ಆರ್‌ಎಸ್‌ಎಸ್ (RSS) ನಾಯಕ ದತ್ತಾತ್ರೇಯ ಹೊಸಬಾಳೆ (Dattatreya hosabale) ಸಂವಿಧಾನದಲ್ಲಿ ಜಾತ್ಯತೀತ (Secular) ಪದ ತೆಗೆಯಬೇಕು ಎಂಬ ಹೇಳಿಕೆ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಭಾರತದ ಸಂವಿಧಾನದಿಂದ ಜಾತ್ಯಾತೀತ, ಸಮಾಜವಾದಿ ಎಂಬ ಪದಗಳನ್ನು ತೆಗೆದುಹಾಕಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಕಿಡಿ ಹೊತ್ತಿಸಿದ್ದಾರೆ.

ದತ್ತಾತ್ರೇಯ ಹೊಸಬಾಳೆಯ ಅವರ ಈ ಹೇಳಿಕೆಯ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಕೇರಳಿ ಕೆಂಡವಾಗಿದ್ದು,ಸಚಿವ ಪ್ರಿಯಾಂಕ್ ಖರ್ಗೆ (Priyank kharge) ಸಂಘ ಪರಿವಾರ ಬ್ಯಾನ್ ಮಾಡುವ ಮಾತುಗಳನ್ನಾಡಿದ್ದಾರೆ.ಹೌದು,ಮುಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೆ ಆರ್‌ಎಸ್‌ಎಸ್ ಸಂಘಟನೆಯನ್ನು ಬ್ಯಾನ್ ಮಾಡುವ ಬಗ್ಗೆ ಚಿಂತನೆ ಮಾಡಲಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಹಿಂದೆಯೇ RSS ಸಂಘಟನೆಯನ್ನು ಎರಡು ಬಾರಿ ಬ್ಯಾನ್ ಮಾಡಿದ್ವಿ, ಆಗೆಲ್ಲ ಬಂದು ಕಾಲು ಹಿಡಿದುಕೊಂಡಿದ್ದರು. ಆದೇ ನಾವು ಬ್ಯಾನ್ ತೆಗೆದಿದ್ದೇ ತಪ್ಪಾಯ್ತು ಅಂತ ಕಿಡಿಕಾರಿದ್ದಾರೆ. ಹೀಗಾಗಿ ಮುಂದೆ ಆ ಬಗ್ಗೆ ಮತ್ತೆ ಯೋಚಿಸುತ್ತೇವೆ ಎಂದಿದ್ದಾರೆ.