ಭಾರತ (India) ಮತ್ತು ಪಾಕಿಸ್ತಾನದ (Pakistan) ನಡುವಿನ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ಮತ್ತು ತೆರಿಗೆ ನೀತಿಯ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಮಾತನಾಡಿದ್ದಾರೆ. ಈ ಬಗ್ಗೆ ನಾನು ಒಬ್ಬ ಅದ್ಭುತ ವ್ಯಕ್ತಿ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದೇನೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯ ಬಲ ನಾನು ನಿಮ್ಮ ಮತ್ತು ಪಾಕಿಸ್ತಾನದ ನಡುವೆ ಏನು ನಡೆಯುತ್ತಿದೆ ಎಂದು ವಿಚಾರಿಸಿದೆ. ನಂತರ ನಾನು ಪಾಕಿಸ್ತಾನದೊಂದಿಗೆ ವ್ಯಾಪಾರದ ಬಗ್ಗೆ ಮಾತನಾಡುತ್ತಿದ್ದೇನೆ. ಪಾಕಿಸ್ತಾನ ಮತ್ತು ಭಾರತದ ನಡುವಿನ ದ್ವೇಷವು ಅಗಾಧವಾಗಿತ್ತು. ಇದು ಬಹಳ ಸಮಯದಿಂದ ನಡೆಯುತ್ತಿದೆ, ನೂರಾರು ವರ್ಷಗಳಿಂದ .. ಎಂದು ಹೇಳಿದ್ದಾರೆ.

ಹೀಗಾಗಿ ನಾನು ಭಾರತ ಮತ್ತು ಪಾಕಿಸ್ತಾನದ ಜೊತೆಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಬಯಸುವುದಿಲ್ಲ…ನೀವು ಪರಮಾಣು ಯುದ್ಧದಲ್ಲಿ ಕೊನೆಗೊಳ್ಳಲಿದ್ದೀರಿ…ನಾಳೆ ನನಗೆ ಮತ್ತೆ ಕರೆ ಮಾಡಿ, ಆದರೆ ನಾವು ನಿಮ್ಮೊಂದಿಗೆ ಯಾವುದೇ ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ, ನಾವು ನಿಮ್ಮ ಮೇಲೆ ತುಂಬಾ ಹೆಚ್ಚಿನ ಸುಂಕಗಳನ್ನು ವಿಧಿಸುತ್ತೇವೆ ಎಂದು ಹೇಳಿರುವೆ ಎಂದಿದ್ದಾರೆ.
ತೆರಿಗೆಯ ಮೊತ್ತ ಕೇಳಿದರೆ ನಿಮ್ಮ ತಲೆ ತಿರುಗುತ್ತದೆ. ಅಷ್ಟು ದೊಡ್ಡ ತೆರಿಗೆಯನ್ನು ವಿಧಿಸಲಾಗುವುದು. ಸದ್ಯಕ್ಕೆ ಯಾವ ಸಂದರ್ಭದಲ್ಲಿ ಏನು ಸಂಭವಿಸಲಿದೆಯೋ ತಿಳಿದಿಲ್ಲ. ಆದ್ರೆ ಯಾವುದೇ ಅವಾಂತರಗಳಿಗೆ ನಾವು ಆಸ್ಪದ ನೀಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.












