ಮೂಡಾ ಹಗರಣ (Muda case) ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿವೃತ್ತ ನ್ಯಾಯಮೂರ್ತಿ ಪಿ.ಎನ್ ದೇಸಾಯಿ ವರದಿ (Desai report) ಸಲ್ಲಿಕೆ ಮಾಡಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ (Snehamayi krishna), ದೇಸಾಯಿ ಆಯೋಗ ಕ್ಲಿನ್ ಚಿಟ್ ಕೊಡಲು ಹೇಗೆ ಸಾಧ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲು ದೇಸಾಯಿ ವರದಿಯನ್ನು ಬಹಿರಂಗ ಪಡಿಸಲಿ.ದೇಸಾಯಿ ಆಯೋಗ ಏನು ವರದಿ ಕೊಟ್ಟಿದೆ ಅನ್ನೋ ಮಾಹಿತಿ ಇಲ್ಲ.ಕೆಲ ಪತ್ರಿಕೆಗಳಲ್ಲಿ ಮೂಡಾ ಹಗರಣದಲ್ಲಿ ಸಿಎಂ ಗೆ ಕ್ಲಿನ್ ಚಿಟ್ ಅಂತ ವರದಿ ಮಾಡಿವೆ. ಈ ಕೂಡಲೇ ಸರ್ಕಾರ ದೇಸಾಯಿ ಆಯೋಗದ ವರದಿ ಬಿಡುಗಡೆ ಮಾಡಬೇಕು ಎಂದು ಮೈಸೂರಿನಲ್ಲಿ ದೂರುದಾರ ಸ್ನೇಹಮಯಿ ಕೃಷ್ಣ ಹೇಳಿಕೆ ನೀಡಿದ್ದಾರೆ.

ಮುಡಾ ಕೇಸ್ ನಲ್ಲಿ ಲೋಕಾಯುಕ್ತದಲ್ಲಿ ಈ ಹಿಂದೆ ಕ್ಲಿನ್ ಚೀಟ್ ಕೊಟ್ರು.ಇಡಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಹಿನ್ನಡೆ ಆಗಲ್ಲ..ತನಿಖೆ ಇನ್ನೂ ನಡೆಯುತ್ತಿದೆ.ನಾನು ದಾಖಲೆ ಇಟ್ಟುಕೊಂಡು ಮಾತನಾಡುತ್ತಿದ್ದೇನೆ.ಯಾರು ಬೇಕಾದ್ರೂ ಚರ್ಚೆಗೆ ಬರಲಿ.ತಡವಾಗಬಹುದು ಆದ್ರೆ ಮೂಡಾ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಆಗೇ ಆಗತ್ತೆ.ಮೊದಲು ದೇಸಾಯಿ ಆಯೋಗದ ವರದಿ ಬಹಿರಂಗ ಪಡಿಸಿ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಆಗ್ರಹಿಸಿದ್ದಾರೆ.












