ಇಂದು ಅಂತರರಾಷ್ಟ್ರೀಯ 11 ನೇ ಯೋಗ (International yoga day) ದಿನಾಚರಣೆಯ ಹಿನ್ನಲೆ, ಮಾಜಿ ಪ್ರಧಾನಿ ದೇವೇಗೌಡರು (Ex prime minister Devegowda) ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ವರಿಗೂ ದುಭಾ ಕೋರಿದ್ದಾರೆ.

ಈ ಬಗ್ಗೆ ತಾವು ಯೋಗ ಮಾಡುತ್ತಿರುವ ಫೋಟೋ ಒಂದರ ಸಮೇತ ಪೋಸ್ಟ್ ಮಾಡಿರುವ ಹೆಚ್.ಡಿ ದೇವೇಗೌಡರು, ನಿಮ್ಮೆಲ್ಲರಿಗೂ ತುಂಬಾ ತೃಪ್ತಿಕರ ಮತ್ತು ಆರೋಗ್ಯಕರ ಅಂತರರಾಷ್ಟ್ರೀಯ ಯೋಗ ದಿನವನ್ನು ಹಾರೈಸುತ್ತೇನೆ. ನಿಮ್ಮೆಲ್ಲರನ್ನೂ ಯೋಗಾಭ್ಯಾಸ ಮಾಡಲು ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ.

ಇಷ್ಟು ದಿನಗಳು ನನ್ನನ್ನು ಮುನ್ನಡೆಸಿದ್ದು ಯೋಗ. ಇದು ನನ್ನ ಮನಸ್ಸು ಮತ್ತು ದೇಹ ಎರಡಕ್ಕೂ ಸಹಾಯ ಮಾಡಿದೆ..ಹೀಗಾಗ ಪ್ರತಿಯೊಬ್ಬರೂ ಇದರ ಲಾಭ ಪಡೆಯಬೇಕು ಎಂದು ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.