ದೇವನಹಳ್ಳಿಯಲ್ಲಿ (Devanahalli) ಭೂಸ್ವಾದೀನ ವಿರೋಧಿಸಿ ಪ್ರತಿಭಟನೆಗೆ ಮುಂದಾಗಿರುವ ರೈತರ ಮನವೊಲಿಕೆಗೆ ಇಂದು ಸಿಎಂ ಸಿದ್ದರಾಮಯ್ಯ (cm siddaramaiah) ಮುಂದಾಗಿದ್ದಾರೆ. ಇಂದು ಬೆಳಗ್ಗೆ ೧೧.೩೦ಕ್ಕೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ರೈತರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ.

ಏರೋಸ್ಪೇಸ್ ಪಾರ್ಕ್‌ಗೆ 1,777 ಎಕರೆ ಭೂಸ್ವಾಧೀನಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ಖುದ್ದು ಸಿಎಂ ಸಭೆಗೆ ಮುಂದಾಗಿದ್ದಾರೆ. ಉದ್ದೇಶಿತ ಹೈಟೆಕ್ ಡಿಫೆನ್ ಮತ್ತು ವಿರೋಸ್ಪೇಸ್ ಪಾರ್ಕ್ ಅಭಿವೃದಿಗಾಗಿ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ ೧೩ ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರ ಮುಂದಾಗಿದೆ.

ಇದನ್ನ ಖಂಡಿಸಿ ಪ್ರತಿಭಟಿಸುತ್ತಿರುವ ರೈತರ ಮನವೊಲಿಸಲು ಸಭೆ ನಡೆಸಲಿರುವ ಸಿಎಂ, ನಿನ್ನೆ ಕೂಡ ರೈತರೊಂದಿಗಿನ ಸಭೆಗೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ ಶಿವಕುಮಾರ್, ಸಚಿವ ಎಚ್.ಕೆ.ಪಾಟೇಲ್, ಎಂ.ಬಿ. ಪಾಟೀಲ್, ಕೆ.ಎಚ್. ಮುನಿಯಪ್ಪ, ಬಿ.ಎಸ್. ಸುರೇಶ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರೊಂದಿಗೆ ಚರ್ಚಿಸಿದ್ದಾರೆ.

ಈ ವೇಳೆ ಅಧಿಕಾರಿಗಳಿಂದ ಯೋಜನೆ ಮತ್ತು ರೈತರ ಮನವೊಲಿಕೆಗೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಮಾಹಿತಿಯನ್ನು ಪಡೆದಿರುವ ಸಿಎಂ, ಇಂದು ರೈತರಿಗೆ ಯೋಜನೆಗಳ ಬಗ್ಗೆ ಮನವರಿಕೆ ಮಾಡಿ ಮಲವೊಲಿಸಲು ಮುಂದಾಗಲಿದ್ದಾರೆ.