ನಟ ದರ್ಶನ್ (Darshan) ಅಭಿನಯದ ಮುಂದಿನ ಸಿನಿಮಾ ಡೆವಿಲ್ (Devil) ಶೂಟಿಂಗ್ ಭರದಿಂದ ಸಾಗಿದೆ. ಈಗಾಗಲೇ ಚಿತ್ರತಂಡ ಸಂಪೂರ್ಣ ಟಾಕಿ ಪೋರ್ಷನ್ (Talking portion) ಶೂಟಿಂಗ್ ಮುಗಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಇದೀಗ ಡ್ಯಾನ್ಸ್ ಮತ್ತು ಫೈಟಿಂಗ್ ಸೀಕ್ವೆನ್ಸ್ ಶೂಟಿಂಗ್ ಗಳು ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ ಚಿತ್ರತಂಡ ದರ್ಶನ್ ಅಭಿಮಾನಿಗಳಿಗೆ ಬಿಗ್ ಅಪ್ಡೇಟ್ ನೀಡಿದೆ.

ಹೌದು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy murder case) ನಟ ದರ್ಶನ್ ಜೈಲುಪಾಲಾದ ನಂತರ ಡೆವಿಲ್ ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತುಹೋಗಿತ್ತು. ಆದ್ರೆ ದರ್ಶನ್ ಜಾಮೀನು ಪಡೆದ ನಂತರ ಮತ್ತೆ ಸಿನಿಮಾದ ಶೂಟಿಂಗ್ ಆರಂಭಾಸಲಾಗಿ ,ಇದೀಗ ಬಹುತೇಕ ಮುಕ್ತಾಯದ ಹಂತ ತಲುಪಿದೆ.

ಹೀಗಾಗಿ ಡೆವಿಲ್ ಸಿನಿಮಾ ಈಗ ಹೊಸ ಅಪ್ಡೇಟ್ ಕೊಟ್ಟಿದೆ. ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋವೊಂದನ್ನ ಚಿತ್ರತಂಡ ರಿಲೀಸ್ ಮಾಡಿದೆ. ಈ ವಿಡಿಯೋದಲ್ಲಿ ಡೆವಿಲ್ ಸಿನಿಮಾ ಚಿತ್ರೀಕರಣದ ಕೆಲ ತುಣುಕುಗಳನ್ನು ರಿಲೀಸ್ ಮಾಡಲಾಗಿದೆ.

ರಾಜಸ್ತಾನದ ಉದಯಪುರದಲ್ಲಿ ಸಿನಿಮಾದ ಕೆಲ ಭಾಗದ ಚಿತ್ರೀಕರಣ ನಡೆಸಲಾಗಿದ್ದು, ಈ ಶೂಟಿಂಗ್ ನಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೂಡಾ ಭಾಗಿಯಾಗಿದ್ದರು, ಜೊತೆಗೆ ನಟ ಅಚ್ಯುತ್‌ಕುಮಾರ್, ಶರ್ಮಿಳಾ ಮಾಂಡ್ರೆ, ನಾಯಕಿ ರಚನಾ ರೈ ಕೂಡಾ ಕಾಣಸಿಕ್ಕಿದ್ದಾರೆ.

ಇನ್ನು ಪ್ರಮುಖವಾಗಿ ಸಾಂಗ್ & ಕೆಲ ಸಾಹಸ ದೃಶ್ಯಗಳ ಚಿತ್ರೀಕರಣಕ್ಕಾಗಿ ಡೆವಿಲ್ ಟೀಮ್ ವಿದೇಶಕ್ಕೆ ಹಾರುವ ಪ್ಲ್ಯಾನ್ ಇದೆ. ದರ್ಶನ್ ಕೋರ್ಟ್‌ನಿಂದ ಅನುಮತಿ ಪಡೆದುಕೊಂಡಿದ್ದು, ಸದ್ಯದಲ್ಲಿಯೇ ವಿದೇಶಕ್ಕೆ ಡೆವಿಲ್ ಟೀಂ ಹಾರಲಿದ್ದು ದುಬೈ ಹಾಗೂ ಯುರೋಪ್‌ನಲ್ಲಿ ಚಿತ್ರೀಕರಣ ನಡೆಯಲಿದೆ.