ಜಿಟಿಟಿಸಿ(GTTC) ತರಬೇತಿ ಪಡೆಯುವವರಿಗೆ ಒಳ್ಳೆಯ ಭವಿಷ್ಯವಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ಸ್ ನಲ್ಲಿ, ಕಂಪ್ಯೂಟರ್ ಸೈನ್ಸ್ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಇದರಲ್ಲಿ ಡಿಪ್ಲೋಮಾ ಮಾಡಿದರೆ ಎಂಜನೀಯರಿಂಗ್ ಕೂಡ ಮಾಡಬಹುದು ಎಂದು ಮಾಜಿ ಮುಖ್ಯಮಂತಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraja Bommai) ಹೇಳಿದರು.

ಅವರು ಇಂದು ಹಾವೇರಿ ತಾಲೂಕಿನ ನಲೋಗಲ್ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಜಿಟಿಟಿಸಿ ತರಬೇತಿ ಸಂಕೀರ್ಣದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಹಾವೇರಿಗೆ ಎಂಜನೀಯರಿಂಗ್ ಕಾಲೇಜು ಮಾಡಿದ್ದೇವೆ. ತಾಂತ್ರಿಕವಾಗಿ ಎಂಜನಿಯರಿಂಗ್ ಕಾಲೇಜು ಮಾಡಿದ್ದರೂ, ತರಬೇತಿ ಪಡೆದಿರುವ ಯುವಕರ ಅವಶ್ಯಕತೆ ಇದೆ. ಅದಕ್ಕೆ ಐಟಿಐ ಹಾಗೂ ಜಿಟಿಟಿಸಿ ತರಬೇತಿ ಅಗತ್ಯವಿದೆ. ಯಾರು ಜಿಟಿಟಿಸಿ ಮಾಡುತ್ತಾರೊ ಅವರಿಗೆ ಒಳ್ಳೆಯ ಭವಿಷ್ಯವಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ಸ್ ನಲ್ಲಿ ಕಂಪ್ಯೂಟರ್ ಸೈನ್ಸ್ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಇದರಲ್ಲಿ ಡಿಪ್ಲೋಮಾ ಮಾಡಿದರೆ ಎಂಜನೀಯರಿಂಗ್ ಕೂಡ ಮಾಡಬಹುದು ಎಂದರು.

ಇದರಲ್ಲಿ ಟೂಲ್ ಆಂಡ್ ಡೈಮೇಕಿಂಗ್ ಮುಖ್ಯವಾಗಿದೆ. ಯಾರು ಟೂಲ್ ಆಂಡ್ ಡೈ ಮೇಕಿಂಗ್ ಕಲಿಯುತ್ತೀರಿ ಅವರಿಗೆ ಉತ್ತಮ ಅವಕಾಶಗಳಿವೆ. ಇದನ್ನು ನಾನು ನನ್ನ ವಯಕ್ತಿಕ ಅನುಭವದಲ್ಲಿ ಹೇಳುತ್ತಿದ್ದೇನೆ. ನಾನು 1972 ರಲ್ಲಿ ಎಂಜಿನೀಯರಿಂಗ್ ಮುಗಿಸಿದಾಗ ಕೆಲಸ ಸಿಕ್ಕಿರಲಿಲ್ಲ. ನಾನು ಬೆಂಗಳೂರಿನ ರಾಜಾಜಿನಗರದ ಜೆಟಿಟಿಸಿಯಲ್ಲಿ ಆರು ತಿಂಗಳು ತರಬೇತಿ ಪಡೆದೆ. ಆಗ ಟಾಟಾ ಮೋಟರ್ಸ್‌ನಲ್ಲಿ ಎಂಜನೀಯರ್‌ಗೆ ಕೆಲಸಕ್ಕೆ ಕರೆದಿದ್ದರು. ಇಲ್ಲಿ ಮಾಡಿದ ತರಬೇತಿಯಿಂದ ನನಗೆ ಟಾಟಾ ಮೋಟರ್ಸ್‌ನಲ್ಲಿ ಕೆಲಸ ಸಿಕ್ಕಿತು. ಅಲ್ಲಿ ಕೆಲಸ ಸಿಕ್ಕರೆ ಈಗಿನ ಐಐಟಿಯಲ್ಲಿ ಅವಕಾಶ ಸಿಕ್ಕಹಾಗೆ, ಜಿಟಿಟಿಸಿ ಕೋರ್ಸ್ ಅಷ್ಟು ಮಹತ್ವದ್ದಿದೆ. ವಿದ್ಯಾರ್ಥಿಗಳಿಗೆ ಇದು ಅರ್ಥವಾದರೆ ಉತ್ತಮ ರೀತಿಯಲ್ಲಿ ಕಲಿಯುತ್ತಾರೆ. ನಾನು ಮುಖ್ಯಮಂತ್ರಿಯಾಗಿದ್ದಾಗ ನೆಲೊಗಲ್ ಹಾಗೂ ಶಿಗ್ರಾವಿಗೆ ಎರಡು ಜಿಟಿಟಿಸಿ ಮಂಜೂರು ಮಾಡಿದ್ದೆ. ಈಗಿನ ಸರ್ಕಾರ ಅದನ್ನು ಮುಂದುವರೆಸಿ ಆರಂಭ ಮಾಡಿರುವುದು ಸಂತಸ ತಂದಿದೆ. ಇದರಿಂದ ಹಾವೇರಿ ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಇದರ ಅನುಕೂಲ ಪಡೆದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಹೆಚ್ಚಿನ ವಿದ್ಯಾರ್ಥಿಗಳು ಸೇರಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ. ಶರಣ ಪ್ರಕಾಶ ಪಾಟೀಲ್ ಅವರು 30 ಕೋಟಿ ರೂ. ಕೊಟ್ಟಿದ್ದಾರೆ ಎಂದು ಹೇಳಿದರು.

ಈಗ ತಾಂತ್ರಿಕ ಜ್ಞಾನ ಅತ್ಯಂತ ಮುಖ್ಯವಾಗಿದೆ. ಭಾರತ ದೇಶ ಅಭಿವೃದ್ಧಿಯಾಗಬೇಕಾದರೆ ತಾಂತ್ರಿಕ ಕೌಶಲ್ಯ ಹೊಂದಿರುವ ಮಾನವ ಸಂಪನ್ಮೂಲ ಬೇಕು. ಒಂದು ಕಾಲದಲ್ಲಿ ಜನಸಂಖ್ಯೆ ಭಾರ ಅಂತಿದ್ದರು. ನಮ್ಮ ಪ್ರಧಾನಿಗಳು ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಅದಕ್ಕಾಗಿ ಪ್ರತ್ಯೇಕ ಇಲಾಖೆಯನ್ನು ಆರಂಭಿಸಿದ್ದಾರೆ. ಕೇಂದ್ರ ಸಂಸದೀಯ ಕೌಶಲ್ಯಾಭಿವೃದ್ಧಿ ಸಮಿತಿಗೆ ನಾನು ಅಧ್ಯಕ್ಷನಾಗಿದ್ದು ಕೇಂದ್ರದಿಂದ ಆಗತ್ಯ ನೆರವು ಕೊಡಿಸಲು ಸಿದ್ಧನಿದ್ದೇನೆ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಶರಣಪ್ರಕಾಶ ಪಾಟೀಲ್(Dr. Sharana Prakash Patil) , ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್(Shivananda Patil), ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ(Rudrappa Lamani), ಮಾಜಿ ಶಾಸಕರಾದ ಎಸ್ ಆರ್ ಪಾಟೀಲ್(S R Patil), ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ (DC Dr. Vijayamahantesh danamma)ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ದಿನೇಶ ಕುಮಾರ ವೈ.ಕೆ(Dinesh Kumar Y K) , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎಫ್.ಎನ್ ಗಾಜಿಗೌಡ್ರ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಂಜೀವಕುಮಾರ ನೀರಲಗಿ, ಎಂ.ಎಂ ಮೈದೂರ , ಪ್ರಾಚಾರ್ಯರಾದ ಅಶ್ವಿನ ಕುಮಾರ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.







