ಧರ್ಮಸ್ಥಳದ (Dharmasthala case) ವಿರುದ್ಧ ಆರೋಪಗಳ ಕುರಿತ ತನಿಖೆಗೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ (Basavaraja bommai) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಸ್ಐಟಿ (SIT) ರಚನೆ ಮಾಡಿರೋದು ದಕ್ಷತೆಯಿಂದ ಪ್ರಕರಣದ ತನಿಖೆಯನ್ನು ಶೀಘ್ರದಲ್ಲಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿ ಎಂದು.. ಆದ್ರೆ ನಿರೀಕ್ಷೆಗೆ ತಕ್ಕಂತೆ ಎಸ್ಐಟಿ ತನಿಖೆ ನಡೀತಿಲ್ಲ ಎಂದಿದ್ದಾರೆ.

ಧರ್ಮಸ್ಥಳ ಆರೋಪಗಳ ತನಿಖೆ ಪೊಲೀಸ್ ಪದ್ಧತಿ ಪ್ರಕಾರ ತನಿಖೆ ನಡೆಯುತ್ತಿಲ್ಲ. ಆ ಮಾಸ್ಕ್ ಮ್ಯಾನ್ ಚಿನ್ನಯ್ಯನ ದೂರು ಹುಸಿಯಾದ ನಂತರ ಬೇರೆ ಬೇರೆ ದೂರುಗಳು ದಾಖಲಾಗ್ತಿವೆ. ಈ ಪ್ರಕರಣದಲ್ಲಿ ಎಸ್ಐಟಿಗೆ ಉತ್ತರದಾಯಿತ್ವ ಇದೆ, ಜವಾಬ್ದಾರಿಯಿಡಿಯೋ. ಹೀಗಾಗಿ ಶೀಘ್ರದಲ್ಲೇ ವರದಿ ಕೊಡಲಿ, ಇದುವರೆಗೆ ಆಗಿರುವ ತನಿಖೆ ಬಗ್ಗೆ ವರದಿ ನೀಡಲಿ ಎಂದು ಆಗ್ರಹಿಸಿದ್ದಾರೆ.

ಎಸ್ಐಟಿ ತಂಡ ಧರ್ಮಸ್ಥಳದ ವಿರುದ್ಧ ಷಢ್ಯಂತ್ರ ಮಾಡಿದ ಮುಖ್ಯ ವ್ಯಕ್ತಿಗಳನ್ನೇ ಇನ್ನೂ ತನಿಖೆ ಮಾಡಿಲ್ಲ. ಹೀಗಾಗಿ ಪಿತೂರಿ ಮಾಡಿದವರಿಗೂ ಎಸ್ಐಟಿ ನಮ್ಮನ್ನು ಮುಟ್ಟಲ್ಲ ಎಂಬ ಧಿರ ಬಂದಿದೆ. ಅದಕ್ಕಾಗಿಯೇ ಅವರು ಹೇಳಿಕೆಗಳನ್ನು ಕೊಡ್ತಿದ್ದಾರೆ ಎಂದಿದ್ದಾರೆ.
ಇದನ್ನೆಲ್ಲಾ ಗಮನಿಸಿದ್ರೆ ಎಸ್.ಐ.ಟಿಗೆ ರಾಜಕೀಯ ಒತ್ತಡವಿದೆ, ಷಢ್ಯಂತ್ರ ಮಾಡಿದವರನ್ನು ಮುಟ್ಟಬೇಡಿ ಎಂಬ ಒತ್ತಡವಿದೆ ಎಂಬುದು ಸ್ಪಷ್ಟವಾಗುತ್ತದೆ. ಇದುವರೆಗೂ ಎಸ್.ಐ.ಟಿ ಯಾರನ್ನೂ ಬಂಧಿಸದೇ ಕೇವಲ ವಿಚಾರಣೆ ಮಾತ್ರ ಮಾಡ್ತಿದೆ. ಹೀಗಾಗಿ ಇಲ್ಲಿವರೆಗೆ ಆಗಿರುವ ತನಿಖೆಯ ವರದಿಯನ್ನು ಎಸ್ಐಟಿ ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದಾರೆ.



