ಆ್ಯಪಲ್ ಕಂಪನಿ (Apple Company) ಬೆಂಗಳೂರಿನ ಮಿನ್ಸ್ಕ್ ಸ್ಕ್ವೇರ್‌ನಲ್ಲಿ ಹೊಸ ಕಚೇರಿಯನ್ನು 2.7 ಲಕ್ಷ ಚದರ ಅಡಿ ಸ್ಥಳವನ್ನು 10 ವರ್ಷಗಳ ಕಾಲ ಲೀಸ್‌ಗೆ (Lease) ಪಡೆದಿದ್ದು, ತಿಂಗಳಿಗೆ 6.3 ಕೋಟಿ ರೂ. ಬಾಡಿಗೆ (Rent) ಪಾವತಿಸಲಿದೆ ಎಂದು ಡೇಟಾ ಅನಾಲಿಟಿಕ್ಸ್ ಸಂಸ್ಥೆ ಪ್ರಾಪ್‌ಸ್ಟ್ಯಾಕ್ ತಿಳಿಸಿದೆ.

ಬೆಂಗಳೂರಿನ ವಸಂತ ನಗರದ ಎಂಬೆಸಿ ಜೆನಿತ್ ಕಟ್ಟಡದ 5 ರಿಂದ 13ನೇ ಮಹಡಿಯಲ್ಲಿ ನೂತನ ಆಪಲ್ ಕಚೇರಿಯಿದೆ(Apple Company). ಈ ಎಲ್ಲ ಮಹಡಿಗಳಿಗೆ ಕಂಪನಿಯು ಪಾರ್ಕಿಂಗ್, ನಿರ್ವಹಣಾ ಶುಲ್ಕಾ ಸೇರಿದಂತೆ ಮಾಸಿಕ 6.31 ಕೋಟಿ ರೂ.ಗಳ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ.

ಪ್ರತಿ ಚದರ ಅಡಿಗೆ 235 ರೂ. ಬಾಡಿಗೆ ಬೀಳಲಿದೆ. 2024-25ರ ಆರ್ಥಿಕ ವರ್ಷದಲ್ಲಿ ಆ್ಯಪಲ್ ಕಂಪನಿ ಸುಮಾರು 1.5 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್‌ಗಳನ್ನು ರಫ್ತು ಮಾಡಿದೆ.

ಎಂಬಸಿ ಗ್ರೂಪ್‌ನಿಂದ (Embassy Group) ಕಾರ್ ಪಾರ್ಕಿಂಗ್ ಸ್ಥಳ ಸೇರಿದಂತೆ ಬಹು ಮಹಡಿ ಕಟ್ಟಡವನ್ನು ಆ್ಯಪಲ್ ಕಂಪನಿ (Apple Company) 10 ವರ್ಷಗಳ ಕಾಲ ಗುತ್ತಿಗೆಗೆ ಪಡೆದುಕೊಂಡಿದೆ. ಆ್ಯಪಲ್ ಕಂಪನಿ (Apple Company) 31.57 ಕೋಟಿ ರೂ. ಭದ್ರತಾ ಠೇವಣಿ ಇಟ್ಟಿದೆ. ವಾರ್ಷಿಕ ಬಾಡಿಗೆ 4.5%ರಷ್ಟು ಹೆಚ್ಚಳವಾಗಲಿದೆ. ಈ ವರ್ಷದ ಏಪ್ರಿಲ್ 3ರಿಂದ ಲೀಸ್ ಪ್ರಾರಂಭವಾಗಿದ್ದು, ಜುಲೈನಲ್ಲಿ ನೋಂದಾಯಿಸಲಾಗಿದೆ. ಆಪಲ್ 1.5 ಕೋಟಿ ರೂ.ಗಳ ಸ್ಟಾಂಪ್ ಡ್ಯೂಟಿಯನ್ನು ಪಾವತಿಸಿದೆ ಎಂದು ದಾಖಲೆಗಳು ಬಹಿರಂಗಪಡಿಸಿವೆ.