ಮರು ಜಾತಿಗಣತಿ (Caste census) ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿರುವ ಹಿನ್ನಲೆ, ಸಮೀಕ್ಷೆ (Survey) ವೇಳೆ ಧರ್ಮದ ಕಾಲಂ ನಲ್ಲಿ ನಾಸ್ತಿಕ (Atheist) ಎಂದು ಬರೆಸಲು ಅವಕ್ಷ ನೀಡಿರುವುದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ (Shivaraj tangadagi), ದೇವರನ್ನು ನಂಬದವರು ಇದ್ದಾರೆ..ನಂಬದವರೂ ಇದ್ದಾರೆ. ಇದು ವಿವಾದ ಯಾಕೆ ಆಗುತ್ತೆ? ಇದು ಪ್ರಜಾಪ್ರಭುತ್ವ ವ್ಯವಸ್ಥೆ, ನಾಸ್ತಿಕರು ಇಲ್ಲ ಅಂತೀರಾ ಇದ್ದಾರಲ್ಲ..ಇದು ಬಿಜೆಪಿ ಸರ್ಕಾರ ಅಲ್ಲ, ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವ ಸರ್ಕಾರ.ಈ ಸರ್ಕಾರದಲ್ಲಿ ಎಲ್ಲರೂ ಸರ್ವ ಸ್ವತಂತ್ರರು ಎಂದಿದ್ದಾರೆ.
ಜಾತಿ ಗಣತಿ ಸಮೀಕ್ಷೆ ಸಂದರ್ಭದಲ್ಲಿ ಕೆಲವು ನಾಸ್ತಿಕರು ಅಂತ ಹೇಳಿಕೊಳ್ಳುತ್ತಾರೆ. ಕೆಲವರು ಜಾತಿ ಗೊತ್ತಿಲ್ಲ ಅಂತಾನೂ ಹೇಳಿದ್ದಾರೆ. ಬಿಜೆಪಿಯವರ ಎಲ್ಲಾ ಆಗ್ರಹಗಳನ್ನು ಕೇಳೋದಕ್ಕಾಗಲ್ಲ.ಯಾರು ಏನು ಬರೆಸಬೇಕು ಅದನ್ನ ಬರೆಸಲು ಸರ್ವ ಸ್ವತಂತ್ರರಿದ್ದಾರೆ ಎಂದು ಕುಟುಕಿದ್ದಾರೆ.
ಇನ್ನು ಮತಾಂತರ ಆದವರನ್ನ ಕ್ರಿಶ್ಚಿಯನ್ ಅಂತಲೇ ನಿರ್ಧರಿಸಲಾಗತ್ತೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ, ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ ,ಅವರ ಹೇಳಿಕೆಯನ್ನು ನಾವು ಸ್ವಾಗತ ಮಾಡುತ್ತೇವೆ. ಹಿಂದಿನ ಕೆಲವು ಸಮಸ್ಯೆಗಳಿಂದ ಕೆಲ ತಿದ್ದುಪಡಿಗಳನ್ನು ಮಾಡಿದ್ದೇವೆ.ಇದು ಎಲ್ಲರಿಗೂ ಅನುಕೂಲವಾಗಬೇಕು. ಯಾರಿಗೂ ಅನಾನುಕೂಲ ಆಗಬಾರದು ಎಂದಿದ್ದಾರೆ.





