
ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟ (Mass burials) ಆರೋಪದ ಕೇಸ್ ಸಂಬಂಧಪಟ್ಟಂತೆ ಸಾಕಷ್ಟು ಚರ್ಚೆಯ ನಂತರ ಅಂತಿಮವಾಗಿ ರಾಜ್ಯ ಸರ್ಕಾರ ಎಸ್.ಐ.ಟಿ (SIT) ರಚನೆಗೆ ಅಸ್ತು ಎಂದಿದೆ. ನಾಲ್ಕು ಪೊಲೀಸ್ ಅಧಿಕಾರಿಗಳ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.ಹಾಗಿದ್ರೆ ಎಸ್‌ಐಟಿಯಲ್ಲಿ ಯಾರಿದ್ದಾರೆ ಎಂಬುದನ್ನ ನೋಡೋದಾದ್ರೆ..!

ರಾಜ್ಯ ಪೊಲೀಸ್ ಇಲಾಖೆಯ ಹಿರಿಯ ಮತ್ತು ಅನುಭವ ಇರುವ ಡಾಕಾಹ ಅಧಿಕಾರಿಗಳನ್ನು ಈ ತಂಡದಲ್ಲಿ ಸೇರಿಸಲಾಗಿದೆ. ಆ ತಂಡ ಈ ಕೆಳಗಿನಂತಿದೆ.

1. ಪ್ರಣವ ಮೊಹಾಂತಿ, IPS, ಮುಖ್ಯಸ್ಥರು
ಪೊಲೀಸ್ ಮಹಾ ನಿರ್ದೇಶಕರು
ಆಂತರಿಕ ಭದ್ರತಾ ವಿಭಾಗ, ಬೆಂಗಳೂರು
– 1994 ಬ್ಯಾಂಚ್ ನ ಐಪಿಎಸ್ ಅಧಿಕಾರಿ

2. ಅನುಚೇತ್, IPS, ಸದಸ್ಯರು
ಉಪ ಪೊಲೀಸ್ ಮಹಾ ನಿರೀಕ್ಷಕರು
ನೇಮಕಾತಿ, ಬೆಂಗಳೂರು
– 2009ರ ಬ್ಯಾಚ್ ನ ಐಪಿಎಸ್ ಅಧಿಕಾರಿ
– 2017ರಲ್ಲಿ ನಡೆದಿದ್ದ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಕೇಸ್ ನ ಎಸ್.ಐ.ಟಿ ಮುಖ್ಯಸ್ಥ

3. ಸೌಮ್ಯಲತ, IPS, ಸದಸ್ಯರು
ಉಪ ಪೊಲೀಸ್ ಆಯುಕ್ತರು
CAR, ಕೇಂದ್ರಸ್ಥಾನ, ಬೆಂಗಳೂರು ನಗರ
ಮುನಿರತ್ನ ವಿರುದ್ಧ ದಾಖಲಾಗಿದ್ದ ಅತ್ಯಚಾರ ಕೇಸ್ ನ ಎಸ್.ಐ.ಟಿ ಟೀಂ ಸದಸ್ಯೆ

4. ಜಿತೇಂದ್ರ ಕುಮಾರ್, IPS, ಸದಸ್ಯರು
ಪೊಲೀಸ್ ಅಧೀಕ್ಷಕರು
ಆಂತರಿಕ ಭದ್ರತಾ ವಿಭಾಗ, ಬೆಂಗಳೂರು
– 2019ರ ಬ್ಯಾಚ್ ನ ಐಪಿಎಸ್ ಅಧಿಕಾರಿ