ಬಿಜೆಪಿಯಿಂದ ಧರ್ಮಸ್ಥಳ ಚಲೋ (Dharmasthala case) ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank kharge) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು (Bjp) ದೆಹಲಿ ಚಲೋ ಕೂಡಾ ಮಾಡಲಿ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಇವೆಲ್ಲ ಮಾಡ್ತಿದ್ದಾರೆ ಎಂದು ಬಿಜೆಪಿ ಹೋರಾಟದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಯಾರು?ತಿಮರೋಡಿ ಆರೆಸೆಸ್ ಮೂಲದ ವ್ಯಕ್ತಿ, ಗಿರೀಶ್ ಮಟ್ಟಣ್ಣನವರ್ ಬಿಜೆಪಿಯಿಂದ ಗುರುಮಿಠಲ್ ಅಭ್ಯರ್ಥಿ ಆಗಿದ್ದವರು. ಇದು ಪಕ್ಕಾ RSS ವಿರುದ್ಧ RSS ಹೋರಾಟ. ಬಿಜೆಪಿಯವರಿಗೆ ಯಾವ ಆರೆಸೆಸ್ ನವ್ರಿಗೆ ತಲೆ ಬಾಗಬೇಕು ಅಂತ ಗೊತ್ತಾಗ್ತಿಲ್ಲ.ಆರೆಸೆಸ್ ಬಣಗಳಿಗೆ ಖುಷಿ ಪಡಿಸಲು ಬಿಜೆಪಿಯವ್ರು ಇದೆಲ್ಲ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಯವರು ಕನ್ನಡಿಗರ ಪರ ದೆಹಲಿ ಚಲೋ ಮಾಡಲಿ, ಹೋಗಿ ನ್ಯಾಯ ಕೇಳಲಿ..ರಾಜ್ಯಕ್ಕೆ ಸಿಗಬೇಕಾದ ಅನುದಾನ ಬಗ್ಗೆ ಹೋಗಿ ಕೇಳಲಿ.ಧರ್ಮಸ್ಥಳ ಚಲೋ ಮಾತ್ರ ಮಾಡೋದಲ್ಲ ದೆಹಲಿ ಚಲೋ ಕೂಡಾ ಮಾಡಲಿ.ಬಿಜೆಪಿಯವರದ್ದು ಎಲ್ಲ ನಾಟಕ.ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಿದರೆ ಏನ್ ತಪ್ಪು? ಹಿಂದೆ ನಿಸಾರ್ ಅಹಮದ್ ಉದ್ಘಾಟಿಸಲಿಲ್ವಾ? ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಈ ರೀತಿ ರಾಜಕೀಯ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.