ಕದಿರೇನಹಳ್ಳಿ ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ಜೂನ್ 29 ರಿಂದ ಜುಲೈ 2ರ ವರೆಗೆ ವಾಹನ ಸಂಚಾರವನ್ನು ನಿರ್ಬಂಧಸಲಾಗಿದೆ. ಈ ಬಗ್ಗೆ ಬನಶಂಕರಿ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಪರ್ಯಾಯ ಮಾರ್ಗಗಳು ಹೀಗಿವೆ.

ಪರ್ಯಾಯ ಮಾರ್ಗಗಳು:
ಡಾ. ಪುನೀತ್ ರಾಜಕುಮಾರ್ ರಿಂಗ್ ರಸ್ತೆಯ ಮೂಲಕ ಸಾರಕ್ಕಿ ಜಂಕ್ಷನ್ ಗೆ ಸಾಗಿ ಎಡತಿರುವು ಪಡೆದು ಕನಕಪುರ ರಸ್ತೆಯ ಮೂಲಕ ಸಾಗಬಹುದಾಗಿದೆ.
ಬಿಡಬ್ಲ್ಯೂಎಸ್ಎಸ್ಬಿ ಕಾಮಗಾರಿಯಿಂದಾಗಿ, ವಾಟರ್ ಟ್ಯಾಂಕ್ ಜಂಕ್ಷನ್‌ನಿಂದ ಕೃಪಾನಿಧಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ.

ಇನ್ನು ಮಾರತ್ತಹಳ್ಳಿ ಪೊಲೀಸ್ ಠಾಣೆಯ ಎದುರುಗಡೆಯ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ಕೆಲಸ ನಡೆಯುತ್ತಿರುವುದರಿಂದ, ಕಾಡುಬೀಸನಹಳ್ಳಿಯಿಂದ ಕಲಾಮಂದಿರದ ಕಡೆಗೆ ಮತ್ತು ಮಾರತ್ತಹಳ್ಳಿಯಿಂದ ಕಾಡುಬೀಸನಹಳ್ಳಿ ಕಡೆಗೆ ಸಂಚಾರ ನಿಧಾನವಾಗಿರಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.

ಟ್ಯಾನಿ ರಸ್ತೆಯಲ್ಲಿ ಚರಂಡಿ ಕಾಮಗಾರಿ ಕೆಲಸ ಕೂಡ ನಡೆಯುತ್ತಿರುವುದರಿಂದ ನಾಗವಾರ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ. ಅದೇ ರೀತಿಯಾಗಿ ಬಿಬಿಎಂಪಿ ಕಾಮಗಾರಿಯಿಂದಾಗಿ ಪೆರಿಯಾರ್ ವೃತ್ತದಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ.




