-೦-

Tags: kudmal rangaraokudmul ranga raokudmul ranga rao information in kannadakudmul ranga rao memorialkudmul ranga rao photoskudmul ranga rao tulukudmul rangarao informationkudmul rangarao infromation in kannadaremembering kudmul ranga raosocial reformer kudmul ranag raosola ranga rao
Previous Post

ಲಂಚ ಪಡೆದು ಅಕ್ರಮ ಎಸಗಿದ ಮೂವರು ವೈದ್ಯರ ಅಮಾನತು

Next Post

‘ವಿಶ್ ಯು ಹ್ಯಾಪಿ ಬರ್ತಡೇ ಮೈ ಫ್ರೆಂಡ್’ – ಮೋದಿಗೆ ಜನ್ಮದಿನದ ಶುಭ ಕೋರಿದ ಡೊನಾಲ್ಡ್ ಟ್ರಂಪ್ 

Related Posts

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
0

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳಿಗೆ 78 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು. ಅವರು...

Read moreDetails

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

October 11, 2025

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

October 11, 2025

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

October 11, 2025
Next Post
‘ವಿಶ್ ಯು ಹ್ಯಾಪಿ ಬರ್ತಡೇ ಮೈ ಫ್ರೆಂಡ್’ – ಮೋದಿಗೆ ಜನ್ಮದಿನದ ಶುಭ ಕೋರಿದ ಡೊನಾಲ್ಡ್ ಟ್ರಂಪ್ 

‘ವಿಶ್ ಯು ಹ್ಯಾಪಿ ಬರ್ತಡೇ ಮೈ ಫ್ರೆಂಡ್’ - ಮೋದಿಗೆ ಜನ್ಮದಿನದ ಶುಭ ಕೋರಿದ ಡೊನಾಲ್ಡ್ ಟ್ರಂಪ್ 

Recent News

Top Story

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

by ಪ್ರತಿಧ್ವನಿ
October 11, 2025
Top Story

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

by ಪ್ರತಿಧ್ವನಿ
October 11, 2025
Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!
Top Story

Pradeep Eshwar: ಈ ರಾಜ್ಯದ ಫ್ಯೂಚರ್‌ ಪ್ರಿಯಾಂಕ್‌ ಖರ್ಗೆ ಸಾಹೇಬ್ರು ಮರೀಬೇಡಿ ಎಂದ ಪ್ರದೀಪ್‌ ಈಶ್ವರ್‌!

by ಪ್ರತಿಧ್ವನಿ
October 11, 2025
Top Story

ಅವಹೇಳನಕಾರಿ ಕಾಮೆಂಟ್‌ ಹಾಕಿದ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ಮೇಲೆ ಬಿತ್ತು ಕೇಸ್..

by ಪ್ರತಿಧ್ವನಿ
October 11, 2025
Top Story

150ಕೋಟಿ ಹಣ ಎಗುರಿಸಿದ ಸೈಬರ್‌ ವಂಚಕರ ಅರೆಸ್ಟ್..!!

by ಪ್ರತಿಧ್ವನಿ
October 11, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Santhosh Lad: ಕಟ್ಟಡ ಕಾರ್ಮಿಕರಿಗೆ 72 ಕೋಟಿ ವೆಚ್ಚ : ಸಚಿವ ಸಂತೋಷ್ ಲಾಡ್

October 11, 2025

CM Siddaramaiah: ಹಂಪನಾ ಅವರು ಸಮಾಜದಲ್ಲಿ ಬದಲಾವಣೆ ಬಯಸುವ ಸಾಹಿತಿ: ಸಿ.ಎಂ.ಸಿದ್ದರಾಮಯ್ಯ

October 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada