
ಧರ್ಮಸ್ಥಳದ (Dharmasthala) ಬೆಳವಣಿಗೆಗಳ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ ವಿಜಯೇಂದ್ರ (BY Vijayendra) ಮಾತನಾಡಿದ್ದು, ಇದೇ ಭಾನುವಾರ ನಮ್ಮ ಶಾಸಕರು, ಪರಿಷತ್ ಸದಸ್ಯರು ಧರ್ಮಸ್ಥಳ ಭೇಟಿ ಕೊಡ್ತೇವೆ. ಮಂಜುನಾಥೇಶ್ವರನ ದರ್ಶನ ಪಡೆದು ಬರ್ತೇವೆ ಎಂದು ಹೇಳಿದ್ದಾರೆ.

ನಾವು ಪ್ರಕರಣದಲ್ಲಿ ಎಂಟ್ರಿ ಆಗಿಲ್ಲ.ನಾವು ಬಿಜೆಪಿ ಕಾರ್ಯಕರ್ತರಾಗಿ ಹೋಗ್ತಿಲ್ಲ, ಮಂಜುನಾಥನ ಭಕ್ತರಾಗಿ ಅಲ್ಲಿಗೆ ಹೋಗ್ತಿದ್ದೇವೆ.ನಮ್ಮ ನಿಲುವು ಸ್ಪಷ್ಟ, ಎಸ್ಐಟಿ ತನಿಖೆ ಬೇಗ ಮುಗೀಬೇಕು, ಹೀಗೇ ಎಳೆದುಕೊಂಡು ಹೋಗೋದು ಸರಿಯಲ್ಲ, ಗೊಂದಲಗಳಿಗೆ ಬೇಗ ತೆರೆ ಬೀಳಬೇಕು ಎಂದಿದ್ದಾರೆ.

ಇನ್ನು ತನಿಖೆ ಹಿಂದೆ ಎಸ್.ಡಿ.ಪಿ.ಐ ಗಳಂಥ ಸಮಾಜಘಾತುಕ ಸಂಘಟನೆಗಳ ಪಿತೂರಿ ನಡೀತಿದೆ. ಆ ವಿಚಾರದ ಬಗ್ಗೆ ಯೋಚನೆ ಮಾಡ್ತೀವಿ ಎಂದಿದ್ದಾರೆ. ನಾವು ಧರ್ಮಸ್ಥಳಕ್ಕೆ ಭೇಟಿ ಕೊಟ್ಟು ಮಂಜುನಾಥನ ದರ್ಶನ ಪಡೆಯಲು ಮಾತ್ರ ಹೋಗುತ್ತಿದ್ದು, ರಾಜಕೀಯವಿಲ್ಲ ಎಂದಿದ್ದಾರೆ.
ಇದೇ ವೇಳೆ ಮಾಜಿ ಸಚಿವ ರಾಜಣ್ಣ ವಿಚಾರವಾಗಿ ಮಾತನಾಡಿದ ಅವರು, ರಾಜಣ್ಣ ಅವರನ್ನು ವಜಾ ಮಾಡಿರುವ ಬಗ್ಗೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಉತ್ತರ ಕೊಡಬೇಕಾಗುತ್ತದೆ. ಸಿಎಂ ಸದನದಲ್ಲಿ ಕೊಡ ಸ್ಪಷ್ಟ ಉತ್ತರ ಕೊಡಬೇಕಾಗುತ್ತದೆ ಎಂದಿದ್ದಾರೆ.