ಬೋವಿ ನಿಗಮದ (Bovi corporation) ಅಧ್ಯಕ್ಷರ ಮೇಲೆ ಕಮೀಷನ್ ಪಡೆದ ಆರೋಪ ಕೇಳಿಬಂದಿರುವ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ(Cm Siddaramaiah) ತೀವ್ರ ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಗೆ (Ravi kumar) ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಇಂದು ಅಥವಾ ನಾಳೆ ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್ ರಾಜೀನಾಮೆ ನೀಡುವ ಸಾಧ್ಯತೆಯಿದೆ.ಭೂ ಒಡೆತನ ಯೋಜನೆ ಸಂಬಂಧ ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.

ಬೋವಿ ನಿಗಮದಿಂದ ಆ ಸಮುದಾದವರಿಗೆ ಒಂದು ಎಕರೆಗೆ 25 ಲಕ್ಷ ಸಹಾಯಧನ ನೀಡಲಾಗುತ್ತದೆ. ಆದ್ರೆ ಸಹಾಯಧನ ನೀಡಲು ಐದು ಲಕ್ಷ ಲಂಚಕ್ಕೆ ನಿಗಮದ ಅಧ್ಯಕ್ಷ ರವಿ ಕುಮಾರ್ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ.











